Header Ads

test

ದೇವಾಲಯಕ್ಕೆ ಹೋದಾಗ ಪಾಲಿಸಬೇಕಾಗಿರುವ ಹತ್ತು ನಿಯಮಗಳು..!

ಪ್ರತಿ ದಿನ ಅಥವಾ ವಾರಕ್ಕೊಮ್ಮೆ ಅವರವರ ಅಭ್ಯಾಸದಂತೆ ದೇವಸ್ಥಾನಕ್ಕೆ ಹೋಗುತ್ತಿರುತ್ತಾರೆ. ಕೆಲವರು ಇಷ್ಟದೈವವನ್ನು ದರ್ಶಿಸಿಕೊಳ್ಳಲು ಹೋದರೆ, ಇನ್ನೂ ಕೆಲವರು ಮಾನಸಿಕ ನೆಮ್ಮದಿಗಾಗಿ ದೇವಾಲಯಕ್ಕೆ ಹೋಗುತ್ತಾರೆ. ದೇವಸ್ಥಾನಕ್ಕೆ ಹೋದಾಗ ನಮಗೆ ತಿಳಿಯದಂತೆ ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತೇವೆ. ಆ ರೀತಿ ಅಲ್ಲದೆ ದೇವಸ್ಥಾನಕ್ಕೆ ಹೋದಾಗ ಪಾಲಿಸಬೇಕಾಗಿರುವ ನಿಯಮಗಳು ತಿಳಿದುಕೊಂಡರೆ ಇನ್ನು ಮುಂದೆ ಆ ರೀತಿಯ ತಪ್ಪುಗಳನ್ನು ಮಾಡುವ ಸಾಧ್ಯತೆಗಳಿರಲ್ಲ..ಹಾಗಾಗಿ ದೇವಸ್ಥಾನಕ್ಕೆ ಹೋದಾಗ ಪಾಲಿಸಬೇಕಾಗಿರುವ ನಿಯಮಗಳ ಬಗ್ಗೆ ತಿಳಿದುಕೊಳ್ಳಿ.




1) ತೀರ್ಥವನ್ನು ಸ್ವೀಕರಿಸುವಾಗ ಮೂರು ಬಾರಿ ಬೇರೆಬೇರೆಯಾಗಿ, ಒಂದರ ಬಳಿಕ ಇನ್ನೊಂದು ಬೆರೆಯದಂತೆ ಸ್ವೀಕರಿಸಬೇಕು. ಒಂದೇ ಬಾರಿ ಮೂರನ್ನೂ ಸೇವಿಸಬಾರದು.

2) ಬತ್ತಿಯನ್ನು ಎಣ್ಣೆಯಲ್ಲಿ ನೆನೆಸಿ ಹೊತ್ತಿಸಬೇಕು. ಅದರಿಂದ ಎರಡು ಬತ್ತಿಗಳನ್ನೂ (ದೀಪಾರಾಧನ) ಬೆಳಗಬೇಕು. ಬೆಳಗಿನ ವೇಳೆ ಪೂರ್ವ ದಿಕ್ಕಿನ ಕಡೆಗೆ ಎರಡು ಬತ್ತಿಗಳು ಇರುವಂತೆ ದೀಪದ ಮುಖ ಇರಬೇಕು. ಸಂಜೆ ವೇಳೆ ಒಂದು ಬತ್ತಿ ಪೂರ್ವಕ್ಕೆ, ಇನ್ನೊಂದು ಪಶ್ಚಿಮಕ್ಕೆ ಇರಬೇಕು.

3) ಪ್ರದಕ್ಷಿಣೆ: ವಿನಾಯಕನಿಗೆ ಒಂದು, ಈಶ್ವರನಿಗೆ ಮೂರು, ದೇವತೆಗಳಿಗೆ ನಾಲ್ಕು, ವಿಷ್ಣು ಮೂರ್ತಿಗೆ ನಾಲ್ಕು, ಆಲದಮರಕ್ಕೆ ಏಳು ಪ್ರದಕ್ಷಿಣೆಗಳನ್ನು ಹಾಕಬೇಕು.

4) ಪ್ರಸಾದವನ್ನು ಸ್ವೀಕರಿಸದೆ ಬಿಸಾಡಬಾರದು.

5) ದೀಪವನ್ನು ಬಾಯಿಂದ ಆರಿಸಬಾರದು. ಒಂದು ದೀಪದ ಬೆಳಕಿನಿಂದ, ಎರಡನೇ ದೀಪವನ್ನು ಬೆಳಗಿಸಬಾರದು. ದೀಪ ಬೆಳಗಿದ ಕೂಡಲೇ ಮನೆಯಿಂದ ಹೊರಗೆ ಹೋಗಬಾರದು.

6) ದೇವಾಲಯಕ್ಕೆ ಹೋದಾಗ ವಿಗ್ರಹಕ್ಕೆ ಎದುರಾಗಿ ನಿಂತು ನಮಸ್ಕಾರ, ಸ್ತೋತ್ರಗಳನ್ನು ಪಠಿಸಬಾರದು. ಪಕ್ಕಕ್ಕೆ ನಿಂತು ಕೈಜೋಡಿಸಿ ನಮಸ್ಕರಿಸಿ ಬೇಡಿಕೊಳ್ಳಬೇಕು. ದೇವರ ಪೂಜೆಗೆ ಬಳಸುವ ಆಸನ ಬೇರೆ ಕೆಲಸಗಳಿಗೆ ಬಳಸಿಕೊಳ್ಳಬಾರದು.

7) ಪುರುಷರು ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಬಹುದು. ಮಹಿಳೆಯರು ಮಾಡಬಾರದು. ಮಹಿಳೆಯರು ಮೊಳಕಾಲಿನ ಮೇಲೆ ಬಾಗಿ, ನೆತ್ತಿಯನ್ನು ನೆಲಕ್ಕೆ ತಾಗಿಸಿ ನಮಸ್ಕಾರ ಮಾಡಬೇಕು.

8) ಶಿವಲಿಂಗಕ್ಕೂ, ನಂದಿಗೂ ನಡುವೆ ನಡೆಯಬಾರದು.

9) ಯಾವುದೇ ದೇವಾಲಯಕ್ಕೆ ಹೋದರೂ ಮೊದಲು ಧ್ವಜಸ್ತಂಭವನ್ನು ದರ್ಶಿಸಿಕೊಳ್ಳಬೇಕು. ಶಿವಾಲಯಕ್ಕೆ ಹೋದಾಗ ಮೊದಲು ನವಗ್ರಹಳನ್ನು ದರ್ಶಿಸಿ, ಪ್ರದಕ್ಷಿಣೆ ಹಾಕಿ, ಕಾಲು ತೊಳೆದುಕೊಂಡು ಬಳಿಕ ದರ್ಶಿಸಿಕೊಳ್ಳಬೇಕು. ಮೊದಲು ಪಾದಗಳನ್ನು ನೋಡಿ, ಬಳಿಕ ಆಪಾದಮಸ್ತಕವನ್ನು ದರ್ಶಿಸಿಕೊಳ್ಳಬೇಕು.

10) ಮಹಿಳೆಯರು ಓಂಕಾರವನ್ನು ಜಪಿಸಬಾರದು.

No comments