Header Ads

test

ಮದುವೆಗೆ ತುಂಬಾ ರಜೆ ತೆಗೆದುಕೊಂಡರೂ ನೆಂಟರೆಲ್ಲಾ ಅಲ್ಲೇ ಇದ್ದ ಕಾರಣ.. ಪತ್ನಿ ಜತೆಗೆ ಏಕಾಂತವಾಗಿಕಳೆಯುವ ಅವಕಾಶ ಸಿಗಲಿಲ್ಲ ಎಂದು ವೈರಲ್ ಆಗುತ್ತಿರುವ ಕಾನಿಸ್ಟೇಬಲ್ ಲೀವ್ ಲೆಟರ್!

ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯಲ್ಲಿ ಕಾನಿಸ್ಟೇಬಲ್ ಆಗಿ ಕೆಲಸ ಮಾಡುತ್ತಿರುವ ಮಾರುತಿಗೆ ಇತ್ತೀಚೆಗೆ ಮದುವೆ ಆಯಿತು. ಹೊಸದಾಗಿ ಮದುವೆಯಾಗಿ ಹೊಸ ಬಾಳಿನ ಹೊಸಿಲಲಿ ನಿಂತಿರುವ ಮಾರುತಿ ಬರೆದಿರುವ ಲೀವ್ ಲೆಟರ್ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮದುವೆಗೆ ಸಾಕಷ್ಟು ದಿನ ರಜೆ ತೆಗೆದುಕೊಂಡಿದ್ದ. ಆದರೆ ಬಂಧುಗಳೆಲ್ಲಾ ಅಲ್ಲೇ ಇದ್ದ ಕಾರಣ ರಜೆಗಳು ಮುಗಿದಿದ್ದು ಗೊತ್ತೇ ಆಗಲಿಲ್ಲ. ಪತ್ನಿಯ ಜತೆ ಏಕಾಂತವಾಗಿ ಕಳೆಯುವ ಅವಕಾಶ ಸಿಗಲಿಲ್ಲ. ಹಾಗಾಗಿ ರಜೆ ಹಾಕಬೇಕು ಎಂದುಕೊಂಡ. ಅಷ್ಟೇ ಕಾರ್ಯಪ್ರವೃತ್ತನಾದ...

ತನ್ನ ಬಾಸ್‍ಗೆ ಒಂದ್ ಲೀವ್ ಲೆಟರ್ ಬರೆದ. ಅದರಲ್ಲಿ ಅವರು ಬರೆದ ಸಂಗತಿಗಳನ್ನು ನೋಡಿದರೆ ಸ್ವಲ್ಪ ಅಚ್ಚರಿ ಎಂಬಂತಿದ್ದವು. ಆದರೆ ಬಳಿಕ ನಗು ತರಿಸುವಂತಿತ್ತು. ಅದನ್ನು ಓದಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್‌ಗಳೊಂದಿಗೆ ನಗು ತರಿಸುತ್ತಿದ್ದಾರೆ. ಮಾರುತಿ ಅವರು ಯಾವುದೇ ಅಳುಕಿಲ್ಲದೆ ವಾಸ್ತವವನ್ನು ಪೇಪರ್ ಮೇಲೆ ಇಟ್ಟಿದ್ದರು.




"ತನಗೆ ಇತ್ತೀಚೆಗಷ್ಟೇ ಮದುವೆಯಾಗಿದ್ದು ತಮ್ಮಲ್ಲಿ ನಿವೇದಿಸಿಕೊಳ್ಳುವುದೇನೆಂದರೆ. ನನಗೆ ಹೊಸದಾಗಿ ಮದುವೆಯಾಗಿದ್ದು ಹೊಸ ಹುರುಪು ಇದ್ದು ನಮ್ಮ ಊರಿನಲ್ಲಿ ನಮ್ಮ ದೇವರ ಪೂಜಾ ಕಾರ್ಯಕ್ರಮವಿರುವ ಕಾರಣ ಅದಕ್ಕಾಗಿ ದಿನಾಂಕ:24:02:2019 ರಿಂದ 5:003:2019ರವಗೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ 10 ದಿನಗಳವರೆಗೆ ಪರಿವರ್ತಿತ ರಜೆ/ಗಳಿಕೆ ರಜೆಯನ್ನು ಮಂಜರು ಮಾಡಬೇಕಾಗಿ ಈ ಮೂಲಕ ನಿವೇದಿಸಿಕೊಳುತ್ತೇನೆ" ಎಂದು ಬರೆದಿರುವುದು ಈಗ ವೈರಲ್ ಆಗಿದೆ.

ಈ ರಜೆ ಪತ್ರವನ್ನು ಓದಿದ ಅಧಿಕಾರಿಗಳು ಒಳಗೊಳಗೆ ನಕ್ಕಿದರೆ.. ಯಾರೋ ಅದನ್ನು ಫೋಟೋ ತೆಗೆದು ಅಂತರ್ಜಾಲದಲ್ಲಿ ಹಾಕಿದ್ದಾರೆ. ಅದು ಸ್ವಲ್ಪ ವೈರಲ್ ಆಗಿದೆ. ಸಾಮಾನ್ಯವಾಗಿ ಯಾರಿಗಾದರೂ ಅನಿವಾರ್ಯವಾಗಿ ರಜೆ ಬೇಕಿದ್ದರೆ ಏನೋ ಕುಂಟು ನೆಪ ಹೇಳಿ ತೆಗೆದುಕೊಳ್ಳುತ್ತಾರೆ. ಆದರೆ ನಮ್ಮ ಕಾನಿಸ್ಟೇಬಲ್ ಸಾಹೇಬರು ಯಾವುದೇ ಮುಚ್ಚು ಮರೆ ಇಲ್ಲದಂತೆ ಹೊಸ ’ಹುರುಪಿ’ನಲ್ಲಿದ್ದೇನೆ ಎಂದು ರಜೆ ಕೇಳಿರುವುದು ಚರ್ಚೆಗೆ ದಾರಿ ತೆಗೆದಿದೆ. ಒಳ್ಳೆ ಮೂಡ್‌ನಲ್ಲಿ ಇರುವ ಕಾರಣ ರಜೆ ಕೇಳಿದ್ದಾನೆ ಎಂಬ ಕಾಮೆಂಟ್‌ಗಳು ಹರಿದಾಡುತ್ತಿವೆ. ಅದೇನೇ ಆಗಲಿ ನ್ಯಾಯವಾಗಿ ಕೇಳಿದರೆ ಹೀಗೆ ನೋಡಿ.. ಅದೇ ಸುಳ್ಳು ಹೇಳಿ ರಜೆ ತಗೊಂಡಿದ್ದರೆ ಸಿಗುತ್ತಿತ್ತೋ ಏನೋ..!

No comments