Header Ads

test

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಈ ಯುವತಿಯನ್ನು ಮದುವೆ ಮಾಡಿಕೊಳ್ಳುತ್ತಾರಂತೆ? ವೈರಲ್ಫೋಟೋ..!

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಗೆ ಇನ್ನೂ ಮದುವೆಯಾಗಿಲ್ಲ ಎಂಬ ಸಂಗತಿ ಗೊತ್ತೇ ಇದೆ. ಈ ಹಿಂದೆ 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ರಾಹುಲ್ ಪ್ರಧಾನಿಯಾಗುತ್ತಾರೆಂದು ಭಾವಿಸಲಾಗಿತ್ತು. ಆದರೆ ಆಗ ಮನಮೋಹನ್ ಸಿಂಗ್ ಪ್ರಧಾನಿ ಆದರು. ಆದರೆ ಆ ಬಳಿಕ ನಡೆದ ಚುನಾವಣೆಯಲ್ಲಿ ಸೋತ ಕಾರಣ ರಾಹುಲ್ ಪ್ರಧಾನಿ ಆಗಲಿಲ್ಲ. ಇನ್ನು ಶೀಘ್ರದಲ್ಲೇ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಾದರೂ ಗೆದ್ದರೆ ರಾಹುಲ್ ಪ್ರಧಾನಿಯಾಗುತ್ತಾನೆಂದು, ಬಳಿಕ ಅವರು ಮದುವೆ ಮಾಡಿಕೊಳ್ಳಬಹುದು ಎಂದು ಕಾಂಗ್ರೆಸ್ ಮೂಲಗಳು ಭಾವಿಸುತ್ತಿವೆ. ಇತ್ತೀಚೆಗೆ ಯುವತಿ ಜತೆಗಿನ ಫೋಟೋ ಒಂದು ವೈರಲ್ ಆಗುತ್ತಿದೆ. ಆ ಯುವತಿಯನ್ನೇ ರಾಹುಲ್ ಮದುವೆಯಾಗುತ್ತಾರಂತೆ.. ಎಂಬ ವದಂತಿಗಳು ಹರಿದಾಡುತ್ತಿವೆ. ಹಾಗಿದ್ದರೆ ಇದು ಎಷ್ಟು ನಿಜ..? ಎಂದರೆ.


ಮೇಲಿನ ಫೋಟೋ ನೋಡಿದಿರಲ್ಲವೇ. ಫೇಸ್‍ಬುಕ್, ವಾಟ್ಸಾಪ್‌ನಲ್ಲಿ ಈ ಫೋಟೋ ಸದ್ಯಕ್ಕೆ ವೈರಲ್ ಆಗಿದೆ. ಇದರಲ್ಲಿರುವ ಯುವತಿ ರಾಹುಲ್‌ರನ್ನು ವರಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ಈ ಸುದ್ದಿ ರಾಹುಲ್‌ವರೆಗೂ ಹೋಗಿದೆ. ಹಾಗಾಗಿ ತನ್ನ ಮದುವೆ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಆ ಯುವತಿ ತನಗೆ ಸಹೋದರಿ ಸಮಾನ, ಆಕೆಯ ಜತೆಗೆ ಮದುವೆ ಎಂಬುದು ಸುಳ್ಳು. ಅದರಲ್ಲಿ ಸತ್ಯ ಇಲ್ಲ ಎಂದು ರಾಹುಲ್ ತಳ್ಳಿ ಹಾಕಿದ್ದಾರೆ.

ಇನ್ನು ಈ ಸಂಗತಿಯನ್ನು ತಿಳಿದುಕೊಂಡ ಆ ಯುವತಿ ಸಹ ರಾಹುಲ್ ತನಗೆ ಅಣ್ಣನ ಸಮಾನ, ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ದೃಷ್ಟಿಯನ್ನು ಬೇರೆಡೆ ಸೆಳೆಯಲು ವಿರೋಧ ಪಕ್ಷಗಳು ಬೇಕಂತಲೇ ಈ ರೀತಿ ಮಾಡಿವೆ ಎಂದು ಅವರು ಆರೋಪಿಸಿದ್ದಾರೆ. ಇಷ್ಟಕ್ಕೂ ಆಕೆ ಯಾರೆಂದರೆ....

