Header Ads

test

ಲವರ್‌ಗೆ ಕಳುಹಿಸಲು ಹೋಗಿ "ಐ ಲವ್ ಯೂ" ಎಂದು ಬೇರೆ ವ್ಯಕ್ತಿಗೆ ವಾಟ್ಸಾಪ್ ಮೆಸೇಜ್ ಮಾಡಿದಳು...ಬುದ್ಧಿವಂತಿಕೆಯಿಂದ ಹೇಗೆ ಕವರ್ ಮಾಡಿಕೊಂಡಳು ಗೊತ್ತಾ..?

"ಆ ದಿನ ನಾನು, ಅವನು ಕ್ಲಾಸಿಗೆ ಬಂಕ್ ಹೊಡೆದೆವು. ಲಂಚ್ ಬಳಿಕ ಕಾಲೇಜಿನಿಂದ ಹೊರಗೆ ಬಂದೆವು. ಆತನು ಲ್ಯಾಪ್‌ಟಾಪ್ ತಂದ. ಅದರಲ್ಲಿ ಇಬ್ಬರೂ ಕೂತೂ ಒಂದು ಸಿನಿಮಾ ನೋಡಿದೆವು. ತುಂಬಾ ಹ್ಯಾಪಿ ಫೀಲಿಂಗ್ ಉಂಟಾಯಿತು. ಕೂಡಲೆ ಪಕ್ಕದಲ್ಲೇ ಇರುವ ರೆಸ್ಟೋರೆಂಟ್‌ಗೆ ಹೋಗಿ ಡಿನ್ನರ್ ಮಾಡಿದೆವು. ಆ ದಿನ ಆ ರೀತಿ ಜಾಲಿಯಾಗಿ ಕಳೆದೆವು. ತುಂಬಾ ಖುಷಿಯಾಯಿತು ನನಗೆ. ನಿಜವಾಗಿ ಅಂತಹ ರೊಮ್ಯಾಂಟಿಕ್ ಡೇ ಎಂದೂ ನನಗೆ ಎದುರಾಗಿರಲಿಲ್ಲ. ಅದೊಂದು ಮಧುರ ಅನುಭವ ನನ್ನ ಪಾಲಿಗೆ.



ಆ ಬಳಿಕ ಮನೆಗೆ ಹೋದೆ. ಆ ದಿನ ನಡೆದ ವಿಶೇಷಗಳನ್ನು ಮತ್ತೊಮ್ಮೆ ಮೆಲುಕು ಹಾಕುತ್ತಾ ಆತನಿಗೆ ಮೆಸೇಜ್ ಮಾಡುತ್ತಿದ್ದೆ. ನಾನು ಆತನಿಗೆ ಯಾವಾಗಲೂ ಹೈಕ್ ಮೆಸೆಂಜರ್‌ನಲ್ಲಿ ಮೆಸೇಜ್ ಹಾಕುತ್ತೇನೆ. ಆದರೆ ಈ ಸಲ ಯಾಕೋ ವಾಟ್ಸಾಪ್ ಬಳಸಬೇಕು ಅನ್ನಿಸಿತು. ಕೂಡಲೆ ವಾಟ್ಸಾಪ್ ಓಪನ್ ಮಾಡಿದೆ. ಅದರಲ್ಲಿ ಆತನ ಕಾಂಟಾಕ್ಟ್ ಹುಡುಕಿದೆ. ಸಿಕ್ಕಿತು. ಕಾಂಟ್ಯಾಕ್ಟ್ ಓಪನ್ ಮಾಡಿ.. ಆತನಿಗೆ ಮೆಸೇಜ್ ಹಾಕಿದೆ. “I’m really happy to have you. You’re such a wonderful person. You make me smile everyday and today you made my day special. I love you.” ಎಂದು ಆತನಿಗೆ ಮೆಸೇಜ್ ಹಾಕಿದೆ. ಕೂಡಲೆ ಶಾಕ್ ಆದೆ.

ಯಾಕೆಂದರೆ ಆ ಕಾಂಟ್ಯಾಕ್ಟ್ ನಂಬರ್ ಅವನದಾಗಿರಲಿಲ್ಲ. ನಮ್ಮ ಫ್ಯಾಮಿಲಿ ಫ್ರೆಂಡ್ ಆದ ಬೇರೆ ಹುಡುಗಿಯದು. ಹಾಗಾಗಿ ನನಗೆ ಒಮ್ಮೆಲೆ ಮೈಯಲ್ಲಾ ಝಿಲ್ ಅಂತು. ಏನು ಮಾಡಬೇಕೋ ಅರ್ಥವಾಗಲಿಲ್ಲ. ನಾನು ಅಂದುಕೊಂಡ ವ್ಯಕ್ತಿಗೆ ಅಲ್ಲದೆ ಬೇರೆ ವ್ಯಕ್ತಿಗೆ ಆ ಮೆಸೇಜ್ ಹೋಗಿದೆ ಎಂದು ಗೊತ್ತಾಗಿ ಗಾಬರಿಯಾದೆ. ಅವಳೇನಾದರೂ ಈ ಸಂಗತಿ ಮನೆಯಲ್ಲಿ ಹೇಳಿದರೆ... ಆಗ ನನ್ನ ಪರಿಸ್ಥಿತಿ ಏನು.. ಎಂದು ಆಲೋಚಿಸಿದೆ. ಕೂಡಲೆ ಒಂದು ಆಲೋಚನೆ ಬಂತು. ಮತ್ತೆ ಅದೇ ಕಾಂಟ್ಯಾಕ್ಟ್‌ಗೆ ಮೆಸೇಜ್ ಹಾಕಿದೆ. "Today is Bestie Day!.. Send this to 10 of your best friends and see how much you get in return. If you get more than 5,it means you’re lucky.. Pls keep the chain going!.” ಎಂದು ಮೆಸೇಜ್ ಹಾಕಿದೆ. ಹಾಗಾಗಿ ಆ ಕಡೆಯಿಂದ ರಿಪ್ಲೈ ಬಂತು. ಅದೇ ಮೆಸೇಜನ್ನು ಮತ್ತೆ ಅವಳು ಫಾರ್ವರ್ಡ್ ಮಾಡಿದಳು. ಆಗಲೇ ಅಂದುಕೊಂಡೆ... ಇದ್ಯಾವುದೋ ವೈರಲ್ ಮೆಸೇಜ್ ಎಂದುಕೊಂಡು ಆಕೆ ನನಗೆ ಮತ್ತೆ ಅದೇ ಮೆಸೇಜನ್ನು ಫಾರ್ವರ್ಡ್ ಮಾಡಿದ್ದಾಳೆಂದು. ಇದರಿಂದ ಹಮ್ಮಯ್ಯ ಎಂದು ನಿಟ್ಟುಸಿರು ಬಿಟ್ಟೆ. ಆ ಘಟನೆ ತಿಳಿದುಕೊಂಡರೆ ಈಗಲೂ ನನ್ನಲ್ಲಿ ಏನೋ ಒಂಥರಾ ಆಗುತ್ತದೆ..!"

No comments