Header Ads

test

"ಆಸ್ಪತ್ರೆಯಿಂದ ಬಂದ ಕೂಡಲೆ ತಮ್ಮನನ್ನು ಎತ್ತಿಕೊಳ್ಳೋಣ ಎಂದು ಹೋದೆ... ನನಗೆ ಕೈಗಳಿಲ್ಲ ಎಂದುನೆನಪಾಯಿತು, ಅಲ್ಲೇ ನಿಂತುಬಿಟ್ಟೆ"

ಪಾಕಿಸ್ತಾನ ಮೂಲದ ಈ ಬಾಲಕಿ ಹೆಸರು ಸಬಾ ಗುಲ್. ಐದು ವರ್ಷ ವಯಸ್ಸಿನಲ್ಲಿ ಪ್ರಮಾದವಶಾತ್ ಎರಡೂ ಕೈಗಳನ್ನು ಕಳೆದುಕೊಳ್ಳಬೇಕಾಯಿತು. ಆದರೆ ಆಕೆಯ ಆತ್ಮವಿಶ್ವಾಸ ಮಾತ್ರ ಎಳ್ಳಷ್ಟೂ ಕಡಿಮೆಯಾಗಲಿಲ್ಲ. ಪ್ರಸ್ತುತ ಆಕೆಯ ವಯಸ್ಸು 15 ವರ್ಷ.

"ನನಗೆ ಕೈಗಳಿಲ್ಲ. ಆದರೆ ಕಾಲುಗಳಿವೆಯಲ್ಲಾ!" ಎಂದು ಎಲ್ಲಾ ಕೆಲಸಗಳನ್ನೂ ಕಾಲುಗಳಿಂದಲೇ ಮಾಡುತ್ತಾಳೆ ಸಬಾ. ಎಲ್ಲರೊಂದಿಗೆ ಶಾಲೆಗೆ ಹೋಗಿ ಓದಿಕೊಳ್ಳುತ್ತಿದ್ದಾಳೆ. ಚೆನ್ನಾಗಿ ಓದಿ ಪಾಕಿಸ್ತಾನದ ಸಮಾಜದಲ್ಲಿ ಬದಲಾವಣೆ ತರುತ್ತೇನೆಂದು, ಮಾನವ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುತ್ತೇನೆ ಎನ್ನುತ್ತಿದ್ದಾಳೆ.




ಆಕೆ ಕೈಗಳನ್ನು ಹೇಗೆ ಕಳೆದುಕೊಂಡಳು? ತನ್ನ ಗುರಿಯೇನು? ಎಂಬುದು ಆಕೆಯ ಮಾತುಗಳಲ್ಲೇ.

(ಚೆನ್ನಾಗಿ ಓದಿಕೊಂಡು ಪಾಕಿಸ್ತಾನ ಸಮಾಜದಲ್ಲಿ ಬದಲಾವಣೆ ತರುತ್ತೇನೆ.)
"ಆಗ ನಗೆ ಐದು ವರ್ಷ. ಒಂದು ದಿನ ಆಟ ಆಡಿಕೊಳ್ಳಲು ನಮ್ಮ ಮನೆಯ ಮೇಲೆ ಹೋದೆ. ಮಾಳಿಗೆ ಮೇಲೆ ಕರೆಂಟ್ ತಂತಿ ಇತ್ತು. ಅಚಾನಕ್ ಆಗಿ ಎರಡೂ ಕೈಗಳಿಂದ ಆ ತಂತಿಯನ್ನು ಹಿಡಿದು ಎಳೆದೆ. ಅದರಿಂದ ಶಾಕ್ ಹೊಡೆದು ನನ್ನ ಎರಡೂ ಕೈಗಳನ್ನು ಕಳೆದುಕೊಳ್ಳಬೇಕಾಯಿತು. ಕೂಡಲೆ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಏನು ಮಾಡಬೇಕು ಎಂದು ವೈದ್ಯರಿಗೂ ಅರ್ಥವಾಗಲಿಲ್ಲ. ನನ್ನ ಕೈಗಳನ್ನು ಸರಿಪಡಿಸಲು ಸಾಧ್ಯವಾಗಲಿಲ್ಲ. ಎರಡೂ ಕೈಗಳನ್ನು ತೆಗೆದರು.

