Header Ads

test

ಹಿರಿಯರ ಪಾದಗಳಿಗೆ ನಮಸ್ಕಾರ ಮಾಡುವುದರಿಂದ ಏನಾಗುತ್ತದೆ..! ಸೈನ್ಸ್ & ಮೈಥಾಲಜಿ ಹೇಳುವ ಸೀಕ್ರೆಟ್ಸ್ಏನು?

ನಮಗಿಂತಲೂ ಹಿರಿಯರ ಕಾಲಿಗೆ ಬಾಗಿ ನಮಸ್ಕಾರ ಹಾಕಿ ಅವರ ಅಶೀರ್ವಾದ ತೆಗೆದುಕೊಳ್ಳುವುದು ಎಂಬುದು ನಮ್ಮ ಭಾರತೀಯ ಸಂಪ್ರದಾಯದಲ್ಲಿದೆ. ನಮ್ಮ ದೇಶದಲ್ಲಿ ಅನೇಕ ವರ್ಗಗಳಿಗೆ ಸೇರಿದವರು ಈ ಆಚಾರವನ್ನು ಪಾಲಿಸುತ್ತಾರೆ. ಇದರಿಂದ ಹಿರಿಯರ ಆಶೀರ್ವಾದ ಮಕ್ಕಳಿಗೆ ಲಭಿಸುತ್ತದೆ. ಅದರಿಂದ ಮಕ್ಕಳಿಗೆ ಸಂಪೂರ್ಣ ಆಯಸ್ಸು ಸಿಗುತ್ತದೆ ಎಂಬ ನಂಬಿಕೆ. ಆ ಹಿನ್ನೆಲೆಯಲ್ಲಿ ಯಾರಾದರೂ ತಮಗಿಂತಲೂ ಹಿರಿಯರಾದವರ ಕಾಲಿಗೆ ನಮಸ್ಕರಿಸುತ್ತಾರೆ. ಆದರೆ ನಿಜವಾಗಿ ಇದರಲ್ಲಿ ನಮಗೆ ಗೊತ್ತಿಲ್ಲದ ಕೆಲವು ಸಂಗತಿಗಳು ಅಡಗಿವೆ. ಶಾಸ್ತ್ರ ಪರವಾಗಿಯೇ ಅಲ್ಲ, ವಿಜ್ಞಾನ ಪರವಾಗಿಯೂ ಸಹ ಈ ರೀತಿ ಮಾಡುವುದು ನಮಗೆ ಒಳ್ಳೆಯದು. ಅದು ಯಾಕೆ ಎಂಬುದನ್ನು ಈಗ ತಿಳಿದುಕೊಳ್ಳೊಣ.




1. ನಮ್ಮ ದೇಹದಲ್ಲಿ ಪಾದಗಳು ಎಂಬುದು ನಮ್ಮ ಇಡೀ ದೇಹದ ತೂಕವನ್ನು ಹೊರುತ್ತವೆ. ಅವು ನಮ್ಮ ದೇಹಕ್ಕೆ ಆಧಾರದಂತಹವು. ಅವು ಇಲ್ಲದಿದ್ದರೆ ನಾವು ನಿಲ್ಲಲು ಆಗಲ್ಲ. ಸೃಷ್ಟಿಯಲ್ಲಿ ಕೆಲವು ಪಕ್ಷಿಗಳು, ಪ್ರಾಣಿಗಳು ಬಿಟ್ಟರೆ ಈ ರೀತಿ ಪಾದಗಳ ಮೇಲೆ ಅದೇ ಕೆಲಸವಾಗಿ ನಿಲ್ಲುವ ಸಾಮರ್ಥ್ಯ ಯಾವ ಜೀವಿಗೂ ಇಲ್ಲ. ಹಾಗಾಗಿ ಅಂತಹ ಪಾದಗಳಿಗೆ ನಮಸ್ಕರಿಸಬೇಕು ಎಂದು ಪುರಾಣಗಳು ಹೇಳುತ್ತಿವೆ. ಹಾಗಾಗಿ ನಾವು ಹಿರಿಯರ ಪಾದಗಳಿಗೆ ನಮಸ್ಕರಿಸುತ್ತೇವೆ.

