Header Ads

test

ಆಪಲ್ ಬೋರೆ ಹಣ್ಣಿನಲ್ಲಿ ಆಲ್ಕೋಹಾಲ್ (ಮದ್ಯ) ಕಂಟೆಂಟ್ ಇದೆಯೇ.? ವೈರಲ್ ಆಗುತ್ತಿರುವ ವೀಡಿಯೋದಲ್ಲಿನನಿಜವೆಷ್ಟು?

ಎಲಚಿ ಹಣ್ಣು, ಆಪಲ್ ಬೋರೆ ಹಣ್ಣು, ಬಾರೆ ಹಣ್ಣು ಎಂದು ಇದನ್ನು ಕರೆಯುತ್ತಾರೆ. ಈಗ ಎಲ್ಲಿ ನೋಡಿದರೂ ರಾಶಿ ರಾಶಿ ಆಪಲ್ ಬೋರೆ ಹಣ್ಣುಗಳನ್ನು ಕಾಣಬಹುದು. ತಿನ್ನಲು ಬಲು ರುಚಿಯಾಗಿರುತ್ತವೆ. ಬೀಜ ತುಂಬಾ ಗಡುಸು, ತಿರುಳು ರುಚಿಕರವಾಗಿರುತ್ತದೆ. ಈಗ ಈ ಹಣ್ಣಿಗೆ ಸಂಬಂಧಿಸಿದ ವೀಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ಅದು ಏನು ಎಂಬುದನ್ನು ನೋಡೋಣ.

ಬೋರೆ ಹಣ್ಣಿನಲ್ಲಿ ಆಲ್ಕೋಹಾಲ್ ಕಂಟೆಂಟ್ ಇದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇಷ್ಟಕ್ಕೂ ಬೋರೆ ಹಣ್ಣಿನಲ್ಲಿ ಆಲ್ಕೋಹಾಲ್ ಇರುವುದು ಏನು? ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲರೂ ಬೋರೆ ಹಣ್ಣನ್ನು ಇಷ್ಟಪಟ್ಟು ತಿನ್ನುತ್ತಾರೆ. ಇತ್ತೀಚೆಗೆ ಬೋರೆ ಹಣ್ಣಿನಲ್ಲಿ ಆಲ್ಕೋಹಾಲ್ ಕಂಟೆಂಟ್ ಇದೆ ಎಂದು ಬೋರೆ ಹಣ್ಣು ತಿಂದು ಗಾಡಿ ಓಡಿಸುವಾಗ ದಾರಿಯಲ್ಲಿ ಟ್ರಾಫಿಕ್ ಪೊಲೀಸ್ ಡ್ರಂಕ್ ಅಂಡ್ ಡ್ರೈವ್ ಪರೀಕ್ಷೆ ಮಾಡಿದಾಗ, ಬ್ರೀತ್ ಅನಲೈಸರ್ ಅಲ್ಕೋಹಾಲ್ ಕಂಟೆಂಟ್ ಡಿಟೆಕ್ಟ್ ಮಾಡುತ್ತಿದೆ ಎಂಬ ವಿಡಿಯೊ ತೆಗೆದಿದ್ದಾರೆ. ಆ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.



ಬೋರೆ ಹಣ್ಣಿನಲ್ಲಿ ಆಲ್ಕೋಹಾಲ್ ಕಂಟೆಂಟ್ ಇದೆ ಎಂದರೆ ಯಾರೂ ನಂಬಲ್ಲ. ಇದನ್ನು ನಿರೂಪಿಸಲು ಪೊಲೀಸರು ನಿರ್ವಹಿಸಿದ ಟೆಸ್ಟ್‌ನಲ್ಲಿ ಬೋರೆ ಹಣ್ಣು ತಿಂದ ಬಳಿಕ ಬ್ರೀತ್ ಅನಲೈಸಲ್ ಚೆಕ್ ಮಾಡಿದರೆ ಆಲ್ಕೋಹಾಲ್ ಕಂಟೆಂಟ್ ತೋರಿಸಲಿಲ್ಲ. ಮದ್ಯ ಸೇವಿಸಿದರೆ ಬ್ರೀತ್ ಅನಲೈಸರ್ ಆಲ್ಕೋಹಾಲ್ ಕಂಟೆಂಟ್ ಡಿಟೆಕ್ಟ್ ಮಾಡುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೋರೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಣ್ಣು ತಿಂದು ಗಾಡಿ ಓಡಿಸಿದರೆ ಬ್ರೀತ್ ಅನಲೈಸರ್‌ನಲ್ಲಿ ಆಲ್ಕೋಹಾಲ್ ಕಂಟೆಂಟ್ ತೋರಿಸುತ್ತಿದೆ ಎಂಬ ವೈರಲ್ ಆಗುತ್ತಿರುವ ವೀಡಿಯೋ ಸುಳ್ಳು ಎಂದು ಪೊಲೀಸರು ಹೇಳಿದ್ದಾರೆ. ಆ ವಿಡಿಯೋದಲ್ಲಿರುವುದು ಫೇಕ್ ಮೆಷಿನ್, ಆ ವೀಡಿಯೋ ಒಟ್ಟಾರೆ ಫೇಕ್, ಸರಕಾರಿ ಮೆಷಿನ್‌ಗಳು ಕೇವಲ ಆಲ್ಕೋಹಾಲ್ ಕುಡಿದವರು ಜೋರಾಗಿ ಊದಿದರೆ ಆಲ್ಕೋಹಾಲ್ ಕಂಟೆಂಟ್ ತೋರಿಸುತ್ತದೆ. ಒಂದು ವೇಳೆ ಬೋರೆ ಹಣ್ಣನ್ನು ಮದ್ಯದಲ್ಲಿ ಹೆಚ್ಚು ಹೊತ್ತು ಇಟ್ಟು ತಿಂದರೆ ಆಗ ಆಲ್ಕೋಹಾಲ್ ಕಂಟೆಂಟ್ ತೋರಿಸುತ್ತದೆ. ಒಟ್ಟಾರೆ ಹರಿದಾಡುತ್ತಿರುವ ವೀಡಿಯೋ ಫೇಕ್ ಆಗಿರುವ ಕಾರಣ ಬೋರೆ ಹಣ್ಣನ್ನು ಯಾರು ಬೇಕಾದರೂ ತಿನ್ನಬಹುದು.

Watch Video:

https://www.facebook.com/Tarakapuri/videos/748223258871502/

No comments