Header Ads

test

ಕಾಡುಹರಟೆ ಹೊಡೆಯಲು ಹೋಟೆಲ್‍ಗೆ ಬರುವವರಿಗೆ ತಲೆ ಸುತ್ತುವಂತೆ ಶಾಕ್ ನೀಡುವ ಬೋರ್ಡ್ ಹಾಕಿದ ಮಾಲೀಕ..!

ಕೆಫೆಗಳು, ಹೋಟೆಲ್ಸ್, ರೆಸ್ಟೋರೆಂಟ್, ಪಿಜ್ಜಾ ಪಾರ್ಲರ್‌ಗಳು, ಬೇಕರಿಗಳು... ಹೀಗೆ ಯಾವುದೇ ಪ್ರದೇಶಕ್ಕೆ ಹೋದರೂ ಸಾಮಾನ್ಯವಾಗಿ ನಮ್ಮ ಪಕ್ಕದಲ್ಲಿರುವರೊಂದಿಗೆ ಹುಚ್ಚಾಪಟ್ಟೆ ಏನೋ ಒಂದು ಮಾತನಾಡುತ್ತಾ ಇರುತ್ತೇವೆ. ಕೆಫೆಗಳಲ್ಲಾದರೆ ಈ ರಗಳೆ ಸ್ವಲ್ಪ ಹೆಚ್ಚು ಎಂದೇ ಹೇಳಬಹುದು. ಉಳಿದ ಜಾಗಗಳಲ್ಲಿ ಈ ರಗಳೆ ಸ್ವಲ್ಪ ಕಡಿಮೆ ನಮಗೆ ಕೇಳಿಸುತ್ತದೆ. ಆದರೆ ಬೆಂಗಳೂರಿನ ಒಂದು ಹೋಟೆಲ್‌ನಲ್ಲಿ ಮಾತ್ರ ಈ ರೀತಿ ಕಾಡುಹರಟೆ ಹೊಡೆಯುವವರ ಕಾಟ ಜಾಸ್ತಿ ಆಗಿದೆಯಂತೆ. ಇದರಿಂದ ಬೇಸತ್ತ ಹೋಟೆಲ್ ಮಾಲೀಕ ಏನು ಮಾಡಿದ ಗೊತ್ತಾ?


ತಮ್ಮ ಹೋಟೆಲ್‌ನಲ್ಲಿ ತಿಂಡಿಗಾಗಿ ಅಲ್ಲದೆ ಬಹಳಷ್ಟು ಮಂದಿ ಹುಚ್ಚಾಪಟ್ಟೆ ಮಾತನಾಡಿಕೊಳ್ಳಲು, ರಿಯಲ್ ಎಸ್ಟೇಟ್, ಇತರೆ ವ್ಯವಹಾರಗಳಿಗೆ ಸಂಬಂಧಿಸಿದಂತೆ ಲೇವಾದೇವಿ ನಡೆಸಲು ಬರುತ್ತಿದ್ದಾರೆಂದು ಗೊತ್ತಾಗಿ ಆ ಹೋಟೆಲ್ ಯಜಮಾನ ತನ್ನ ಹೋಟೆಲ್‌ನಲ್ಲಿ ಒಂದು ಬೋರ್ಡ್ ಹಾಕಿಸಿದ.

ಆ ಬೋರ್ಡ್‍ನಲ್ಲಿ ಏನಿದೆ ಎಂದರೆ, "ಪ್ರೀತಿಯ ಗ್ರಾಹಕರೇ, ಈ ಹೋಟೆಲ್ ಮೇಜು ಮತ್ತು ಪೀಠೋಪಕರಣಗಳನ್ನು ಊಟೋಪಚಾರಕ್ಕಾಗಿಯೇ ಹೊರತು, ರಿಯಲ್ ಎಸ್ಟೇಟ್ ಬಿಝಿನೆಸ್ ಮತ್ತು ರಾಜಕೀಯ ಚರ್ಚೆ ವ್ಯವಹಾರಗಳಿಗಾಗಿ ಲಭ್ಯವಿಲ್ಲವೆಂದು ವಿನಂತಿಸಿಕೊಳ್ಳುತ್ತೇನೆ" ಎಂದು ಬೋರ್ಡ್ ಹಾಕಿಸಿದ.

ಆ ರೀತಿ ಬೋರ್ಡ್ ಹಾಕಿದ ಬಳಿಕ ಯಾರೋ ಅದರ ಫೋಟೋ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ಇದರಿಂದ ಆ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಅದೇನೇ ಇರಲಿ ಇತ್ತೀಚಿನ ದಿನಗಳಲ್ಲಿ ಇದು ಕಾಮನ್ ಆಗಿದೆ. ಇಷ್ಟಕ್ಕೂ ಸುತ್ತಮುತ್ತ ಇರುವವರಿಗೆ ತೊಂದರೆಯಾಗುತ್ತದೆಂದೂ ಯಾರೂ ನೋಡಲ್ಲ. ಜೋರಾಗಿ ಮಾತನಾಡಿಕೊಳ್ಳುತ್ತಾ ಸಂಭ್ರಮಿಸುತ್ತಿರುತ್ತಾರೆ. ಅಂತಹವರಿಗೆ ಝಲಕ್ ಕೊಡಬೇಕು ಎಂದರೆ... ಇಂತಹ ಬೋರ್ಡ್ ಹಾಕಬೇಕಾದದ್ದೇ ಅಲ್ಲವೇ...? ಏನಂತೀರಾ..?

No comments