Header Ads

test

ಬುಲ್ಲೇಟ್ ಮೇಲೆ ಬಂದ ಮದುಮಗಳು.ಪ್ರತಿಯೊಬ್ಬ ರೈತನೂ ತಲೆ ಎತ್ತುವಂತೆ ಮಾಡಿದ ಈ ಯುವತಿಗೆ ಹ್ಯಾಟ್ಸಾಪ್ಹೇಳಬೇಕಾದದ್ದೇ..!

ಯುವತಿಯರು ಇತ್ತೀಚೆಗೆ ತುಂಬಾ ಫಾಸ್ಟ್ ಆಗಿದ್ದಾರೆ ಎನ್ನಲು ಬಹಳಷ್ಟು ಉದಾಹರಣೆಗಳನ್ನು ನೀಡಬಹುದು. ಆದರೆ ಪೇಟೆ ಹುಡುಗೀರು ಮಾತ್ರ ಅಭಿವೃದ್ಧಿಯಲ್ಲಿ ಮುನ್ನುಗ್ಗುತ್ತಿದ್ದಾರೆ, ಅವರಲ್ಲಿ ಮಾತ್ರ ಪಾಶ್ಚಾತ್ಯ ಸಂಸ್ಕೃತಿ ಇಣುಕಿದೆ ಎಂದು ನಾವು ಇಷ್ಟು ಕಾಲ ಭಾವಿಸಿದ್ದೆವು. ಆದರೆ ರೈತ ಕುಟುಂಬದಲ್ಲಿ ಜನಿಸಿದ ಯುವತಿಯೊಬ್ಬಳು ನಾವು ಯಾವುದರಲ್ಲೂ ಕಮ್ಮಿ ಇಲ್ಲ ಎಂದು, ದೇಶಕ್ಕೆ ಅನ್ನ ಹಾಕುವ ರೈತನ ಹೊಟ್ಟೆಯಲ್ಲಿ ಹುಟ್ಟಿದ ನಾವು ಅದೆಷ್ಟೋ ಉನ್ನತ ಮಟ್ಟಕ್ಕೆ ಏರಿದ್ದು, ಅದೆಷ್ಟೋ ಆನಂದವಾಗಿ ಜೀವನ ಕಳೆಯುತ್ತಿದ್ದೀವಿ ಎಂದು ನಿರೂಪಿಸಲು ದೊಡ್ಡ ಕೆಲಸವನ್ನೇ ಮಾಡಿದರು. ಎಲ್ಲರ ದೃಷ್ಟಿಯನ್ನು ಆಕರ್ಷಿಸಲು ಆಕೆ ಮದುವೆಯನ್ನು ಆಯ್ಕೆ ಮಾಡಿಕೊಂಡಳು.


ತನ್ನ ಮದುವೆ ಸಂದರ್ಭದಲ್ಲಿ ಮನೆಯಿಂದ ಫಂಕ್ಷನ್ ಹಾಲ್ ವರೆಗೂ ಸುಮಾರು ಐದೂವರೆ ಕಿ.ಮೀವರೆಗೆ ಗಾಡಿ ಓಡಿಸುತ್ತಾ ಬಂದರು. ಮಾಮೂಲಿಯಾಗಿ ಅಲ್ಲ. ಮದುಮಗಳಂತೆ ಸಿಂಗಾರವಾಗಿ ಬಳಿಕ ಬುಲೆಟ್ ಹತ್ತಿ. ಕೆಂಪಗಿನ ರೇಷ್ಮೆ ಸೀರೆ, ಕಾಲಿಗೆ ಮದರಂಗಿ, ಮೊಗ್ಗಿನ ಜಡೆ, ಕೈತುಂಬ ಬಳೆ, ಮುಖಕ್ಕೆ ಸಿಂಧೂರದಂತಹವನ್ನು ಧರಿಸಿ ಬುಲೆಟ್ ಮೇಲೆ ಆಕೆ ಸವಾರಿ ಮಾಡುತ್ತಿದ್ದರೆ ದಾರಿ ಉದ್ದಕ್ಕೂ ಆಕೆಯನ್ನು ನೋಡಿದವರು ಮೂಗಿನ ಮೇಲೆ ಬೆರಳಿಟ್ಟರು. ಚಿಕ್ಕಂದಿನಿಂದ ಗಾಡಿ ಓಡಿಸುವುದು ಅಭಿರುಚಿಯಂತೆ ಇರುವ ಈ ಯುವತಿ ತಂದೆ ಪ್ರೋತ್ಸಾಹದಿಂದ ಬುಲೆಟ್ ಓಡಿಸುವುದನ್ನು ಕಲಿತಳು. ಆಗಾಗ ಬುಲೆಟ್ ಓಡಿಸುವ ಈ ಯುವತಿ ಇತ್ತೀಚೆಗೆ ಮದುಮಗಳಾದ ಬಳಿಕ ಕಾರಿನಲ್ಲಿ ಬರದಂತೆ ತನ್ನ ತಂದೆಯ ಬುಲೆಟ್ ಮೇಲೆ ಬಂದಳು.

ಮದುವೆ ಬಳಿಕ ಮದುಮಗನನ್ನು ಸಹ ಬುಲೆಟ್ ಮೇಲೆ ಕೂರಿಸಿಕೊಂಡು ಹೋಗಿದ್ದರೆ ಇನ್ನಷ್ಟು ಹೈಲೈಟ್ ಆಗಿರುತ್ತಿತ್ತು. ಆದರೆ ಆ ರೀತಿ ಆಗಲಿಲ್ಲ. ಮದುವೆ ಮಂಟಪಕ್ಕೆ ಬುಲೆಟ್ ಮೇಲೆ ಬರುತ್ತೇನೆ ಎಂದು ಹೇಳಿದ್ದಕ್ಕೆ ಆ ವರ ಗ್ರೀನ್ ಸಿಗ್ನಲ್ ಕೊಟ್ಟ ಕಾರಣ ಆಕೆ ಈ ರೀತಿ ಮಾಡಿದಳು. ಬಂಧುಗಳು ಮಾತ್ರ ಆಕೆಯನ್ನು ನೋಡಿ ನಿಬ್ಬೆರಗಾದರು. ಈ ರೀತಿ ಏನು ಎಂದು ಅವಾಕ್ಕಾದರು.

ಮದುಮಗಳು ಸಂಪ್ರದಾಯದಂತೆ ಯಾವುದಾದರೂ ಕುದುರೆ ಮೇಲೋ, ಆನೆ ಅಂಬಾರಿ ಮೇಲೋ, ಪಲ್ಲಕಿಯಲ್ಲೇ ಅಥವಾ ಕಾರಿನಲ್ಲೋ ಬರಬೇಕೆ ಹೊರತು ಈ ರೀತಿ ಬುಲೆಟ್ ಮೇಲೆ ಬರುವುದು ಏನು ಎಂದು ಬಾಯಿಗೆ ಬಂದಂತೆ ಆಡಿಕೊಂಡರು. ಆದರೆ ಆ ಯುವತಿ ಅದಕ್ಕೆಲ್ಲಾ ಕ್ಯಾರೆ ಎನ್ನಲಿಲ್ಲ. ಆ ಯುವತಿ ಮಾತ್ರ ತನ್ನ ತಂದೆ ಗೌರವವನ್ನು ಹೆಚ್ಚಿಸಲು ಈ ರೀತಿ ಮಾಡಿದೆ ಎಂದಿದ್ದಾರೆ. ರೈತನ ಮಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದಿದ್ದಾರೆ.

No comments