Header Ads

test

ಮನೆಯಲ್ಲಿ, ಕಚೇರಿಯಲ್ಲಿ ವಿನಾಯಕನ ವಿಗ್ರಹವನ್ನು ಇಡುವಾಗ ಪಾಲಿಸಬೇಕಾದ ನಿಯಮಗಳು.

ವಿನಾಯಕನ ವಿಗ್ರಹವನ್ನು ಬಹಳಷ್ಟು ಮಂದಿ ಭಕ್ತರು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಬಹಳಷ್ಟು ಮಂದಿಗೆ ಮನೆಯಲ್ಲಿ ಯಾವ್ಯಾವ ಪ್ರದೇಶದಲ್ಲಿ ಯಾವ ರೀತಿಯ ಗಣೇಶನ ವಿಗ್ರಹ ಇಟ್ಟರೆ ಧನವಂತರಾಗುವುದರ ಜತೆಗೆ ಆನಂದ, ವಿಜಯ ಸಿದ್ಧಿಸುತ್ತದೆ ಎಂಬ ವಿಷಯಗಳು ಅಷ್ಟಾಗಿ ಗೊತ್ತಿರಲ್ಲ. ಆದಕಾರಣ ನೀವು ಯಾವ್ಯಾವ ಪ್ರದೇಶಗಳಲ್ಲಿ ವಿಘ್ನೇಶ್ವರ ವಿಗ್ರಹ ಇಡಬೇಕೆಂದು ಗೊತ್ತಾಗದಿದ್ದರೆ, ವಾಸ್ತು ಆಧಾರವಾಗಿ ಕೆಳಗೆ ತಿಳಿಸಿದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ ಆಯಾ ಪ್ರದೇಶಗಳಲ್ಲಿ ವಿಗ್ರಹವನ್ನು ಇಟ್ಟು ಸಕಲ ಸೌಲಭ್ಯಗಳನ್ನೂ ಪಡೆಯಿರಿ.




* ಯಾರು ಆನಂದವನ್ನು, ಶಾಂತಿಯನ್ನು ಮತ್ತು ಸಿರಿ ಸಂಪತ್ತನ್ನು ಬಯಸುತ್ತಾರೋ ಅಂತಹ ವ್ಯಕ್ತಿಗಳು ಬಿಳಿ ವಿನಾಯಕನನ್ನು ಮನೆಗೆ ತರಬೇಕು. ಬಿಳಿ ವಿನಾಯಕ ಚಿತ್ರವನ್ನು ಕಡ್ಡಾಯವಾಗಿ ಮನೆಯಲ್ಲಿ ಇಟ್ಟುಕೊಳ್ಳಬೇಕು.

* ಯಾರು ಸ್ವತಃ ಅಭಿವೃದ್ಧಿ ಬಯಸುತ್ತಾರೋ, ಅಂತಹ ವ್ಯಕ್ತಿಗಳು ಸಿಂಧೂರ ವರ್ಣದ ವಿನಾಯಕನನ್ನು ಮನೆಗೆ ತಂದು ಪ್ರತಿ ನಿತ್ಯ ಪೂಜಿಸಬೇಕು.

* ಮನೆಯಲ್ಲಿ ಪೂಜಿಸಿಕೊಳ್ಳಲು ಕುಳಿತ ಭಂಗಿಯಲ್ಲಿರುವ ಗಣೇಶನನ್ನು ತಂದರೆ ತುಂಬಾ ಒಳ್ಳೆಯದು. ಕುಳಿತ ವಿನಾಯಕನನ್ನು ನಮ್ಮ ಮನೆಯಲ್ಲಿ ಇಟ್ಟುಕೊಳ್ಳುವ ಮೂಲಕ ಅದೃಷ್ಟ ಮತ್ತು ಯಶಸ್ಸು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುತ್ತದೆ.

