Header Ads

test

ಆ ಫೋಟೋದಲ್ಲಿರುವುದು ನಿಜವಾಗಿ ದೆವ್ವ ಅನ್ನುತ್ತಿದ್ದಾರೆ... ಹೌದಾ? ಅಲ್ಲವೇ? ನೊಡಿ ನೀವೇ ಹೇಳಿ..

ದೆವ್ವ, ಭೂತ, ಪಿಶಾಚಿ. ಹೆಸರು ಏನೇ ಆದರೂ ಎಲ್ಲವೂ ಭಯ ಬೀಳಿಸುವಂತಹವು. ಆದರೆ ಇವೆಲ್ಲಾ ನಂಬಿಕೆ ಇರುವವರಿಗೆ ಮಾತ್ರ ಎಂಬುದು ನಿಮ್ಮ ಗಮನಕ್ಕಿರಲಿ. ನಂಬಿಕೆ ಇಲ್ಲದವರು ಸುಮಾರು ಇಂತಹ ಹೆಸರುಗಳು ಹೇಳಿದರೂ, ಅವುಗಳ ಬಗ್ಗೆ ಕಥೆಗಳನ್ನು ಹೇಳಿದರೂ, ಸಿನಿಮಾಗಳಲ್ಲಿ ತೋರಿಸಿದರೂ ಭಯಬೀಳಲ್ಲ. ಆದರೆ ಕೆಲವು ಪರಿಸ್ಥಿತಿಗಳಲ್ಲಿ ನಂಬಿಕೆ ಇಲ್ಲದವರು ಸಹ ನಂಬಬೇಕಾಗುತ್ತದೆ. ನಿಜವಾಗಿ ದೆವ್ವಗಳು ಇವೆಯೇ? ಇಲ್ಲವೇ? ಎಂಬ ಸಂಶಯಕ್ಕೆ ಬೀಳಬೇಕಾಗುತ್ತದೆ. ಅಂತಹ ಡೌಟ್‌ನಲ್ಲಿ ನಿಮ್ಮನ್ನು ಬೀಳಿಸುವ ಫೋಟೋ ಈಗ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.



ಮೇಲಿನ ಫೋಟೋ ನೋಡಿದಿರಲ್ಲವೇ..? ಇಷ್ಟಕ್ಕೂ ಅದರಲ್ಲಿ ದೆವ್ವ ಎಲ್ಲಿದೆ, ಎಲ್ಲರೂ ಯುವತಿಯರೇ! ಎಂದು ಕೇಳುತ್ತಿದ್ದೀರಾ? ಆದರೆ ಇನ್ನೊಮ್ಮೆ ನೋಡಿ. ಏನೂ ಗೊತ್ತಾಗುತ್ತಿಲ್ಲವೆ..? ಹಾಗಿದ್ದರೆ ಕೆಳಗೆ ನೀಡಿರುವ ಫೋಟೋ ನೋಡಿ. ನೋಡಿದಿರಲ್ಲವೇ..!

ಫೋಟೋದಲ್ಲಿ ಒಟ್ಟು 15 ಮಂದಿ ಯುವತಿಯರು ಇದ್ದರೆ ಸಾಮಾನ್ಯವಾಗಿ ಎಲ್ಲರೂ ಕೈ ಕಟ್ಟಿಕೊಂಡಿದ್ದಾರೆ. ಅದರಲ್ಲಿ ಕೇವಲ ಒಬ್ಬ ಯುವತಿ ಮಾತ್ರ ತನ್ನ ಕೈಗಳನ್ನು ಸೊಂಟದ ಮೇಲೆ ಇಟ್ಟುಕೊಂಡಿದ್ದಾಳೆ. ಅದೇ ಸಾಲಿನಲ್ಲಿ ಇನ್ನೊಬ್ಬ ಕೊನೆಯ ಯುವತಿ ಭುಜದ ಮೇಲೆ ಯಾರದೋ ಒಂದು ಕೈ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಪಕ್ಕದಲ್ಲಿ ಯಾರೂ ಇಲ್ಲ.

ಆ ಕೈ ಬೇರೆ ಯಾರದ್ದೋ ಅಲ್ಲ ದೆವ್ವದ್ದೇ ಎಂಬ ಪ್ರಚಾರ ಈಗ ನಡೆಯುತ್ತಿದೆ. 1900ನೇ ವರ್ಷದಲ್ಲಿ ಬೆಲ್‍ಫಾಸ್ಟ್ ನಗರದಲ್ಲಿನ ನಾರ್ತರ್ನ್ ಐರ್ಲೆಂಡ್ ಪ್ರದೇಶದಲ್ಲಿ ಇರುವ ಒಂದು ಲಿನೆನ್ ಮಿಲ್‌ನಲ್ಲಿ ಕೆಲಸ ಮಾಡುತ್ತಿರುವ ಯುವತಿಯರೆಲ್ಲಾ ಜೊತೆಯಾಗಿ ಆಗ ಫೋಟೋ ತೆಗೆಸಿಕೊಂಡಿದ್ದರು. ಆ ಫೋಟೋವನ್ನು ಈಗ ಫೋಟೋಗ್ರಾಫರ್ ಒಬ್ಬರು ಇಂಟರ್‌ನೆಟ್‌ನಲ್ಲಿ ಹಾಕಿದರು. ಹಾಗಾಗಿ ಈ ಫೋಟೋ ಬಗ್ಗೆ ಅಂತರ್ಜಾಲದಲ್ಲಿ ಈಗ ಭಾರಿ ಚರ್ಚೆ ನಡೆಯುತ್ತಿದೆ.

ಆದರೆ ಈ ಫೋಟೋವನ್ನು ಫೋಟೋಶಾಪ್ ಮಾಡಿದ್ದಾರೆಂದು ಕೆಲವರು ಹೇಳುತ್ತಿದ್ದರೆ, ಇನ್ನೂ ಕೆಲವರು ಇದು ನಿಜ ಎಂದು ನಂಬುತ್ತಿದ್ದಾರೆ. ಅದೇನೇ ಇರಲಿ ದೆವ್ವಗಳಿವೆ ಎಂದು ಈಗಲೂ ನಂಬುವವರ ಸಂಖ್ಯೆ ಜಾಸ್ತಿನೇ ಇದೆ. ಇಷ್ಟಕ್ಕೂ ನೀವು ಏನಂತೀರಿ..? ದೆವ್ವ ಇದೆ ಅಂತೀರಾ? ಇಲ್ಲ ಅಂತೀರಾ? ಕಾಮೆಂಟ್ ಮಾಡಿ.

No comments