Header Ads

test

ಮಾನವೀಯತೆ ಮೆರೆದ ಸಬ್ ಕಲೆಕ್ಟರ್, ಗಾಯಾಳುಗಳನ್ನು ತನ್ನ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ ಯುವ ಐಎಎಸ್..!

ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಯುವ ಐಎಎಸ್ ಅಧಿಕಾರಿ ಸಕಾಲದಲ್ಲಿ ಸ್ಪಂದಿಸಿ ತನ್ನ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಈ ಘಟನೆ ಆಂಧ್ರಪ್ರದೇಶದ ಗೊಲ್ಲನಪಲ್ಲಿ ಎಂಬಲ್ಲಿ ನಡೆದಿದೆ. ವಿವರಗಳನ್ನು ನೋಡುವುದಾದರೆ.

ಪುರುಷೋತ್ತಮ ಪಟ್ಟಣ ಗ್ರಾಮಕ್ಕೆ ಸೇರಿದ ವೇಮೂರಿ ರಾಮಕೋಟಯ್ಯ (29) ಆಗಿರಿಪಲ್ಲಿಯಿಂದ ಐದು ತಿಂಗಳ ಗರ್ಭಿಣಿಯಾದ ತನ್ನ ಪತ್ನಿ ವರಲಕ್ಷ್ಮಿ (23), ಮೂರು ವರ್ಷದ ಮಗಳ ಜತೆಗೆ ಬೈಕ್ ಮೇಲೆ ಮನೆಗೆ ಹೊರಟ. ಮಾರ್ಗದ ನಡುವೆ ಗೊಲ್ಲನಪಲ್ಲಿ ಬಳಿ ನಾಲ್ಕು ರಸ್ತೆ ಸೇರುವ ಬಳಿ ಅತಿ ವೇಗವಾಗಿ ಬಂದ ಇನ್ನೊಂದು ಬೈಕನ್ನು ಡಿಕ್ಕಿ ಹೊಡೆಯಿತು.



ಈ ಅಪಘಾತದಲ್ಲಿ ರಾಮಕೋಟಯ್ಯ, ವರಲಕ್ಷ್ಮಿಗೆ ತೀವ್ರ ಗಾಯಗಳಾದವು. ಅವರ ಮಗಳಿಗೆ ಸ್ವಲ್ಪ ಗಾಯಗಳಾದವು. ಅದೇ ಸಮಯದಲ್ಲಿ ವಿಜಯವಾಡದಿಂದ ಗನ್ನವರಂ ಮುಖಾಂತರ ಸೂಜಿವೀಡುಗೆ ಹೋಗುತ್ತಿದ್ದ ಜಿಲ್ಲಾಧಿಕಾರಿ ಸ್ನಪಿಲ್ ದಿನಕರ್ ರಸ್ತೆ ಮೇಲೆ ಬಿದ್ದಿದ್ದ ಗಾಯಾಳುಗಳನ್ನು ಗಮನಿಸಿ ತನ್ನ ಸಿಬ್ಬಂದಿಯೊಂದಿಗೆ ಅವರಿಗೆ ಸಹಾಯ ಮಾಡಿದ್ದಾರೆ. ಗಾಯಗೊಂಡು ನರಳುತ್ತಿದ್ದ ಗಾಯಾಳುಗಳನ್ನು ಸಬ್ ಕಲೆಕ್ಟರ್ ತನ್ನ ಕಾರಿನಲ್ಲಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಬಳಿಕ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬುಲೆನ್ಸ್‌ನಲ್ಲಿ ವಿಜಯವಾಡ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೂಕ್ತ ಸಮಯದಲ್ಲಿ ಪ್ರತಿಕ್ರಿಯಿಸಿ ಗಾಯಾಳುಗಳ ಮೇಲೆ ಮಾನವೀಯತೆ ತೋರಿಸಿದ ಸಬ್ ಕಲೆಕ್ಟರ್ ಕ್ರಮವನ್ನು ಎಲ್ಲರೂ ಅಭಿನಂದಿಸುತ್ತಿದ್ದಾರೆ.

ಸಾಮಾನ್ಯವಾಗಿ ಅಧಿಕಾರಿಗಳು ಎಂದರೆ ತಾವಾಯಿತು ತಮ್ಮ ಕೆಲಸ ಆಯಿತು ಎಂದುಕೊಳ್ಳುವವರೇ ಹೆಚ್ಚು. ಬೆರಳೆಣಿಕೆಯಷ್ಟು ಮಂದಿ ಮಾತ್ರ ಈ ರೀತಿಯ ಕೆಲಸಕ್ಕೆ ಕೈಹಾಕಿ ಮಾನವೀಯತೆ ಮೆರೆಯುತ್ತಾರೆ. ಅದರಲ್ಲೂ ಅಪಘಾತದಂತಹ ಘಟನೆಗಳಲ್ಲಿ ತಮಗ್ಯಾಕೆ ಆ ಉಸಾಬರಿ ಎಂದುಕೊಳ್ಳುವವರೇ ಅಧಿಕ. ಜೀವ ಹೋಗುತ್ತಿದ್ದರೂ ನೋಡದೆ ಹೋಗುವ ಅದೆಷ್ಟೋ ಮಂದಿ ಇರುತ್ತಾರೆ. ಆದರೆ ಅದೆಲ್ಲವನ್ನೂ ಮೀರಿ ದಿನಕರ್ ಎಲ್ಲರನ್ನೂ ಕಾಪಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದಿನಕರ್ ಅವರಿಗೆ ನೀವೂ ಅಭಿನಂದನೆ ತಿಳಿಸಿ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದರೆ ಸಹಾಯ ಮಾಡಿದವರ ವಿರುದ್ಧ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಳ್ಳುವಂತಿಲ್ಲ ಎಂದು ಕೋರ್ಟ್ ಅಭಯ ನೀಡಿದೆ. ಹಾಗಾಗಿ ನೀವೂ ಅಷ್ಟೇ ಅಂತಹ ಪರಿಸ್ಥಿತಿಯಲ್ಲಿರುವವರನ್ನು ಕಂಡರೆ ಸಹಾಯ ಮಾಡಿ, ಜೀವ ಉಳಿಸಿ. ನಿಮಗೂ ಆ ಪುಣ್ಯ ಸಿಗುತ್ತದೆ.

No comments