Header Ads

test

ಪೂಜೆಗೆ ಅಗರಬತ್ತಿಯನ್ನು ಯಾಕೆ ಹೊತ್ತಿಸುತ್ತೇವೆ? ಅದರ ಹಿಂದಿರುವ ವೈಜ್ಞಾನಿಕ ಕಾರಣ ಏನು ಅಂತ ಗೊತ್ತಾ?

ಪೂಜೆ ಮಾಡುವಾಗ ಹಿಂದೂ ಸಂಪ್ರದಾಯದಲ್ಲಿ ಅಗರಬತ್ತಿ ಕಂಡಿತ ಹೊತ್ತಿಸುತ್ತಾರೆ. ಯಾವುದೇ ದೇವರು, ದೇವತೆಗಳನ್ನು ಪೂಜಿಸಬೇಕಾದರೂ ಊದುಕಡ್ಡಿ ಹೊತ್ತಿಸಲೇಬೇಕು. ಇತರೆ ಧರ್ಮಗಳಲ್ಲೂ ಅಗರಬತ್ತಿ ಹೊತ್ತಿಸುವ ಸಂಪ್ರದಾಯ ಇದೆ. ಆದರೆ ಯಾರು ಯಾವ ರೀತಿ ಅಗರಬತ್ತಿ ಹೊತ್ತಿಸಿದರೂ..ಅವುಗಳನ್ನು ಬೆಳಗುವ ಹಿಂದೆ ಮಾತ್ರ ವೈಜ್ಞಾನಿಕ ಕಾರಣ ಅಡಗಿದೆ. ಅದೇನು, ಅದರಿಂದ ನಮಗೇನು ಲಾಭ ಆಗುತ್ತದೆ ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ.




1. ಈಗ ನಾನಾ ಸುವಾಸನೆ ಬೀರುವ ಅಗರಬತ್ತಿಗಳನ್ನು ತಯಾರಿಸಲಾಗುತ್ತಿದೆ. ಆದರೆ ಒಂದು ಕಾಲದಲ್ಲಿ ಲೋಬನ್, ಗುಗ್ಗುಲ್ ಎಂಬ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತಿತ್ತು. ಆ ರೀತಿಯ ಪದಾರ್ಥಗಳಿಂದ ತಯಾರಿಸಿದ ಅಗರಬತ್ತಿ ಹೊತ್ತಿಸುವುದರಿಂದ, ಅದರಲ್ಲಿನ ಧೂಪದಲ್ಲಿ ಅನೇಕ ಔಷಧಿ ಗುಣಗಳಿರುತ್ತವೆ. ಆ ಹೊಗೆಯನ್ನು ನಾವು ಆಘ್ರಾಣಿಸಿದಾಗ ಮಿದುಳು ರಿಲ್ಯಾಕ್ಸ್ ಆಗುತ್ತದೆ.

2. ಅಗರಬತ್ತಿಗಳಿಂದ ಬಿಡುಗಡೆಯಾಗುವ ಹೊಗೆ ಹೀರಿಕೊಳ್ಳುವುದರಿಂದ ಮನಸ್ಸು ಪ್ರಶಾಂತಗೊಳ್ಳುತ್ತದೆ. ಆತಂಕ, ಒತ್ತಡ ಕಡಿಮೆಯಾಗುತ್ತದೆ.

3. ಅಗರಬತ್ತಿ ಹೊಗೆಯಲ್ಲಿ ಆಂಟಿ ಸೆಪ್ಟಿಕ್, ಆಸ್ಟ್ರಿಜೆಂಟ್ ಗುಣಗಳಿರುತ್ತವೆ. ನಮ್ಮ ಶರೀರದ ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇನ್‍ಫೆಕ್ಷನ್‌ಗಳನ್ನು ಕಡಿಮೆ ಮಾಡುತ್ತದೆ.

4. ಅಗರಬತ್ತಿಯನ್ನು ಹೊತ್ತಿಸುವುದರಿಂದ ಸುತ್ತಮುತ್ತ ಇರುವ ಗಾಳಿ ಶುದ್ಧವಾಗುತ್ತದೆ. ಪರಿಶುದ್ಧವಾದ, ಸ್ವಚ್ಛವಾದ ಗಾಳಿ ನಮಗೆ ಲಭಿಸುತ್ತದೆ. ಇದರಿಂದ ಗಾಳಿಯ ಮಾಲಿನ್ಯ ಆಗುವುದಿಲ್ಲ.

5. ಅಗರಬತ್ತಿ ಹೊಗೆಯನ್ನು ಹೀರಿಕೊಂಡರೆ ಅದರಲ್ಲಿನ ಔಷಧಿ ಗುಣಗಳು ಏಕಾಗ್ರತೆ, ಓದಿನಲ್ಲಿ ಹಿಡಿತವನ್ನು ಹೆಚ್ಚಿಸುತ್ತವೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನ ಇದೆ. ಅವರು ಏಕಾಗ್ರತೆಯಿಂದ ಓದಿ ಯಶಸ್ಸು ಸಾಧಿಸುತ್ತಾರೆ.

6. ವಾಸ್ತುಪ್ರಕಾರ ಅಗರಬತ್ತಿ ಹೊತ್ತಿಸುವುದರಿಂದ ಸಾಕಷ್ಟು ಒಳಿತಾಗುತ್ತದೆ. ಇದರಿಂದ ಮನೆಯಲ್ಲಿನ ನೆಗಟೀವ್ ಎನರ್ಜಿ ಹೋಗಿ ಪಾಸಿಟೀಟ್ ಎನರ್ಜಿ ತುಂಬಿಕೊಳ್ಳುತ್ತದೆ.

7. ಆದರೆ ಇತ್ತೀಚೆಗೆ ಬರುತ್ತಿರುವ ಅಗರಬತ್ತಿಗಳಲ್ಲಿ ಹೆಚ್ಚಾಗಿ ರಸಾಯನಿಕಗಳನ್ನು ಸೇರಿಸಲಾಗುತ್ತಿದೆ. ಅವುಗಳನ್ನು ಕೊಳ್ಳುವ ಮುನ್ನ, ಅವುಗಳಲ್ಲಿನ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಅಗರಬತ್ತಿಯಲ್ಲಿನ ವಿಷ ರಸಾಯನಿಕಗಳನ್ನು ಹೀರಿಕೊಳ್ಳಬೇಕಾಗುತ್ತದೆ. ಆಗ ಮೇಲೆ ತಿಳಿಸಿದ ಪ್ರಯೋಜನಗಳಿಗೆ ಬದಲಾಗಿ ಅನಾರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳೇ ಜಾಸ್ತಿ.

No comments