Header Ads

test

ಸಿನಿಮಾದಲ್ಲಿ ಕಾರಿನ ಚಕ್ರಗಳು ಹಿಮ್ಮುಖವಾಗಿ ತಿರುಗಿದಂತೆ ಭಾಸವಾಗುತ್ತದೆ ಯಾಕೆ..?

ಸಾಕಷ್ಟು ಸಿನಿಮಾಗಳಲ್ಲಿ ಕಾರು ಚಲಿಸುವುದನ್ನು ನೋಡಿರುತ್ತೀರಿ. ಹಳೆ ಸಿನಿಮಾಗಳಲ್ಲಾದರೆ ಇದು ಕಣ್ಣಿಗೆ ಕಟ್ಟಿದಂತೆ ಕಾಣುತ್ತದೆ. ಕಾರಿನ ಚಕ್ರಗಳು ಹಿಮ್ಮಖವಾಗಿ ತಿರುಗಿದಂತೆ ಭಾಸವಾಗುತ್ತದೆ. ಆದರೆ ಈಗಿನ ಸಿನಿಮಾಗಳಲ್ಲಿ ಬಳಸುತ್ತಿರುವ ಡಿಜಿಟಲ್, ಅತ್ಯಾಧುನಿಕ ಕ್ಯಾಮೆರಾಗಳಿಂದಾಗಿ ಆ ರೀತಿ ಕಾಣುವುದಿಲ್ಲ. ಆದರೆ ಹಳೆ ಸಿನಿಮಾಗಳಲ್ಲಿ ಇದು ಹೆಚ್ಚು. ಇದಕ್ಕೆ ವೈಜ್ಞಾನಿಕ ಕಾರಣ ಇದೆ. ಅದು ಏನು ಎಂಬುದನ್ನು ಈಗ ನೋಡೋಣ.



ಸಿನಿಮಾಗಳಲ್ಲಿ ಕಾರು ವೇಗವಾಗಿ ಹೋಗುತ್ತಿರುವ ದೃಶ್ಯ ನೋಡುತ್ತಿದ್ದಾಗ, ಕಾರಿನ ಚಕ್ರಗಳು ಆರಂಭದಲ್ಲಿ ಒಂದು ಕಡೆಗೆ ತಿರುಗಿ ಮತ್ತೆ ಹಿಂದಕ್ಕೆ ತಿರುಗಿದಂತ ಭಾಸವಾಗುತ್ತದೆ. ಯಾಕೆ?
ಕಾರಣ... ನಮ್ಮ ದೃಷ್ಟಿ ಮೇಲೆ ಬೆಳಕು ಮಾಡುವ ಒಂದು ಭ್ರಮೆ. ಕಾರಿನ ಚಕ್ರಗಳು ತಿರುಗುತ್ತಿದ್ದಾಗ ಆ ಆ ಭ್ರಮಣೆಗೆ ಒಂದು ಆವರ್ತನ (frequency) ಇರುತ್ತದೆ. ಭ್ರಮಣೆ/ಆವರ್ತನ (ವೃತ್ತಾಕಾರ ಗತಿಯಲ್ಲಿ ಒಂದು ವಸ್ತುವಿನ ಚಲನೆಯಾದ ಪರಿಭ್ರಮಣ) ಎಂದರೆ.. ಒಂದು ಸೆಕೆಂಡಿಗೆ ಕಾರಿನ ಚಕ್ರಗಳು ಎಷ್ಟು ಸುತ್ತು (turns) ಸುತ್ತುತ್ತಿದೆ ಎಂಬ ಸಂಖ್ಯೆ..

