Header Ads

test

ನೀರಿನೊಂದಿಗೆ ಟ್ಯಾಬ್ಲೆಟ್ ನುಂಗುವುದು ಎಷ್ಟು ಅಪಾಯ ಗೊತ್ತಾ...! ತುಂಬಾ ಡೇಂಜರ್..

ಸಣ್ಣಪುಟ್ಟ ಸಮಸ್ಯೆಗೆಲ್ಲಾ ಟಾಬ್ಲೆಟ್‌ಗಳನ್ನು ಹಾಕಿಕೊಳ್ಳುತ್ತಾ ಆರೋಗ್ಯವವನ್ನು ಕೈಯಾರೆ ಹಾಳು ಮಾಡಿಕೊಳ್ಳುವುದಷ್ಟೇ ಅಲ್ಲದೆ.. ಟ್ಯಾಬ್ಲೆಟ್‌ಗಳನ್ನು ಮನ ಬಂದಂತೆ ತೆಗೆದುಕೊಳ್ಳುವುದು ಡೇಂಜರ್ ಎನ್ನುತ್ತಿದ್ದಾರೆ ತಜ್ಞರು. ಸಾಮಾನ್ಯವಾಗಿ ಬಹಳಷ್ಟು ಮಂದಿ ನೀರಿನೊಂದಿಗೆ ಟ್ಯಾಬ್ಲೆಟ್‌ಗಳನ್ನು ತೆಗೆದುಕೊಳ್ಳುತ್ತಾರೆ. ಆ ರೀತಿ ಹಾಕಿಕೊಳ್ಳುವುದು ತುಂಬಾ ಡೇಂಜರ್ ಎನ್ನುತ್ತಿದ್ದಾರೆ ತಜ್ಞರು. ಮೊದಲು ಟ್ಯಾಬ್ಲೆಟ್ ಹಾಕಿಕೊಂಡ ಬಳಿಕ ನೀರು ಕುಡಿಯಬೇಕು ಎನ್ನುತ್ತಿದ್ದಾರೆ. ಕೆಲವರು ಗ್ಲಾಸ್‌ನ ನೀರಿನಲ್ಲಿ ಟ್ಯಾಬ್ಲೆಟ್ ಹಾಕಿ... ಆ ನೀರನ್ನು ಕುಡುಯುತ್ತಾರೆಂದು... ಅದರಿಂದ ಹೃದಯ ಭಾಗ ವಿಪರೀತ ಉರಿಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.



ಸಾವಿರ ಮಂದಿ ರೋಗಿಗಳನ್ನು.. 15 ದಿನಗಳ ಕಾಲ ಪರಿಶೀಲಿಸಿದ ಬಳಿಕ ಈ ನಿರ್ಧಾರಕ್ಕೆ ಬಂದಿದ್ದಾರೆ ತಜ್ಞರು. ಟ್ಯಾಬ್ಲೆಟ್‌ಗಳನ್ನು ಆ ರೀತಿ ತೆಗೆದುಕೊಳ್ಳುವುದರಿಂದ ಅನ್ನನಾಳಕ್ಕೆ ಗಾಯವಾಗುತ್ತದೆ ಎಂದು ಗುರುತಿಸಿದ್ದಾರೆ.

