Header Ads

test

ವಿಡಿಯೋ: ಅಯ್ಯೋ ನಿನ್ನ ಸಂಭ್ರಮಕ್ಕಿಷ್ಟು ಬೆಂಕಿ ಹಾಕ... ಸ್ವಲ್ಪ ದಿನ ತಡ್ಕೋಳೋ ಆಮೇಲೆ ನಿನಗೆಗೊತ್ತಾಗುತ್ತದೆ..!

ಮದುವೆ ಬಳಿಕ ಇತ್ತೀಚೆಗೆ ಭರಾತ್ ಸಂಭ್ರಮ ಸಾಮಾನ್ಯ ಎಂಬಂತಾಗಿದೆ. ಭರಾತ್ ಇಲ್ಲದ ಮದುವೆಯನ್ನು ಜನ ಅಷ್ಟಾಗಿ ಹಿಡಿಸಿಕೊಳ್ಳುತ್ತಿಲ್ಲ. ಮುಖ್ಯವಾಗಿ ಯೂತ್ ಯಾವುದಾದರು ಮದುವೆಗೆ ಹೋಗಬೇಕು ಎಂದರೆ ಭರಾತ್ ಇದೆಯೇ ಎನ್ನುತ್ತಾರೆ. ಕುಡಿದು ತೂರಾಡಬಹುದು ಎಂಬುದು ಅವರ ಉದ್ದೇಶ. ಭರಾತ್‌ನಲ್ಲಿ ಮದುಮಗ, ಮದು ಮಗಳು ಖುಷಿಯಾಗಿ ಎರಡು ಸ್ಟೆಪ್‌ಗಳು ಹಾಕುವುದನ್ನು ನಾವೆಲ್ಲಾ ನೋಡುತ್ತಿರುತ್ತೇವೆ. ಆ ಎರಡು ಸ್ಟೆಪ್ ಸಹ ತುಂಬಾ ಬಲವಂತ ಮಾಡಿದರೆ ಹೊರತು ಹಾಕಲ್ಲ.



ಹೊಸದಾಗಿ ಮದುವೆಯಾದ ಹುಡುಗಿ ನಾಲ್ಕು ಮಂದಿಯ ಎದುರಿಗೆ ಗಂಡನ ಕೈ ಹಿಡಿಯಲು ನಾಚಿಕೆ ಪಡುತ್ತಾಳೆ. ಅಂತಹದ್ದು ಆತನ ಜೊತೆಗೆ ಡಾನ್ಸ್ ಮಾಡಲು ಮುಂದೆ ಬರುತ್ತಾಳಾ. ಆದರೆ ಕೆಲವು ಹುಡುಗಿಯರು ಮಾತ್ರ ಯಾವುದೇ ನಾಚಿಕೆ ಇಲ್ಲದೆ ಡಾನ್ಸ್ ಮಾಡಲು ಮುಂದೆ ಬರುತ್ತಾರೆ. ಇನ್ನು ಹುಡುಗರು ಸ್ವಲ್ಪ ತೊಂದರೆ ಅನ್ನಿಸಿದರೂ ಸಹ ಸ್ನೇಹಿತರಿಗಾಗಿ ಡಾನ್ಸ್ ಮಾಡುತ್ತಾರೆ. ಆದರೆ ಇವನ್ಯಾರೋ ಏನೋ ಮದುವೆ ಆಗಿದೆ ಎಂದು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಮದು ಮಗಳ ಜತೆಗೆ ಡಾನ್ಸ್ ಮಾಡುವುದನ್ನು ಬಿಟ್ಟು ಕುಡಿದವರಂತೆ ಡಾನ್ಸ್ ಮಾಡುತ್ತಾ ಏಕಾಏಕಿ ಮದು ಮಗಳನ್ನೇ ಎತ್ತಿಕೊಂಡು ಡಾನ್ಸ್ ಮಾಡಿದ.