ಈಕೆ ಹೆಸರು ಅದಿತಿ ಸಿಂಗ್. ವಯಸ್ಸು 29 ವರ್ಷ. ಉತ್ತರ ಪ್ರದೇಶದಲ್ಲಿ ರಾಯ್ ಬರೇಲಿಯ ಶಾಸಕಿ ಈಕೆ. ಕಾಂಗ್ರೆಸ್ ಪಕ್ಷದಿಂದ 2017ರಲ್ಲಿ ಗೆದ್ದಿದ್ದಾರೆ. ಈಕೆ ತಂದೆ ಅಖಿಲೇಷ್ ಸಿಂಗ್. ಇವರು ಅಲ್ಲಿ ಸತತವಾಗಿ 5 ಸಲ ಎಂಎಲ್‍ಎ ಆಗಿ ಗೆದ್ದಿದ್ದಾರೆ. ಆದರೆ 2017ರಲ್ಲಿ ತನ್ನ ವಾರಸುದಾರಳಾಗಿ ಈಕೆಯನ್ನು ಪ್ರಕಟಿಸಿದ ಬಳಿಕ ಈಕೆಗೆ ಟಿಕೆಟ್ ನೀಡಲಾಗಿತ್ತು. ಹಾಗಾಗಿ ಅದಿತಿ ಅಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ 90 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಆದರೆ ಆಕೆ ಕುಟುಂಬಕ್ಕೂ, ರಾಹುಲ್ ಕುಟುಂಬಕ್ಕೂ ಸಾಕಷ್ಟು ಹತ್ತಿರದ ಸಂಬಂಧ ಇದೆ. ಅದಿತಿ ತಂದೆ ಅಖಿಲೇಷ್ ಸಿಂಗ್ ಪ್ರಿಯಾಂಕಾ ಗಾಂಧಿಗೆ ಆಪ್ತ. ಹಾಗಾಗಿ ಅವರು ಆಗಾಗ ಭೇಟಿಯಾಗುತ್ತಿರುತ್ತಾರೆ. ಮೇಲಿನ ಫೋಟೋ ಸಹ ಅದಿತಿ ರಾಹುಲ್‌ರನ್ನು ಭೇಟಿಯಾದ ಸಂದರ್ಭದ್ದು.

ಒಂದು ಸಂದರ್ಭದಲ್ಲಿ ಎರಡೂ ಕುಟುಂಬಗಳು ಸೇರಿದಾಗ ತೆಗೆದಂತಹ ಫೋಟೋ. ಆದರೆ ಅದನ್ನು ಯಾರೋ ಬಿಡುಗಡೆ ಮಾಡಿ ವೈರಲ್ ಮಾಡಿದರು. ಇದರಿಂದ ಆ ವಿಷಯ ಗೊತ್ತಿದ್ದವರು ಪ್ರತಿಕ್ರಿಯಿಸಿದರು. ತಾವು ಮದುವೆಯಾಗುತ್ತಿಲ್ಲ ಎಂದು ಅತ್ತ ರಾಹುಲ್, ಇತ್ತ ಅದಿತಿ ಇಬ್ಬರೂ ಸ್ಪಷ್ಟಪಡಿಸಿದರು. ಕೆಲವರಿಗೆ ಕೆಲಸ ಇರಲ್ಲ. ಯಾರೇ ಇಬ್ಬರು ಕಾಣಿಸಿದರೂ ಅವರಿಗೆ ಇಂತಹ ಏನೋ ಒಂದನ್ನು ಅಂಟಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಾಕುವುದು ಪರಿಪಾಠವಾಗಿದೆ. ಏನು ಮಾಡೋಣ... ಎಲ್ಲ ನಮ್ಮ ಕರ್ಮ ಅಷ್ಟೇ..!

No comments