Header Ads

test

ಟೂತ್ ಬ್ರಷ್‌ನಿಂದ ನಿಮ್ಮ ಮೂಗಿನ ಮೇಲೆ ರಬ್ ಮಾಡಿ ನೋಡಿ..ರಿಸಲ್ಟ್ ನೋಡಿ ಚಕಿತರಾಗುತ್ತೀರ.!

ಮೊಡವೆಗಳು, ಕಪ್ಪು ಕಲೆಗಳು, ಬ್ಲಾಕ್ ಹೆಡ್ಸ್ ಎಂಬುದು ಮುಖವನ್ನು ಕಳಾಹೀನವಾಗಿಸುತ್ತವೆ. ಮುಖದ ಮೇಲೆ ಬರುವ ಬ್ಲಾಕ್ ಹೆಡ್ಸ್ ಹೆಚ್ಚಾಗಿ ಮೂಗಿನ ಮೇಲೆ ಬಂದು ಅಸಹ್ಯವಾಗಿ ಕಾಣಿಸುತ್ತವೆ. ಕೆಲವು ಸಲ ಅದೆಷ್ಟೇ ಕಾಸ್ಮೆಟಿಕ್ಸ್ ಬಳಸಿದರೂ ಸರಿಯಾದ ಫಲಿತಾಂಶ ಸಿಕ್ಕಿರಲ್ಲ. ಆಗ ಸಹಜವಾದ ಪದ್ಧತಿಗಳಿಂದ ತುಂಬಾ ಸುಲಭವಾಗಿ ಪರಿಹಾರವಾಗುತ್ತದೆ. ಅಂತಹ ಸುಲಭವಾದ ಸಲಹೆಗಳಿಂದ ಬ್ಲಾಕ್ ಹೆಡ್ಸ್‌ನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.



ಈ ರೆಮಿಡಿಗೆ ಬೇಕಾದ ಪದಾರ್ಥಗಳು
ಟೂತ್‌ ಪೇಸ್ಟ್ - 1 ಸ್ಫೂನ್
ಬೇಕಿಂಗ್ ಸೋಡ - 1 ಸ್ಫೂನ್
ಉಗುರು ಬೆಚ್ಚಗಿನ ನೀರು - ಸರಿಹೊಂದುವಷ್ಟು
ಟೂತ್ ಬ್ರಷ್

ಹೇಗೆ ಉಪಯೋಗಿಸುವುದು
ಒಂದು ಬೌಲ್‌ನಲ್ಲಿ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ಟೂತ್ ಪೇಸ್ಟ್, ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಈಗ ಈ ಮಿಶ್ರಣವನ್ನು ಬ್ಲಾಕ್ ಹೆಡ್ಸ್ ಇರುವ ಬಳಿ ಅಪ್ಲೈ ಮಾಡಬೇಕು. ಸ್ವಲ್ಪ ಹೊತ್ತು ಆದ ಬಳಿಕ ಟೂತ್ ಬ್ರಷ್ ತೆಗೆದುಕೊಂಡು ಮೃದುವಾಗಿ ಆ ಮಿಶ್ರಣದ ಅಪ್ಲೈ ಮಾಡಿದ ಕಡೆ ಮಸಾಜ್ ಮಾಡಬೇಕು. ಬಳಿಕ ಒಂದು ನಿಮಿಷದ ಕಾಲ ಹಾಗೆಯೇ ಬಿಟ್ಟು ಒಣ ಬಟ್ಟೆಯಿಂದ ವರೆಸಿ ಉಗುರು ಬೆಚ್ಚಗಿನ ನೀರಿನಲ್ಲಿ ಶುಭ್ರವಾಗಿ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಅದರಿಂದ ಬ್ಲಾಕ್ ಹೆಡ್ಸ್ ಹೋಗಿ ಮುಖ ತುಂಬಾ ಮೃದುವಾಗಿ ಬದಲಾಗುತ್ತದೆ. ಈ ರೀತಿ ನಿತ್ಯ ಮಾಡುತ್ತಿದ್ದರೆ ಬ್ಲಾಕ್ ಹೆಡ್ಸ್ ನಿಧಾನಕ್ಕೆ ಕಡಿಮೆಯಾಗುತ್ತವೆ. ಮುಖ ಫಳಫಳ ಎದು ಹೊಳೆಯುತ್ತದೆ.

ಕಪ್ಪು ಕಲೆ ನಿವಾರಿಸಿಕೊಳ್ಳಳು ಇನ್ನೊಂದಿಷ್ಟು ಮನೆ ಮದ್ದು:
ವಾರಕ್ಕೊಮ್ಮೆ ಒಂದು ಹಸಿ ಆಲೂಗಡ್ಡೆಗೆ ಒಂದು ನಿಂಬೆಹಣ್ಣಿನ ಪೂರ್ತಿ ರಸ ಮತ್ತು ಅರ್ಧ ಚಮಚ ಅರಿಶಿನ ಬೆರೆಸಿ ಪೇಸ್ಟ್‌ ಮಾಡಿ ಮುಖಕ್ಕೆ ಲೇಪಿಸಿ 30 ನಿಮಿಷ ಬಿಟ್ಟು ಮುಖ ತೊಳೆದರೆ ಕಪ್ಪು ಕಲೆಗಳು ಕಡಿಮೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ.

ನಿಂಬೆ ರಸ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಮುಖಕ್ಕೆ ಸ್ಕ್ರಬ್ ಮಾಡಿದರೆ ಇವುಗಳನ್ನು ಹೋಗಲಾಡಿಸಬಹುದು.

ಅರಶಿನವನ್ನು ಕುಟ್ಟಿ ಪುಡಿಮಾಡಿ ಪುದೀನ ರಸದೊಂದಿಗೆ ಬೇರೆಸಿ ಮುಖಕ್ಕೆ ಹಚ್ಚಿದರೆ ಕಪ್ಪುಕಲೆ ನಿವಾರಣೆಯಾಗುತ್ತದೆ. ಹಸಿ ಆಲೂಗಡ್ಡೆಯನ್ನು ರುಬ್ಬಿ ಹಾಲಿನೊಂದಿಗೆ  ಸೇರಿಸಿ ಮುಖಕ್ಕೆ ಹಚ್ಚಿ. ಇದರಿಂದಲೂ ಸಹ ಕಪ್ಪುಕಲೆ ತೊಲಗುತ್ತದೆ. ಕಿತ್ತಳೆ ಸಿಪ್ಪೆಯಿಂದ ಮುಖಕ್ಕೆ ಸ್ಕ್ರಬ್ ಮಾಡಿದರೆ ಇವು ನಿವಾರಣೆಯಾಗುತ್ತದೆ.

No comments