ಡಾಕ್ಟರ್ ಮುಕುಂದ್ ಪಟೇಲ್, ಡಾಕ್ಟರ್ ಧ್ರುವ್ ಪಟೇಲ್, ಡಾಕ್ಟರ್ ಸಂಜಯ್ ರಾಜ್‍ಪುತ್, ಕಾರ್ಡಿಯಾಜಲಿಸ್ಟ್ ಕಮಲ್ ಶರ್ಮಾ ಜತೆಯಾಗಿ ಈ ಅಧ್ಯಯನ ಮಾಡಿದ್ದಾರೆ. ನೀರಿನೊಂದಿಗೆ ಟ್ಯಾಬ್ಲೆಟ್ ಹಾಕಿಕೊಳ್ಳುವುದರಿಂದ ಗಂಟಲಲ್ಲಿ ಸರಾಗವಾಗಿ ಹೋಗುತ್ತದೆ ಎಂಬುದು ತಪ್ಪು ಎಂದಿದ್ದಾರೆ. ಆ ರೀತಿ ಮಾಡಿದರೆ ಆ ಟ್ಯಾಬ್ಲೆಟ್ ಗಂಟಲಿನ ನಡುವೆಯೇ ಉಳಿಯುತ್ತದೆ. ಇದರಿಂದ ಅನ್ನನಾಳಕ್ಕೆ ಹೊಡೆತ ಬೀಳುತ್ತದೆ. ಅಲ್ಸರ್ ಆಗುತ್ತದೆ. ಜಠರದಲ್ಲಿನ ಆಸಿಡ್ ಮೇಲ್ಮುಖವಾಗಿ ಹೊರಬರುತ್ತದೆ. ಟ್ಯಾಬ್ಲೆಟ್ ಹಾಕಿಕೊಂಡು ಮಲಗಿದರೆ, ಅದು ಸುಲಭವಾಗಿ ಹೊಟ್ಟೆಗೆ ಹೋಗಲ್ಲ ಎಂದು, ಅದು ಮೇಲಕ್ಕೆ ಬರುತ್ತದೆ. ಎದೆ ನೋವಿಗೆ ಕಾರಣವಾಗುತ್ತದೆ ಎಂದಿದ್ದಾರೆ.

ಟ್ಯಾಬ್ಲೆಟ್‌ಗೆ ಬದಲಾಗಿ ಕೆಲವು ಮನೆಮದ್ದುಗಳು
ಸಣ್ಣ-ಪುಟ್ಟ ಜ್ವರ, ನೆಗಡಿಗಳಿಗೆ ವೈದ್ಯರನ್ನು ಭೇಟಿ ಮಾಡಿ ಇಂಗ್ಲಿಷ್‌ ಮಾತ್ರೆಗಳನ್ನು ಕೊಂಡು ನುಂಗುವುದಕ್ಕಿಂತ ಮನೆಯಲ್ಲೇ ಮದ್ದು ತಯಾರಿಸಿಕೊಳ್ಳಬಹುದು. ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿಕೊಂಡು ಸಾಮಾನ್ಯವಾಗಿ ಬರುವ ಜ್ವರವನ್ನು ಹೊಡೆದು ಓಡಿಸಬಹುದು.

ಕತ್ತರಿಸಿದ ಅರ್ಥ ಈರುಳ್ಳಿ, ನಾಲ್ಕು ಬೆಳ್ಳುಳ್ಳಿ ಎಸಳು ಹಾಗು ಎರಡು ಚಮಚ ನಿಂಬೆ ರಸವನ್ನು ಮಿಶ್ರ ಮಾಡಿ. ಕುದಿಸಿದ ಎರಡು ಗ್ಲಾಸ್‌ ನೀರಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಗು ನಿಂಬೆ ರಸದ ಮಿಶ್ರಣವನ್ನು ಬಿಸಿ ನೀರಲ್ಲಿ ಸೇರಿಸಿ ಸ್ವಲ್ಪ ಹೊತ್ತು ಬಿಸಿ ಮಾಡಿ.

ಬೆಳಗ್ಗೆ ಉಪಹಾರ ಸೇವನೆ ನಂತರ ಮತ್ತು ರಾತ್ರಿ ಊಟದ ನಂತರ ಈ ದ್ರಾವಣವನ್ನು ಸೇವಿಸಿ. ಇದರಿಂದ ಬೇಗನೆ ಜ್ವರ ಮತ್ತು ನೆಗಡಿ ಕಡಿಮೆಯಾಗುತ್ತದೆ. ಶೀತದ ವಿರುದ್ಧ ಹೋರಾಡುವ ಈ ನೈಸರ್ಗಿಕ ಔಷಧಿಯಿಂದ ಕೆಮ್ಮು, ಕಫ, ಉಸಿರಾಟದ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.

No comments