ಇಷ್ಟಕ್ಕೂ ಆಸ್ಪತ್ರೆಯ ಹಾಸಿಗೆ ಮೇಲೆ ಜಯಲಲಿತಾ ಹೇಗಿದ್ದರು... ಡ್ಯೂಟಿ ಡಾಕ್ಟರ್ ಹೇಳಿದ ನಂಬಲಾಗದಸತ್ಯಗಳು. ಇಷ್ಟಕ್ಕೂ ಏನು ಹೇಳಿದರು ಗೊತ್ತಾ?
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಲಲಿತಾ ಅನಾರೋಗ್ಯದ ಕಾರಣ ಕಳೆದ 2016ನೇ ವರ್ಷದಲ್ಲಿ ಡಿಸೆಂಬರ್ 5ರಂದು ಕಣ್ಮುಚ್ಚಿದರು. ಈಕೆ ಸುಮಾರು 75 ದಿನಗಳ ಕಾಲ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಕೊನೆಗೆ ಪ್ರಾಣ ಬಿಟ್ಟರು. ಆ ಸಮಯದಲ್ಲಿ ಜಯಲಲಿತಾ ಆಸ್ಪತ್ರೆಯಲ್ಲಿ ಸೇರಿದಂದಿನಿಂದ ಸಾಯುವ ಮುನ್ನಾ ದಿನವಾದ ಡಿಸೆಂಬರ್ 4ರವರೆಗೂ ಡ್ಯೂಟಿ ಡಾಕ್ಟರ್ ಆಗಿದ್ದ ಶಿಲ್ಪಾ ಇದೀಗ ಸಂಚಲನ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಅಪೊಲೊ ಆಸ್ಪತ್ರೆಯಲ್ಲಿ ಜಯಲಲಿತಾ ಚಿಕಿತ್ಸೆ ಪಡೆಯುತ್ತಾ ಇದ್ದ ಸಮಯದಲ್ಲಿ ಆಕೆ ಮಾನಸಿಕ ಸ್ಥಿತಿ ಅಸ್ಥಿರವಾಗಿ ಇತ್ತು. ಹಲವು ಸಂದರ್ಭಗಳಲ್ಲಿ ಒಂಟಿಯಾಗಿ ಇರಲು ಇಷ್ಟಪಡುತ್ತಿದ್ದರು ಎಂದು ಆಕೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯೆ ಶಿಲ್ಪಾ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಯಾ ಸಾವಿನ ಬಗ್ಗೆ ವಿಚಾರಣೆ ನಡೆಸುತ್ತಿರುವ ಜಸ್ಟೀಸ್ ಆರ್ಮುಗಸ್ವಾಮಿ ಸಮಿತಿ
ಮುಂದೆ ಸಾಕ್ಷ್ಯಧಾರ ನೀಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಜಯಲಲಿತಾ ನಗುತ್ತಿದ್ದರು. ಇನ್ನೂ ಕೆಲವು ಸಂದರ್ಭಗಳಲ್ಲಿ ನನ್ನನ್ನು ಒಂಟಿಯಾಗಿ ಇರಲು ಬಿಡಿ ಎಂದು ಬೇಸರಿಕೊಳ್ಳುತ್ತಿದ್ದರು ಎಂದಿದ್ದಾರೆ. ಜಯಲಲಿತಾ ಅನಾರೋಗ್ಯದ ಕಾರಣ 2016 ಸೆಪ್ಟೆಂಬರ್ 22ರಂದು ಆಸ್ಪತ್ರೆಗೆ ದಾಖಲಾಗಿದ್ದರು.
ಅಪೊಲೊ ಆಸ್ಪತ್ರೆ ಆಡಳಿತ ಮಂಡಳಿ ಬಿಡುಗಡೆ ಮಾಡಿದ ವರದಿಯಲ್ಲಿ... ಜಯಲಲಿತಾ ಮೆಡಿಕಲ್ ರಿಪೋರ್ಟ್ನಲ್ಲಿ ಹೊಸ ಸಂಗತಿಗಳೂ ಬೆಳಕು ಕಂಡಿದ್ದವು. ಜಯಲಲಿತಾ ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಐಸ್ಕ್ರೀಮ್ ತಿಂದ ಕಾರಣ ಸಕ್ಕರೆ ಲೆವೆಲ್ಸ್ ಏರಿಕೆಯಾಗಿತ್ತು ಎಂದು ಅಪೊಲೊ ಸಿಬ್ಬಂದಿ ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಾದಾಗ ಜಯ ಮೈಮೇಲೆ ಎಲ್ಲೂ ಗಾಯಗಳಾಗಿರಲಿಲ್ಲ. ಆಸ್ಪತ್ರೆಗೆ ದಾಖಲಾದ ಮರುದಿನ ಪ್ರಜ್ಞೆ ಬಂದಿತ್ತು. ಬಳಿಕ ಎರಡು ವಾರಗಳ ಕಾಲ ಎಚ್ಚರದಲ್ಲೇ ಇದ್ದರು. ಆ ಬಳಿಕ ಆರೋಗ್ಯ ವಿಷಮಿಸಿತು ಎಂದಿದೆ ಅಪೊಲೊ ಆಸ್ಪತ್ರೆ ಮಂಡಳಿ.
ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ತೆಗೆದಿರುವ ವಿಡಿಯೋ ಶಶಿಕಲಾ ಬಳಿ ಇವೆ ಎಂದು ಟಿಟಿವಿ ದಿನಕರನ್ ಆರೋಪಿಸಿದ್ದರು. ಆಸ್ಪತ್ರೆಯ ಬಳಿಯೂ ಆ ವೀಡಿಯೋಗಳಿವೆ. ಅದರಲ್ಲಿ ಜಯ ನೈಟಿಯಲ್ಲಿ ಇರುವ ಕಾರಣ ಆ ವಿಡಿಯೋ ಬಿಡುಗಡೆ ಮಾಡಿಲ್ಲ. ಅಗತ್ಯವಾದರೆ ತನಿಖಾಧಿಕಾರಿಗೆ ಆ ವಿಡಿಯೋ ನೀಡುತ್ತೇನೆ ಎಂದಿದ್ದಾರೆ. ಜಯಲಲಿತಾ ಬದುಕಿದ್ದಾಗ ತೆಪ್ಪಗಿದ್ದವರೆಲ್ಲಾ, ಆಕೆ ಮೃಪಟ್ಟ ಬಳಿಕ ಹುಲಿಗಳಂತಾಗಿದ್ದು ನೋಡಿಯೇ ಇದ್ದೇವೆ. ತಮಿಳುನಾಡಿನಲ್ಲಿ ಆದ ರಾಜಕೀಯ ಬೆಳವಣಿಗೆಗಳೇ ಇದಕ್ಕೆ ಸಾಕ್ಷಿ. ಜಯಲಲಿತಾ ಸಾವು ಒಂದು ರೀತಿ ರಹಸ್ಯವಾಗಿಯೇ ಉಳಿದಿದ್ದು ದಿನಕ್ಕೊಂದು ಸಂಗತಿ ಬಹಿರಂಗವಾಗುತ್ತಲೇ ಇದೆ.

Post a Comment