ಈ ಮದುವೆ ಎಲ್ಲಿ ನಡೆಯಿತು.. ಯಾವಾಗ ನಡೆಯಿತೋ ಗೊತ್ತಿಲ್ಲ. ಆದರೆ ಸಾಮಾಜಿಕ ಮಾಧ್ಯಮದಲ್ಲಂತೂ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಮದು ಮಗಳನ್ನು ಹೇಗೆ ಎತ್ತಿಕೊಂಡು ಹುಚ್ಚು ಹುಚ್ಚಾಗಿ ಡಾನ್ಸ್ ಮಾಡುವುದನ್ನು ನೋಡಿ... ಏನೋ ಇದು ನಿನ್ನ ಹುಚ್ಚಾಟ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಮದುವೆಗಾಗಿ ಎಂದಿನಿಂದಲೋ ಎದುರು ನೋಡುತ್ತಿರುವಂತೆ, ಅಣ್ತಮ್ಮ ತಡ್ಕೊಳ್ಳಕ್ಕೆ ಆಗುತ್ತಿಲ್ಲ ಎಂದು ಕೆಲವರು ಕಾಮೆಂಟ್ಸ್ ಮಾಡುತ್ತಿದ್ದಾರೆ. ಒಟ್ಟಾರೆ ಮದು ಮಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಾನೆ. ಮದುವೆ ಗಂಡು, ಮದುವೆ ಹೆಣ್ಣನ್ನು ಎತ್ತಿಕೊಂಡು ಡಾನ್ಸ್ ಮಾಡುವುದನ್ನು ಎಲ್ಲಿಯಾದರೂ ನೋಡಿರುತ್ತೀವಾ? ಮದುವೆ, ಹೆಂಡತಿ ಎಂದರೆ ಅಣ್ತಮ್ಮ ಸಿಕ್ಕಾಪಟ್ಟೆ ಕ್ರೇಜ್ ಅನುಭವಿಸುತ್ತಿರುವಂತೆ ಇದ್ದಾನೆ. ಮದುವೆಯಾದ ಮೇಲೆ ಒಂದು ಮೂರು ತಿಂಗಳು ಕಳೆದರೆ ಆಗ ಇವನಿಗೆ ನಿಜವಾದ ಸಂಗತಿ ಗೊತ್ತಾಗುತ್ತದೆ ಎಂಬ ಕಾಮೆಂಟ್‌ಗಳು ಹರಿದಾಡುತ್ತಿವೆ.

ಈ ವೀಡಿಯೋಗಾಗಿ ಕ್ಲಿಕ್ ಮಾಡಿ
ಯಾರೇ ಆಗಲಿ ಮದುವೆಯಾಗಿರುವವರು ಬೇರೆಯವರು ಮದುವೆಯಾಗುತ್ತಿದ್ದರೆ ಮುಸಿಮುಸಿ ನಗುತ್ತಾರೆ. ಬ್ಯಾಚುಲರ್ ಆಗಿ ಸಾಕಷ್ಟು ಎಂಜಾಯ್ ಮಾಡಿದ್ದೆ ಎಂದು ಗೆಳೆಯರ ಬಳಿ ಹೇಳಿಕೊಳ್ಳುತ್ತಾರೆ. ಇವನೋ ಹೆಂಡತಿಯನ್ನೇ ಎತ್ತಿಕೊಂಡು ಕುಣಿಯುತ್ತಿದ್ದಾರೆ. ಅಣ್ಣಯ್ಯನಿಗೆ ನಿಧಾನಕ್ಕೆ ಗೊತ್ತಾಗುತ್ತದೆ ಬಿಡು. ಈಗ ಕುಣಿದಿದ್ದು ಒಂದೆರಡು ವರ್ಷಗಳ ಬಳಿಕ ಕೇಳಿದರೆ ಗೊತ್ತಾಗುತ್ತದೆ ಬಿಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

No comments