Header Ads

test

ಫಿಂಗರ್ ಪ್ರಿಂಟ್ ಇಲ್ಲದ ಮೊಬೈಲ್'ಗಳಿಗೆ ಈ ರೀತಿ ಫಿಂಗರ್ ಲಾಕ್ ಇಟ್ಟುಕೋಬಹುದು.

ಈಗ ಬರುತ್ತಿರುವ ಹೊಸ ಬೇರೆ-ಬೇರೆ ರೀತಿಯ ಮೊಬೈಲ್'ಗಳಿಗೆ ಫಿಂಗರ್'ಪ್ರಿಂಟ್ ಸೆಕ್ಯೂರಿಟಿ ಆಪ್ಷನ್ ಬರುತ್ತಿದೆ. ಆದರೆ ಕೆಲವು ಆ್ಯಂಡ್ರಾಯಿಡ್ ಮೊಬೈಲ್'ಗಳಲ್ಲಿ ಈ ಇಲ್ಲ. ಆ ರೀತಿಯ ಫೋನ್'ಗಳಿಗೆ ಫಿಂಗರ್'ಪ್ರಿಂಟನ್ನು ಹೇಗೆ ಮಾಡಿಕೊಳ್ಳಬಹುದೋ ಈಗ ನೋಡೋಣ.ಮೊಬೈಲಲ್ಲಿನ ಪ್ಲೇ-ಸ್ಟೋರ್'ಗೆ ಹೋಗಿ ಅಲ್ಲಿ Ice Unlock FingerPrint ಅನ್ನೋ ಯ್ಯಾಪ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಬೇಕು. ಈಗ ಆ ಆ್ಯಪ್ ಓಪನ್ ಮಾಡಿ ಅಲ್ಲಿರುವ ಟರ್ಮ್ಸ್ ಅಂಡ್ ಕಂಡೀಷನ್ಸ್'ನ್ನು ಅಕ್ಸೆಪ್ಟ್ ಮಾಡಬೇಕು.. ಅಲ್ಲಿ ಕಂಟಿನ್ಯೂ ಎಂದು ಬರುತ್ತದೆ, ಆದರ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ಪಿನ್ ನಂಬರ್ ಕೇಳುತ್ತದೆ.. ಯಾಕಂದ್ರೆ ಒಮ್ಮೊಮ್ಮೆ ಫಿಂಗರ್'ಪ್ರಿಂಟ್ ಬಾರದಿದ್ರೆ ಈ ಪಿನ್ ನಂಬರ್ ಕೊಟ್ಟು ಲಾಕ್ ತೆಗೆಯಬಹುದು..ಈಗ ಅಲ್ಲಿ ಯೂಸರ್ ಗೈಡ್ ಅನ್ನೋದು ಕಾಣಬಹುದು,ಅಲ್ಲಿ ಡು ನಾಟ್ ಶೋ ದಿಸ್ ಅನ್ನೋದನ್ನ ಓಕೆ ಮಾಡಬೇಕು.



ನಂತರ ಕಂಟಿನ್ಯೂ ಅನ್ನೋದು ಬರುತ್ತೆ, ಅದರ ಮೇಲೆ ಕ್ಲಿಕ್ ಮಾಡಬೇಕು.. ನಂತರ ಮತ್ತೇ ಎರಡು ಆಪ್ಷನ್ ಬರುತ್ತದೆ, ರೈಟ್ ಹ್ಯಾಂಡ್ , ಲೆಫ್ಟ್ ಹ್ಯಾಂಡ್..ಆಗ ಅಲ್ಲಿ ನಮಗೆ ಇಷ್ಟ ಬಂದ ಕೈನ ಫಿಂಗರ್'ನ್ನು ಕೊಡಬೇಕು. ಅಲ್ಲಿ ಫಿಂಗರ್ ಕೊಟ್ಟ ತಕ್ಷಣವೇ ಅದನ್ನು 7 ಬಾರಿ ಫೋನ್ ಸ್ಕ್ಯಾನ್ ಮಾಡುತ್ತದೆ.. ಹಾಗೆ ಮಾಡಿದ ನಮ್ಮ ಫಿಂಗರ್ ಬ್ಲೂ ಪ್ರಿಂಟ್'ನ್ನು ಫೋನಲ್ಲಿ ಸ್ಟೋರ್ ಮಾಡಿಕೊಳ್ಳುತ್ತದೆ. ಈಗ ಯೂಸ಼್ ದಿಸ್ ಫಿಂಗರ್ ಪ್ರಿಂಟ್'ನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ಅಲ್ಲಿ ಆನ್ ಆಪ್ಷನ್ ಅನ್ನು ಓಕೆ ಮಾಡ್ಕೊಳ್ಳಿ. ಈಗ ಲಾಕ್ ತೆರೆಯುವುದಕ್ಕೆ ನಾವು ಅಲ್ಲಿ ಕೊಟ್ಟ ಫಿಂಗರ್'ನ್ನು ಕ್ಯಾಮೆರಾದ ಹತ್ತಿರ ಇಟ್ಟ ತಕ್ಷಣ ಲಾಕ್ ಓಪನ್ ಆಗುತ್ತದೆ. ಈ ವಿಧವಾಗಿ ಫಿಂಗರ್'ಪ್ರಿಂಟನ್ನು ಸೆಟ್ ಮಾಡ್ಕೋಬಹುದು. ಇದನ್ನು ವಿವರಣಾತ್ಮಕವಾಗಿ ವಿಜುವಲೈಜೇ಼ಷನ್ ತಿಳಿದುಕೊಂಡು ಫಿಂಗರ್'ಲಾಕನ್ನು ಸುಲಭವಾಗಿ ಸೆಟ್ ಮಾಡಿಕೊಳ್ಳಬೇಕೆಂದರೇ ಕೆಳಗಿರುವ ವೀಡಿಯೋ ನೋಡಿ ...

No comments