ಪ್ರಾಜೆಕ್ಟರ್‌ನಲ್ಲಿ ರೀಲು ವೇಗವಾಗಿ ಸುತ್ತುವುದರಿಂದ ತೆರೆ ಮೇಲೆ ಒಂದಾದ ಬಳಿಕ ಒಂದು ನಿಶ್ಚಲ ಚಿತ್ರಗಳು ಚಕಚಕ ಬದಲಾಗಿ ನಮಗೆ ದೃಶ್ಯ ಚಲಿಸುತ್ತಿದ್ದಂತೆ ಭಾಸವಾಗುತ್ತದೆ. ಆ ರೀತಿಯಲಿ ಸಿನಿಮಾ ತೆರೆ ಮೇಲೆ ಬೀಳುವ ಫಿಲ್ಮ್ ಪ್ರತಿಬಿಂಬಗಳಿಗೆ ಸಹ ಆವರ್ತನ ಇರುತ್ತದೆ. ಅಂದರೆ ತೆರೆ ಮೇಲೆ ಸೆಕೆಂಡ್‌ಗೆ ಎಷ್ಟು ಚಿತ್ರಗಳು ಬೀಳುತ್ತಿವೆ ಎಂಬ ಸಂಖ್ಯೆ ಅದು.

ಸಾಮಾನ್ಯವಾಗಿ ಸಿನಿಮಾ ತೆರೆ ಮೇಲೆ ಸೆಕೆಂಡ್‌ಗೆ 24 ಫಿಲಂಸ್ ಕಾಣುತ್ತವೆ. ಫಿಲ್ಮ್‌ನಲ್ಲಿನ ಕಾರಿನ ಚಕ್ರಗಳು ಭ್ರಮಣಕ್ಕೆ ಸೆಕೆಂಡ್‌ಗೆ 24ಕ್ಕಿಂತಲೂ ಕಡಿಮೆ ಇದ್ದರೆ ಕಾರಿನ ಚಕ್ರಗಳು ಹಿಂದಕ್ಕೆ ಸುತ್ತುತ್ತಿದ್ದಂತೆ ನಮಗೆ ಕಾಣಿಸುತ್ತದೆ. ಕಾರು ಚಲಿಸಿದಾಗ ಅದರ ವೇಗ ಕಡಿಮೆ ಇರುವ ಕಾರಣ ಈ ರೀತಿ ಕಾಣುತ್ತದೆ. ಕಾರು ಚಕ್ರಗಳ ಭ್ರಮಣೆಯ ಆವರ್ತನ ಸರಿಯಾಗಿ 24 ಇದ್ದರೆ ಚಕ್ರಗಳು ತಿರಗದೆ ನಿಶ್ಚಲವಾಗಿ ಇದ್ದಂತೆ ಕಾಣಿಸುತ್ತದೆ.

ಕಾರಿನ ವೇಗ ಹೆಚ್ಚಾಗುವಷ್ಟು ಚಕ್ರಗಳ ತಿರುಗುವ ಆವರ್ತನ 24ಕ್ಕಿಂತ ಹೆಚ್ಚಾಗುವುದರಿಂದ ಅದು ದಿಕ್ಕನ್ನು ಬದಲಾಯಿಸಿ ಮುಂದಕ್ಕೆ ತಿರುಗುತ್ತಿದ್ದಂಟೆ ನಮಗೆ ಕಾಣಿಸುತ್ತದೆ. ಅಂದರೆ ಕಾರಿನ ಚಕ್ರಗಳು ಆರಂಭದಲ್ಲಿ ಹಿಂದಕ್ಕೆ ಬಳಿಕ ಕೆಲವು ಕ್ಷಣಗಳಲ್ಲಿ ನಿಶ್ಚಲವಾಗಿ ಇದ್ದು ಆ ಬಳಿಕ ಮುಂದಕ್ಕೆ ತಿರುಗುತ್ತಿದ್ದಂತೆ ಅನ್ನಿಸುತ್ತದೆ.

ಆವರ್ತನದ ವ್ಯತ್ಯಾಸದಿಂದ ಉಂಟಾಗುವ ಈ ವಿಚಿತ್ರ ದೃಶ್ಯ ಫಲಿತವನ್ನು ಭೌತಶಾಸ್ತ್ರದಲ್ಲಿ " Stroboscopic effect " ಎನ್ನುತ್ತಾರೆ.

No comments