Header Ads

test

ಮದುವೆಗೆ ಆ ನವಜೋಡಿ ಹೇಗೆ ಆಹ್ವಾನಿಸಿದರೆಂದು ಗೊತ್ತಾದರೆ ಫಿದಾ ಆಗುತ್ತೀರ..! ಕ್ರಿಯೇಟಿವಿಟಿಗೆ ಹ್ಯಾಟ್ಸಾಫ್!

ಮದುವೆ ಎಂದರೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಏಳು ಹೆಜ್ಜೆ ಹಾಕುವುದಷ್ಟೇ ಮದುವೆಯಲ್ಲ. ಏಳೇಳು ಜನ್ಮಗಳ ಕಾಲ ಜತೆಯಾಗಿರುತ್ತೀನಿ ಎಂಬ ನಂಬಿಕೆಯೇ ಮದುವೆ. ಇನ್ನು ಸಾಂಪ್ರದಾಯಿಕ ಶೈಲಿಯ ಲಗ್ನಪತ್ರಿಕೆಗಳನ್ನು ನೋಡಿರುತ್ತೀರಿ. ಕೆಲವರು ಫ್ರೆಂಡ್ಸ್‌ಗೆ ಎಂತಲೇ ಕೆಲವು ಕಾರ್ಡ್‌ಗಳನ್ನು ಅಚ್ಚುಹಾಕಿಸುತ್ತಾರೆ. ಕೆಲವರಂತೂ ದುಬಾರಿ ಮದುವೆ ಆಮಂತ್ರಣ ಪತ್ರಿಕೆಗಳನ್ನು ಅಚ್ಚು ಹಾಕಿಸುತ್ತಾರೆ. ಸಿನಿಮಾ ತಾರೆಗಳ ಮದುವೆ ಆಮಂತ್ರಣ ಪತ್ರಿಕೆಗಳ ಬಗ್ಗೆ ಹೇಳುವುದೇ ಬೇಡ. ಆದರೆ ಈ ಜೋಡಿ ಒಂಚೂರು ಡಿಫರೆಂಟ್ ಪ್ರಯತ್ನ ಮಾಡಿದೆ ನೋಡಿ.




ಹೆಚ್ಚು ಮಂದಿ ಬಳಸುತ್ತಿರುವ ಆಪ್ಸ್‌ನಲ್ಲಿ ಫೇಸ್‍ಬುಕ್, ವಾಟ್ಸಾಪ್ ಮುಂದಿರುತ್ತವೆ. ಬಳಸುತ್ತಿರುವ ಜನಕ್ಕೆ ತಕ್ಕಂತೆ ವಾಟ್ಸಾಪ್ ಸಹ ಅದೆಷ್ಟೋ ರೀತಿಯ ಫೀಚರ್‌ಗಳನ್ನು ಬಳಕೆಗೆ ತಂದಿದೆ. ಬೆಳಗ್ಗೆ ಎದ್ದ ಕೂಡಲೆ ಗುಡ್ ಮಾರ್ನಿಂಗ್‌ನಿಂದ ಆರಂಭವಾಗಿ, ರಾತ್ರಿ ಮಲಗುವಾಗ ಗುಡ್ ನೈಟ್ ವರೆಗೂ... ಹಬ್ಬ ಬಂದರೂ ಏನಾದರೂ ವಿಶೇಷವಿದ್ದರೂ ಪ್ರತಿಯೊಂದಕ್ಕೂ ಸ್ನೇಹಿತರಿಗೆ, ಬಂಧುಗಳಿಗೆ ಶುಭಾಶಗಳನ್ನು ಕಳುಹಿಸಲು ವಾಟ್ಸಾಪ್ ಬಳಸುತ್ತಿರುತ್ತೇವೆ.

ಅಂತಹ ವಾಟ್ಸಾಪ್‌ನ್ನು ಒಂದು ನವಜೋಡಿ ಭಿನ್ನವಾಗಿ ಬಳಸಿಕೊಂಡರು. ಮದುವೆ ಆಮಂತ್ರಣ ಪತ್ರಿಕೆಯನ್ನು ಒಬ್ಬೊಬ್ಬರು ಒಂದೊಂದು ರೀತಿ ಮಾಡಿಸುತ್ತಾರೆ. ಆದರೆ ಆ ಜೋಡಿ ಮಾತ್ರ ಕ್ರಿಯೇಟೀವ್ ಆಗಿ ವಾಟ್ಸಾಪ್ ಸ್ಟೈಲ್‌ನಲ್ಲಿ ಅಚ್ಚು ಹಾಕಿಸಿದರು. ಸದ್ಯಕ್ಕೆ ಇವರ ಮದುವೆ ಕಾರ್ಡ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ..

ಸ್ವತಃ ವೆಬ್‍ಡಿಸೈನರ್ ಆಗಿದ್ದ ಕಾರಣ ವಾಟ್ಸಾಪ್ ರೂಪದಲ್ಲಿ ತನ್ನ ಮದುವೆ ಕಾರ್ಡನ್ನು ಡಿಸೈನ್ ಮಾಡಿದ ಸೂರತ್ ಮೂಲದ ಚಿಂತನ್ ಎಂಬ ವ್ಯಕ್ತಿ. ಗುಜರಾತಿ, ಇಂಗ್ಲಿಷ್ ಭಾಷೆಗಳಲ್ಲಿ ನಾಲ್ಕು ಪುಟಗಳಲ್ಲಿ ಕಾರ್ಡನ್ನು ಪ್ರಿಂಟ್ ಹಾಕಿಸಿದ್ದಾರೆ.

ಸ್ಟೇಟಸ್ ಬಳಿ ತಾನು, ತನ್ನ ಭಾವಿ ಪತ್ನಿ ಅರ್ಜೂ ಜೊತೆಯಾಗಿ ಇರುವ ಫೋಟೋವನ್ನು ಪೋಸ್ಟ್ ಮಾಡಿ. ನಮ್ಮ ಮದುವೆಗೆ ಬಾರದಿದ್ದರೆ ನಮ್ಮ ವಾಟ್ಸಾಪ್‌ನಲ್ಲಿ ನಿಮ್ಮನ್ನು ಬ್ಲಾಕ್ ಮಾಡುತ್ತೇವೆ ಎಂದು ಪ್ರಿಂಟ್ ಹಾಕಿಸಿದರು. ವಾಟ್ಸಾಪ್ ಲೋಗೋ ಮೇಲೆ ಗಣಪತಿ ಚಿತ್ರವನ್ನು ಮುದ್ರಿಸಿದರು. ಆ ವೆಡ್ಡಿಂಗ್ ಕಾರ್ಡ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಕಾರಣ ನೇಟಿಜನ್ಸ್ ಫಿದಾ ಆಗಿ ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನೀವೂ ಒಮ್ಮೆ ಒಂದು ಲುಕ್ ಹಾಕಿ.

No comments