ಆ ಅಪಘಾತ ನಡೆದಾಗ ನನಗೆ ಮೂರು ತಿಂಗಳ ತಮ್ಮ ಇದ್ದ. ಕೆಲವು ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ಬಂದ ಕೂಡಲೆ ಅವನನ್ನು ಎತ್ತಿಕೊಂಡು ಮುದ್ದಾಡಲು ಓಡೋಡಿ ಬಂದೆ. ನನಗೆ ಕೈಗಳಿಲ್ಲದ ಕಾರಣ ಅವನನ್ನು ಎತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಆಗ ಅರ್ಥವಾಯಿತು. ಸ್ವಲ್ಪ ಹೊತ್ತು ಅಲ್ಲೇ ನಿಂತುಬಿಟ್ಟೆ. ಆ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ನನ್ನ ಪರಿಸ್ಥಿತಿಯನ್ನೂ ನೋಡಿ ನಮ್ಮ ತಾಯಿ ಸಹ ತಡೆದುಕೊಳ್ಳಲಾಗಲಿಲ್ಲ. ದುಃಖದ ಕಟ್ಟೆ ಹೊಡೆಯಿತು. ಯಾವಾಗಲೂ ಗೊಳೋ ಎಂದು ಅಳುತ್ತಿದಳು. ಅಳಬೇಡಮ್ಮಾ.. ಎಂದು ನಾನು ಹೇಳುತ್ತಿದ್ದೆ. ಕೈಗಳಿಲ್ಲದ ಹುಡುಗಿಯನ್ನು ಶಾಲೆಗೆ ಕಳುಹಿಸಿದರೂ ಏನೂ ಪ್ರತಿಫಲ ಇರಲ್ಲ ಎಂದು ಅಕ್ಕಪಕ್ಕದವರು ನಮ್ಮ ತಂದೆತಾಯಿಗೆ ಹೇಳುತ್ತಿದ್ದರು. ಆ ಮಾತಿನಿಂದ ನನ್ನಲ್ಲಿ ಛಲ ಇನ್ನಷ್ಟು ಹೆಚ್ಚಾಯಿತು. ಅವರ ಅಭಿಪ್ರಾಯ ತಪ್ಪು ಎಂದು ನಿರೂಪಿಸಬೇಕು ಎಂದುಕೊಂಡೆ. ಎಲ್ಲರ ಜತೆಗೆ, ನಾನೂ ಸಹ ಏನಾದರೂ ಸಾಧಿಸಬಹುದು ಎಂದು ಸಾರಿ ಹೇಳಬೇಕು ಎಂದುಕೊಂಡೆ.

ಲಾ ಓದಿ ಮಹಿಳೆಯರ ಹಕ್ಕುಗಳು, ಮಾನವ ಹಕ್ಕುಗಳಿಗಾಗಿ ಕೆಲಸ ಮಾಡಬೇಕೆಂದಿದ್ದೇನೆ. ವಿವಿಧ ಪ್ರದೇಶಗಳನ್ನು ತಿರುಗಿ ನಮ್ಮ ಸಂಸ್ಕೃತಿಗಳ ನಡುವೆ ಯಾವ ರೀತಿಯ ವ್ಯತ್ಯಾಸಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದಿದೆ. ಪಾಕಿಸ್ತಾನದ ಸಮಾಜದಲ್ಲಿ ಬದಲಾವಣೆಗಳನ್ನು ತರಬೇಕೆಂದು ಬಯಸಿದ್ದಾರೆ.

ಅದೆಷ್ಟೋ ಮಂದಿ ಕೈ ಇಲ್ಲ, ಕಾಲಿಲ್ಲ ಎಂದು ಕೊರಗುತ್ತಿರುತ್ತಾರೆ. ಅಂತಹವರಿಗೆ ಈ ಹುಡುಗಿ ಸ್ಫೂರ್ತಿಯ ಸೆಲೆ. ಏನಂತೀರ..?

No comments