Header Ads

test

ಕೆಲಸಕ್ಕೆ ಬರಲ್ಲ ಎಂದು ಪ್ರತಿ ದಿನ ಬಿಸಾಕುವ ಈ ಆರು ವಸ್ತುಗಳು ತುಂಬಾ ಉಪಯೋಗಕ್ಕೆ ಬರುತ್ತವೆ..ಹಗುರವಾಗಿ ತಗೊಂಡರೆ ನಿಮ್ಮ ಕರ್ಮ!

ನಾವು ಪ್ರತಿ ದಿನ ಅದೆಷ್ಟೋ ವಸ್ತುಗಳನ್ನು ಬಳಸಿ ಬಿಸಾಕುತ್ತಿರುತ್ತೇವೆ. ಯಾವುದಾದರೂ ಒಂದು ವಸ್ತುವನ್ನು ಸಂಪೂರ್ಣವಾಗಿ ಬಳಸಿ, ಅದನ್ನು ಹೊರಗೆ ಬಿಸಾಕಿದ ಬಳಿಕ ಅದರ ಉಪಯೋಗ ಇನ್ನು ಇದೆ ಎಂದು ಗೊತ್ತಾದರೆ ಹೇಗೆ ಅನ್ನಿಸುತ್ತದೆ. ಅಯ್ಯೋ ಅದನ್ನು ಇನ್ನೂ ಬಳಸಿಕೊಳ್ಳಲಿಲ್ಲ ಎಂದು ಅಂದುಕೊಳ್ಳುತ್ತೇವೆ. ಅಂದರೆ ಫುಲ್ ಬಾಟಲಿ ಕುಡಿದ ವ್ಯಕ್ತಿ ಲಕ್ಕಿ ಡ್ರಾಪ್ ಎನ್ನುತ್ತಾ ಕುಡಿಯಲು ಆಸಕ್ತಿ ತೋರುತ್ತಿರುತ್ತಾನೆ. ಅದೇ ರೀತಿ ಒಂದು ವಸ್ತುವನ್ನು ಸಂಪೂರ್ಣವಾಗಿ ಬಿಸಾಕಿ, ಆ ಬಳಿಕ ಕೂಡ ಅದನ್ನು ಇನ್ನೊಂದು ರೀತಿಯಲ್ಲಿ ಬಳಸಿಕೊಂಡರೆ ಆ ಆನಂದವೇ ಬೇರೆ ರೀತಿ ಇರುತ್ತದೆ. ಉದಾಹರಣೆಗೆ ಒಂದು ಪೆನ್ನನ್ನು ಸಂಪೂರ್ಣವಾಗಿ ಬಳಸಿಕೊಂಡು ಆ ಪೆನ್ನನ್ನು ಬಿಸಾಕದೆ, ಅದರ ಕ್ಯಾಪನ್ನು ಬಟ್ಟೆಗಳನ್ನು ಒಣಗಿಸಲು ಕ್ಲಿಪ್ ಆಗಿ ಬಳಸಿಕೊಂಡರೆ ಹೇಗಿರುತ್ತದೆ ಅಂತ ಒಮ್ಮೆ ಆಲೋಚಿಸಿ. ಆ ರೀತಿ ಆರು ವಸ್ತುಗಳನ್ನು ನೀವು ಕೆಲಸಕ್ಕೆ ಬರಲ್ಲ ಎಂದು ಬಿಸಾಕುತ್ತಿರುತ್ತೀರ. ಆದರೆ ಅದರಿಂದ ಸಹ ಉಪಯೋಗ ಇದೆ.



ಆ ಆರು ವಸ್ತುಗಳು ಯಾವುದು, ಅವರನ್ನು ರೀ ಯೂಸ್ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಈಗ ತಿಳಿದುಕೊಳ್ಳೋಣ.

ಪೆನ್ನಿನ ಕ್ಯಾಪ್ಸ್
ಪೆನ್ನುಗಳನ್ನು ಅದೆಷ್ಟೋ ಮಂದಿ ಬಳಸಿ, ಅದರಲ್ಲಿ ಇಂಕ್ ಸಂಪೂರ್ಣ ಮುಗಿದ ಬಳಿಕ ಬಿಸಾಕುತ್ತಾರೆ. ಆದರೆ ಪೆನ್ನುಗಳನ್ನು ಬಿಸಾಕಿ, ಅವುಗಳ ಕ್ಯಾಪ್‌ಗಳನ್ನು ಕ್ಲಿಪ್‌ಗಳಂತೆ ಬಳಸಿದರೆ ಚೆನ್ನಾಗಿರುತ್ತದೆ. ತಂತಿ ಮೇಲೆ ಬಟ್ಟೆಗಳನ್ನು ಒಣಗಿಸಿದಾಗ ಅವು ಕೆಳಗೆ ಬೀಳದಂತೆ ಕ್ಲಿಪ್ಸ್ ರೀತಿ ಅವನ್ನು ಉಪಯೋಗಿಸಿಕೊಳ್ಳಬಹುದು.

