Header Ads

test

ಆ ಮಂದಿರಕ್ಕೆ ಹೋದರೆ... ನಿಮ್ಮ ಸಾವು ಯಾವಾಗ ಎಂದು ತಿಳಿದುಕೊಳ್ಳಬಹುದು..! ಅದು ಎಲ್ಲಿದೆ ಗೊತ್ತಾ.?ವಿಶಿಷ್ಟ ಆಲಯ.!

ಆ ಕ್ಷೇತ್ರವನ್ನು ಸಂದರ್ಶಿಸುವುದರಿಂದ ಮಾಡಿದ ಪಾಪಕಾರ್ಯಗಳೆಲ್ಲಾ ಹೋಗಿ ಖಂಡಿತ ಮೋಕ್ಷ ಲಭಿಸುತ್ತದೆ ಎನ್ನುತ್ತಾರೆ. ಇನ್ನೂ ಕೆಲವರು ವಯಸ್ಸಾದವರು ಜೀವನದ ಕೊನೆಗಾಲದಲ್ಲಿ ಇಲ್ಲೇ ಆಶ್ರಯ ಪಡೆಯುತ್ತಾ ತಮ್ಮ ಪ್ರಾಣವನ್ನು ಬಿಡುತ್ತಾರೆ. ಅದೇ ಹಿಮಾಲಯ ಪರ್ವತಗಳಲ್ಲಿ ಇರುವ ಪಶುಪತಿನಾಥ ದೇವಾಲಯ. ಇಲ್ಲಿ ಪರಮಶಿವನು ಪಶುಪತಿನಾಥ ರೂಪದಲ್ಲಿ ನೆಲೆಸಿದ್ದಾನೆ. ಆ ಆಲಯ ವಿಶಿಷ್ಟತೆ ಏನು ಎಂಬುದನ್ನು ನೋಡೋಣ.



ಸಾಮಾನ್ಯವಾಗಿ ಹುಟ್ಟು ಸಾವನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಆದರೆ ಈ ಪಶುಪತಿನಾಥ ಆಲಯದಲ್ಲಿ ಮುಖ್ಯ ಅರ್ಚಕರು ಭಕ್ತರ ಮರಣಕ್ಕೆ ಸಂಬಂಧಿಸಿದ ದಿನ, ಸಮಯವನ್ನು ಖಚಿತವಾಗಿ ತಿಳಿಸುತ್ತಾರೆ. ಇಲ್ಲಿನ ವಾತಾವರಣದಲ್ಲಿ ಮರಣ ದೇವತೆ ಇರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ಪಶುಪತಿನಾಥ ದೇವಾಲಯ ಚಿನ್ನದ ಶಿಖರದಿಂದ ಅತ್ಯಂತ ಸುಂದರವಾಗಿ ಕಾಣಿಸುತ್ತಿರುತ್ತದೆ. ಈ ದೇವಾಲಯ ಭಗವತಿ ನದಿ ತೀರದಲ್ಲಿ, ಪಶ್ಚಿಮ ದಿಕ್ಕಿನಲ್ಲಿದೆ. ಈ ದೇವಾಲಯಕ್ಕೆ ನಾಲ್ಕು ಮುಖ್ಯ ದ್ವಾರಗಳು ಇವೆ. ಈ ದೇವಾಲಯ ಪ್ರಮುಖ ಶಿಖರಗಳ ಮೇಲೆ ಬಂಗಾರದ ಕಳಶಗಳನ್ನು ಪ್ರತಿಷ್ಠಾಪಿಸಲಾಗಿದೆ. ಆ ಸೂರ್ಯನ ಕಿರಣಗಳು ಇವುಗಳ ಮೇಲೆ ಬಿದ್ದಾಗ ಅವು ಹೊಳೆಯುತ್ತಾ ಕಣ್ಣಿಗೆ ಹಬ್ಬ ಉಂಟು ಮಾಡುತ್ತವೆ. ಈ ದೇವಾಲಯದ ಗರ್ಭಗುಡಿಗೆ ಕೇವಲ ಹಿಂದೂಗಳನ್ನು ಮಾತ್ರ ಅನುಮತಿಸುತ್ತಾರೆ. ಉಳಿದ ದೇವಾಲಯದ ಪ್ರಾಂಗಣಕ್ಕೆ ಯಾರು ಬೇಕಾದರೂ ಹೋಗಬಹುದು.

ಈ ಗುಡಿಯೊಳಗೆ ಚರ್ಮದ ವಸ್ತುಗಳ ಪ್ರವೇಶವಿಲ್ಲ. ಪಶುಪತಿನಾಥನ ಗರ್ಭಾಂಕಣದ ಮುಂದೆ ಬೆಳ್ಳಿ ತಗಡು ಹೊದಿಸಿದ ನಂದಿ ವಿಗ್ರಹವಿದೆ. ಗುಡಿಯ ಮುಂದೆ ಸಣ್ಣದಾದ ನದಿ ಹರಿಯುತ್ತದೆ. ಆ ನದಿಯನ್ನು ಅವರು ಪವಿತ್ರ ಗಂಗೆಗೆ ಹೋಲಿಸುತ್ತಾರೆ. ಅದರ ಜಲವನ್ನು ಜನ ತೀರ್ಥದಂತೆ ಸೇವಿಸುತ್ತಾರೆ ಹಾಗೂ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುತ್ತಾರೆ. ವಿಪರ್ಯಾಸವೆಂದರೆ ಅದೇ ನದಿಯ ತಟದಲ್ಲಿ ಶವಗಳನ್ನು ಸುಟ್ಟು ಬೂದಿ ವಿಸರ್ಜಿಸುತ್ತಾರೆ. ವಿಶೇಷವೆಂದರೆ ಈ ಪಶುಪತಿನಾಥನ ಅರ್ಚಕರು ಕನ್ನಡಿಗರು. ಇದು ತಲತಲಾಂತರದಿಂದ ನಡೆದು ಬಂದ ಪದ್ಧತಿಯಂತೆ. ಕಠ್ಮಂಡುವಿನಲ್ಲಿ ಈ ಗುಡಿ ಮಾತ್ರವಲ್ಲದೆ ಸ್ವಯಂಭುನಾಥ, ಬುದ್ಧನಾಥ ಮುಂತಾದ ಇತರ ಹಲವಾರು ಗುಡಿಗಳಿವೆ. ಒಂದು ಗುಡಿಯಲ್ಲಂತೂ ಮಾಂಸವನ್ನು ದೇವರಿಗೆ ಎಡೆಯಾಗಿ ಸಲ್ಲಿಸುವ ಪರಿಪಾಠವಿದೆ.

No comments