2. ಹಿರಿಯರಿಗೆ ಜೀವನದ ಬಗ್ಗೆ ಸಾಕಷ್ಟು ಅನುಭವ ಇರುತ್ತದೆ. ಮಕ್ಕಳಿಗಿಂತ ಅವರು ಅದೆಷ್ಟೋ ಜ್ಞಾನವನ್ನು ಪಡೆದಿರುತ್ತಾರೆ. ಅವರಿಗೆ ತುಂಬಾ ಸಂಗತಿಗಳು ಗೊತ್ತಿರುತ್ತವೆ. ವಿಷಯ ಈ ರೀತಿ ಇರಬೇಕಾದರೆ ಅವರ ಪಾದಗಳನ್ನು ನಮಸ್ಕರಿಸಿದರೆ ಅವರ ಜ್ಞಾನ, ಬುದ್ಧಿವಂತಿಕೆ, ಜೀವನ ಅನುಭವ ಎಲ್ಲವೂ ಮಕ್ಕಳಿಗೆ ಬರುತ್ತವೆ. ಅವರು ಜೀವನದಲ್ಲಿ ಯಶಸ್ವಿಯಾಗಿ ಮುಂದೆ ಸಾಗಲು ಸಾಧ್ಯವಾಗುತ್ತದೆ. ಹಾಗಾಗಿ ಹಿರಿಯ ಪಾದಗಳಿಗೆ ಕಿರಿಯರು ನಮಸ್ಕರಿಸುತ್ತಾರೆ.

3. ಹಿರಿಯರ ಪಾದಗಳಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದರೆ ಅವರ ಜ್ಞಾನ ಮಕ್ಕಳಿಗೆ ಸಿಗುತ್ತದೆ ಎಂದು ಅಥರ್ವಣ ವೇದ ಹೇಳುತ್ತದೆ.

4. ಹಿರಿಯ ಪಾದಗಳಿಗೆ ನಮಸ್ಕರಿಸಿದಾಗ ಅವರಲ್ಲಿರುವ ಪಾಸಿಟೀವ್ ಶಕ್ತಿ ಕಿರಿಯರಿಗೆ ಸೇರುತ್ತದೆ. ಹಾಗೆಯೇ ಕಿರಿಯರಲ್ಲಿರುವ ಪಾಸಿಟೀವ್ ಶಕ್ತಿ ಹಿರಿಯರಿಗೆ ಪ್ರಸಾರವಾಗುತ್ತದೆ. ಇದರಿಂದ ಇಬ್ಬರಿಗೂ ಇರುವ ಅನಾರೋಗ್ಯ ಸಮಸ್ಯೆಗಳು ನಿವಾರಣೆಯಗುತ್ತವೆ.

5. ವಿಜ್ಞಾನದ ಪ್ರಕಾರ ಆ ರೀತಿ ಬಾಗಿ ಪಾದಗಳಿಗೆ ನಮಸ್ಕರಿಸಿದರೆ ದೇಹದಲ್ಲಿ ರಕ್ತದ ಸಂಚಲನೆ ಉತ್ತಮಗೊಳ್ಳುತ್ತದೆ. ಇದರಿಂದ ಹೃದ್ರೋಗ ಸಮಸ್ಯೆಗಳು ಬರಲ್ಲ.

ಇವಿಷ್ಟು... ಹಿರಿಯರ ಪಾದಗಳಿಗೆ ನಮಸ್ಕರಿಸಲು, ಅವರ ಆಶೀರ್ವಾದ ಪಡೆಯುವ ಹಿಂದಿರುವ ಕಾರಣಗಳು. ಆದರೆ ಪಾದಗಳಿಗೆ ನಮಸ್ಕರಿಸಿದಾಗ ಬಲಗೈಯಲ್ಲಿ ಬಲ ಪಾದನ್ನು, ಎಡಗೈಯಲ್ಲಿ ಎಡ ಪಾದವನ್ನು ತಾಗಿ ನಮಸ್ಕಾರ ಮಾಡಬೇಕು. ಆ ರೀತಿ ನಮಸ್ಕಾರ ಮಾಡುವುದೇ ಸೂಕ್ತವಾದದ್ದು ಎಂದು ಪುರಾಣಗಳು ಹೇಳುತ್ತವೆ.

No comments