* ಕುಳಿತ ವಿನಾಯಕನ ಸೊಂಡಿಲು ಎಡಗಡೆಗೆ ಭಾಗಿರುವ ವಿಗ್ರಹವನ್ನು ಮನೆಗಳಲ್ಲಿ ಇಟ್ಟುಕೊಳ್ಳಬೇಕು (ಎಡಮುರಿ ಗಣಪತಿ). ಯಾವ ಗಣೇಶನ ವಿಗ್ರಹದ ಸೊಂಡಿಲು ಬಲಗಡೆಗೆ ಭಾಗಿದ್ದರೆ ಆ ವಿಗ್ರಹವನ್ನು ಇಟ್ಟುಕೊಂಡರೆ ವಿನಾಯಕನ ಅನುಗ್ರಹ ಪಡೆಯುವುದು ಕಷ್ಟವಾಗುತ್ತದೆ.

* ನೀವೇನಾದರೂ ವಿಘ್ನೇಶ್ವರನ ವಿಗ್ರಹವನ್ನು ಉದ್ಯೋಗ ಮಾಡುತ್ತಿರುವ ಸ್ಥಳದಲ್ಲಿ ಇಟ್ಟುಕೊಳ್ಳಬೇಕಾದರೆ, ನಿಂತಿರುವ ವಿಗ್ರಹವನ್ನು ಮಾತ್ರ ಇಟ್ಟುಕೊಳ್ಳಬೇಕು ಎಂಬುದನ್ನು ಮರೆಯಬೇಡಿ. ಈ ರೀತಿ ಇಟ್ಟುಕೊಳ್ಳುವುದರಿಂದ ನೀವು ಮಾಡುತ್ತಿರುವ ಕೆಲಸಕ್ಕೆ ಶಕ್ತಿಯ ಜತೆಗೆ ಉತ್ಸಾಹ ಸಹ ಬರುತ್ತದೆ.

* ಇಲಿಯ ಜತೆಗೆ, ಕಡುಬು ಇರುವ ವಿನಾಯಕ ವಿಗ್ರಹವನು ಮಾತ್ರ ಇಟ್ಟುಕೊಂಡರೆ.... ಅದು ನಿಮಗೆಷ್ಟೋ ಪವಿತ್ರತೆಯನ್ನು ತಂದುಕೊಡುತ್ತದೆ.

* ನಿಮ್ಮ ಪೂಜಾ ಕೋಣೆಯಲ್ಲಿ ವಿನಾಯಕ ಸ್ವಾಮಿ ವಿಗ್ರಹವನ್ನು ಒಂದು ಮಾತ್ರ ಇಟ್ಟುಕೊಳ್ಳಬೇಕು. ಒಂದಕ್ಕಿಂತ ಹೆಚ್ಚು ಇಟ್ಟುಕೊಂಡರೆ ವಿಘ್ನೇಶ್ವರ ಪತ್ನಿಯರಾದ ರಿದ್ಧಿ ಸಿದ್ಧಿ ನಿರುತ್ಸಾಹ ಪಡುತ್ತಾರೆ.

* ಗಣೇಶನಿಗೆ ದರ್ಬೆ ಸಮರ್ಪಿಸುವುದು ಮಾತ್ರ ಭಕ್ತರು ಮರೆಯಬಾರದು. ದರ್ಬೆ ಸಮರ್ಪಿಸಿದ ಬಳಿಕ ಭಕ್ತರು ಈ ಗಣಪತಿ ಮಂತ್ರವನ್ನು ಕಡ್ಡಾಯವಾಗಿ ಪಠಿಸಬೇಕು. " ಓಂ ಗಮ್ ಗಣಪತಯೇ ನಮಃ".

* ಸ್ವಸ್ತಿಕ್ ಚಿಹ್ನೆ ವಿನಾಯಕನದು ಎಂದು ಬಹಳಷ್ಟು ಮಂದಿ ನಂಬುತ್ತಾರೆ. ಹಾಗಾಗಿ ಯಾರು ವಾಸ್ತುದೋಷದಿಂದ ಬಳಲುತ್ತಿದ್ದಾರೋ ಅಂತಹ ವ್ಯಕ್ತಿಗಳು ಮನೆಯಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಇಟ್ಟುಕೊಂಡರೆ ಎಲ್ಲವೂ ಒಳ್ಳೆಯದಾಗುತ್ತದೆ.

No comments