ಸೊಳ್ಳೆ ಕಾಯಿಲ್:
ಸೊಳ್ಳೆ ಕಾಯಿಲನ್ನು ಬಳಸಿದ ಬಳಿಕ ಅವರನ್ನು ಬಿಸಾಕುತ್ತೇವೆ. ಆದರೆ ಅವನ್ನು ಒಂದು ನಿಮಿಷ ನೀರಿನಲ್ಲಿ ಇಟ್ಟು, ಹೊರತೆಗೆದು ಒಣಗಿಸಿ ಮತ್ತೆ ಬಳಸಬಹುದು. ಸೊಳ್ಳೆ ಕಾಯಿಲನ್ನು ಈ ರೀತಿ ಎರಡು, ಮೂರು ಸಲ ಬಳಸಬಹುದು.

ಚಿಕ್ಕ ಪೆನ್ಸಿಲ್:
ಕೈಯಲ್ಲಿ ಹಿಡಿದುಕೊಳ್ಳಲಾಗದಷ್ಟು ಪೆನ್ಸಿಲ್ ಚಿಕ್ಕದಾದ ಬಳಿಕ ಅದನ್ನು ಬಿಸಾಕುತ್ತಾರೆ. ಆದರೆ ಅವನ್ನು ಖಾಲಿ ಪೆನ್ನಿನಲ್ಲಿ ಇಟ್ಟುಕೊಂಡು ಇನ್ನೂ ಕೆಲವು ದಿನ ಬಳಸಬಹುದು.

ಹಾಲಿನ ಕವರ್:
ಹಾಲಿನ ಕವರ್ಸ್ ನಿತ್ಯ ನಾವು ಕಸದ ಬುಟ್ಟಿಗೆ ಹಾಕುತ್ತಿರುತ್ತೇವೆ. ಆದರೆ ಹಾಲು ಬಟ್ಟಲಿಗೆ ಹಾಕಿದ ಬಳಿಕ ಸಂಪೂರ್ಣ ಕಟ್ ಮಾಡಿ, ಕವರನ್ನು ರಿವರ್ಸ್ ಮಾಡಿ ಕತ್ತಿನ ಮೇಲೆ, ಗಂಟಲಿನ ಬಳಿ, ಕೈಗಳ ಬಳಿ ಉಜ್ಜಿಕೊಂಡರೆ ಚರ್ಮ ಸ್ಮೂತ್ ಆಗುವುದರ ಜತೆಗೆ ಬೆಳ್ಳಗೂ ಆಗುತ್ತದೆ.

ಟೂತ್ ಪೇಸ್ಟ್ ಟ್ಯೂಬ್:
ಯಾವುದಾದರೂ ಟೂತ್ ಪೇಸ್ಟ್ ಟ್ಯೂಬ್ ಸಂಪೂರ್ಣ ಮುಗಿದ ಬಳಿಕ ಅದನ್ನು ಬಿಸಾಡದೆ, ಅದರಲ್ಲಿ ಗಾಳಿಯನ್ನು ಊದಿ, ಅದರಲ್ಲಿ ಅರ್ಧದಷ್ಟು ನೀರನ್ನು ತುಂಬಿ, ಎರಡು ಮೂರು ದಿನಗಳ ಕಾಲ ಆ ನೀರನ್ನು ಮೌತ್ ಫ್ರೆಷ್‍ನರ್ ಆಗಿ ಬಳಸಬಹುದು.

ಈರುಳ್ಳಿ ಹೊಟ್ಟು:
ಈರುಳ್ಳಿ ಹೆಚ್ಚುವಾಗ ಹೊಟ್ಟನ್ನು ತೆಗೆದು ಪಕ್ಕಕ್ಕೆ ಇಡುತ್ತೇವೆ. ಆದರೆ ಆ ಹೊಟ್ಟನ್ನು ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಹಾಕಿ, ಆ ನೀರಿನಿಂದ ಸ್ನಾನ ಮಾಡಿದರೆ ಕೂದಲಿಗೆ ಒಳ್ಳೆಯ ಹೊಳಪು ಬರುತ್ತದೆ. ಚರ್ಮದ ಹಲವು ಸಮಸ್ಯೆಗಳೂ ದೂರ ಆಗುತ್ತವೆ.

No comments