Header Ads

test

ಹಾಲನ್ನು ಕುದಿಸುವುದು ಸಾಮಾನ್ಯ, ಬಟ್ ಫರ್ ಎ ಚೇಂಜ್ ಪ್ಯಾಕೆಟ್ ಹಾಲನ್ನು ಕುದಿಸಬಾರದು... ಈಲೇಖನದಲ್ಲಿ ಪ್ಯಾಕೆಟ್ ಹಾಲನ್ನು ಯಾಕೆ ಕುದಿಸಬಾರದು ಎಂಬುದನ್ನು ತಿಳಿಸಲಾಗಿದೆ..!

ಪ್ಯಾಕೆಟ್ ಹಾಲನ್ನು ಹೆಚ್ಚು ಕುದಿಸಬಾರದು. ಯಾಕೆಂದರೆ ಅದರಲ್ಲಿನ ಪೋಷಕಾಂಶಗಳು ಹಾಳಾಗುತ್ತವೆ. ಇದೇನು ಅಂತಿದ್ದೀರಾ...ಹೌದು ಇದು ನಿಜ. ಹಾಲನ್ನು ಪ್ಯಾಶ್ವರೀಕರಣ ಮಾಡಲಾಗುತ್ತದೆ. ಅಂದರೆ ಚೆನ್ನಾಗಿ ಕುದಿಸಿ ಬಳಿಕ ತಣ್ಣಗೆ ಮಾಡಿ ಪ್ಯಾಕ್ ಮಾಡಲಾಗುತ್ತದೆ. ಹಾಲನ್ನು 161.6 ಡಿಗ್ರಿ ಫ್ಯಾರನ್‍ಹೀಟ್ ಉಷ್ಣತೆಯಲ್ಲಿ ಕುದಿಸಿ ಕೂಡಲೆ 15 ಸೆಕೆಂಡ್‌ಗಳಲ್ಲಿ ತಣ್ಣಗೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಪಾಶ್ಚರೀಕರಣ ಎನ್ನುತ್ತಾರೆ.

ಈ ರೀತಿ ಮಾಡುವುದರಿಂದ ಹಾಲಿನಲ್ಲಿರುವ ಹಾನಿಕಾರಕ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಸಾಯುತ್ತದೆ. ಈ ರೀತಿ ಒಮ್ಮೆ ಕುದಿಸಿದ ಹಾಲನ್ನು ಪ್ಯಾಕ್ ಮಾಡಲಾಗುತ್ತದೆ. ನಾವು ಮತ್ತೆ ಮನೆಯಲ್ಲಿ ಆ ಹಾಲನ್ನು ಕುದಿಸಿದರೆ ಹಾಲಿನಲ್ಲಿನ ಪೋಷಕಗಳು ಹಾಳಾಗುತ್ತವೆ.



ಹಾಗಿದ್ದರೆ ಹಾಲನ್ನು ಬಿಸಿಯಾಗಿ ಕುಡಿಯಬೇಕು ಎಂದರೆ ಹೇಗೆ?
ಹಾಲು ತಣ್ಣಗಿದ್ದಾಗ ಕುಡಿಯಲು ಯಾರೂ ಇಷ್ಟಪಡಲ್ಲ. ಹಾಗಾಗಿ ಪ್ಯಾಕೆಟ್ ಹಾಲನ್ನು ಚೆನ್ನಾಗಿ ಕುದಿಸಿ ಕುಡಿಯುತ್ತಾರೆ. ಆ ರೀತಿ ಮಾಡದೆ ಹೆಚ್ಚು ಹೊತ್ತು ಕುದಿಸದೆ, ಬಿಸಿ ಮಾಡಿಕೊಂಡು ಕುಡಿಯಬಹುದು. ಈ ರೀತಿ ಮಾಡುವುದರಿಂದ ಹಾಲಿನಲ್ಲಿನ ಪೋಷಕಾಂಶಗಳು ಹಾಳಾಗಲ್ಲ. ಬಿಸಿಯಾಗಿ ಕುಡಿದಂತೆಯೂ ಇರುತ್ತದೆ.

ನೇರವಾಗಿ ಹಸುವಿನಿಂದ ಹಾಲನ್ನು ಕೊಳ್ಳುವವರು ಏನು ಮಾಡಬೇಕು?
ನಿಮ್ಮ ಮನೆಯಲ್ಲಿ ಎಮ್ಮೆ ಹಸು ಇದ್ದರೆ ಅಥವಾ ಗೌಳಿಗಳ ಬಳಿ ಹಾಲನ್ನು ಕೊಳ್ಳುತ್ತಿದ್ದರೆ ಆ ಹಾಲನ್ನು ಹೆಚ್ಚು ಹೊತ್ತು ಕುದಿಸಬೇಕು. ಆ ರೀತಿ ಮಾಡಿದರೆ ಆ ಹಾಲಿನಲ್ಲಿರುವ ಹಾನಿಕಾರಕ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಸಾಯುತ್ತದೆ. ಪೋಷಕಗಳೂ ಹಾಳಾಗಲ್ಲ.

ಆದಕಾರಣ ಇನ್ನು ಮುಂದೆ ನೀವು ಪ್ಯಾಕೆಟ್ ಹಾಲನ್ನು ಬಳಸಿದರೆ ಹೆಚ್ಚು ಹೊತ್ತು ಕುದಿಸಬೇಡಿ. ಒಂದು ವೇಳೆ ಕರೆದ ಹಾಲನ್ನು ನೇರವಾಗಿ ಕೊಂಡರೆ ಹೆಚ್ಚು ಹೊತ್ತು ಕುದಿಸಿ. ಈ ಸಂಗತಿಯನ್ನು ಮೂರು ಮಂದಿಯೊಂದಿಗೆ ಹಂಚಿಕೊಳ್ಳಿ.. ಆ ಮೂವರಿಗೂ ಇನ್ನೊಂದು ಮೂವರೊಂದಿಗೆ ಹಂಚಿಕೊಳ್ಳಲು ತಿಳಿಸಿ.!

No comments