ಆತನ ಲಗೇಜ್ ಬಸ್ನಲ್ಲಿ ಮಿಸ್ ಆಯಿತು. ಕ್ಯಾಬ್ ಡ್ರೈವರ್ ಸಹಾಯದಿಂದ ಆತ ಬಸ್ಸನು ಹಿಡಿದನೇ..? ರಿಯಲ್ ಸ್ಟೋರಿ..!
"ನಡುರಾತ್ರಿ 2 ಗಂಟೆಗಳಾಗುತ್ತಿದೆ. ಆಗತಾನೆ ಹೈದರಾಬಾದ್ನಿಂದ ಬಂದಿದ್ದೆ. ಅಲ್ಲಿ ಒಂದು ಕಾಂಪಿಟೇಷನ್ನಲ್ಲಿ ಭಾಗವಹಿಸಿದ್ದೆ. ಬೆಂಗಳೂರು ತಲುಪುವ ಹೊತ್ತಿಗೆ ರಾತ್ರಿ 2 ಗಂಟೆಗಳಾಗಿತ್ತು. ಬೆಂಗಳೂರು ಕಾರ್ಪೊರೇಷನ್ ಸರ್ಕಲ್ನಲ್ಲಿ ಬಸ್ಸು ಇಳಿದೆ. ಅಲ್ಲಿಂದ ಕಾಲೇಜಿನ ಹಾಸ್ಟೆಲ್ಗೆ ಹೋಗಬೇಕಾಗಿತ್ತು. ಅಷ್ಟರಲ್ಲಿ ಕ್ಯಾಬ್ ಬುಕ್ ಮಾಡಿದೆ. ಕ್ಯಾಬ್ ಸ್ವಲ್ಪ ಹೊತ್ತಿಗೆ ಬರುತ್ತದೆ ಎಂದಾಗ, ಆಗಲೇ ನನಗೆ ಗೊತ್ತಾಗಿದ್ದು, ನನ್ನ ಲಗೇಜು ಮಿಸ್ ಆಗಿದೆ ಎಂದು. ಅದರಲ್ಲಿ ನನಗೆ ತುಂಬಾ ಮುಖ್ಯವಾದ ವಸ್ತುಗಳು ಇದ್ದವು. ಪರ್ಸ್, ಹಣ, ಕಾರ್ಡುಗಳೆಲ್ಲಾ ಅದರಲ್ಲಿದ್ದವು. ಹಾಗಾಗಿ ಸ್ವಲ್ಪ ಭಯ, ಗಾಬರಿ ಆಯಿತು. ಸ್ವಲ್ಪವೂ ತಡ ಮಾಡದೆ ಆ ಬಸ್ ಟ್ರಾವೆಲ್ಸ್ ಕಸ್ಟಮರ್ ಕೇರ್ಗೆ ಫೋನಾಯಿಸಿದೆ. ಡ್ರೈವರ್ ನಂಬರ್ ಕೊಟ್ಟರು. ಬಸ್ ಡ್ರೈವರ್ಗೆ ಕೂಡಲೆ ಕರೆ ಮಾಡಿದೆ. ಆತನಿಗೆ ತೆಲುಗು ಮಾತ್ರ ಬರುತ್ತಿತ್ತು. ನನಗೆ ಹಿಂದಿ ಮಾತ್ರ ಗೊತ್ತು. ಆದರೂ ಮಾತನಾಡಿದೆ. ಇದರಿಂದ ನನಗೆ ಗೊತ್ತಾಗಿದ್ದೇನೆಂದರೆ.. ಆತ ನನ್ನನ್ನು ಕಾರ್ಪೊರೇಷನ್ ಸರ್ಕಲ್ನಲ್ಲಿ ಡ್ರಾಪ್ ಮಾಡಿದ ಬಳಿಕ ಸುಮಾರು 25 ಕಿ.ಮೀ ದೂರ ಹೊರಟು ಹೋಗಿದ್ದ.
ಇನ್ನು ನನ್ನ ಲಗೇಜ್ ಸಿಗುವುದು ಅಸಾಧ್ಯ ಅನ್ನಿಸಿತು. ನನ್ನೊಬ್ಬನಿಗಾಗಿ ಆ ಡ್ರೈವರ್ ಬಸ್ಸನ್ನು ಹಿಂದಕ್ಕೆ ತರಲ್ಲ. ಅವರಿಗೆ ಇತರೆ ಪ್ರಯಾಣಿಕರು ಮುಖ್ಯ. ಇನ್ನು ನನ್ನ ಲಗೇಜ್ ಸಿಗಲ್ಲ ಬಿಡು ಎಂದುಕೊಂಡೆ. ಆ ರೀತಿ ಎಂದುಕೊಳ್ಳುತ್ತಿರುವಾಗಲೇ ಕ್ಯಾಬ್ ಬಂತು. ಅದೂ ಷೇರಿಂಗ್ ಕ್ಯಾಬ್. ನನ್ನೊಂದಿಗೆ ಇನ್ನೊಬ್ಬ ವ್ಯಕ್ತಿ ಇನ್ನಷ್ಟು ದೂರದಲ್ಲಿ ಪಿಕಪ್ ಮಾಡಿಕೊಳ್ಳಬೇಕಾಗಿತ್ತು. ವಿಷಯವನ್ನು ಕ್ಯಾಬ್ ಡ್ರೈವರ್ಗೆ ತಿಳಿಸಿದೆ. ಕೂಡಲೆ ಬಸ್ಸನ್ನು ಕ್ಯಾಚ್ ಮಾಡೋಣ ಎಂದ. ಆತನಿಗೆ ತೆಲುಗು ಗೊತ್ತಿತ್ತು. ಹಾಗಾಗಿ ಕೂಡಲೆ ಬಸ್ ಡ್ರೈವರ್ಗೆ ಫೋನ್ ಮಾಡಿ ಕ್ಯಾಬ್ ಡ್ರೈವರ್ ಜತೆಗೆ ಮಾತನಾಡಿಸಿದೆ. ಅದಾಗಲೆ ಬಸ್ 35 ಕಿಲೋ ಮೀಟರ್ ದೂರದಲ್ಲಿತ್ತು. ತಡ ಮಾಡಿದರೆ ಬಸ್ ಮಿಸ್ ಆಗುತ್ತದೆ ಎಂದು ಹೇಳಿ ಕ್ಯಾಬ್ ಡ್ರೈವರ್ ವೇಗವಾಗಿ ಕಾರನ್ನು ಓಡಿಸಿದ. ನಡು ನಡುವೆ ಆತ ಬಸ್ ಡ್ರೈವರ್ ಜತೆಗೆ ಟಚ್ ನಲ್ಲಿದ್ದ.
ಕೊನೆಗೂ ಬಸ್ ಸಿಕ್ಕಿತು. ಅದಾಗಲೆ ಅದು ತುಂಬಾ ದೂರ ಹೊರಟು ಹೋಗಿತ್ತು. ಅದರಲ್ಲಿ ಹತ್ತಿ ಲಗೇಜ್ ತೆಗೆದುಕೊಂಡೆ. ಕಾಲೇಜು ಹಾಸ್ಟೆಲ್ಗೆ ಕ್ಯಾಬ್ನಲ್ಲಿ ಹೋದೆ. ಕ್ಯಾಬ್ ಡ್ರೈವರ್ ಕೇವಲ ಕಾರ್ಪೊರೇಷನ್ ಸರ್ಕಲ್ನಿಂದ ಕಾಲೇಜು ಹಾಸ್ಟೆಲ್ಗೆ ಎಷ್ಟಾಗುತ್ತದೋ ಅಷ್ಟು ಮೊತ್ತವನ್ನು ತೆಗೆದುಕೊಂಡ. ಬಸ್ಗಾಗಿ ಹೋಗಿ ಬಂದ ದೂರಕ್ಕೆ ಆತ ಚಾರ್ಜ್ ಮಾಡಲಿಲ್ಲ. ನಿಜವಾಗಿ ನಡುರಾತ್ರಿಯಲ್ಲಿ 2 ಗಂಟೆ ಸಮಯದಲ್ಲಿ ಆತ ನನಗಾಗಿ ದೇವರೇ ಕಳುಹಿಸಿದ ವ್ಯಕ್ತಿ ಅಂದುಕೊಂಡೆ. ಅಂತಹ ಡ್ರೈವರ್ಗೆ ಕೃತಜ್ಞತೆಗಳನ್ನು ಹೇಳಿದೆ. ಥ್ಯಾಂಕ್ಸ್ ಹೇಳಿದೆ... ಆತ ನಗುತ್ತಾ ಮುಂದೆ ಹೊರಟು ಹೋದ."
— ಬೆಂಗಳೂರಿನಲ್ಲಿ ವೈಭವ್ ವ್ಯಾಸ್ ಎಂಬ ವ್ಯಕ್ತಿಗೆ ಎದುರಾದ ಅನುಭವವೇ ಈ ಘಟನೆ. ರಿಯಲ್ ಸ್ಟೋರಿ..!

Post a Comment