Header Ads

test

ಆ ಎರಡಕ್ಕೂ ಇನ್ಸುರೆನ್ಸ್ ಮಾಡಿಸಿಕೊಂಡು ಸಂಚಲನ ಸೃಷ್ಟಿಸಿದ ಸಾನಿಯಾ ಮಿರ್ಜಾ.

ಸೆಲೆಬ್ರಿಟಿಗಳು ತಮ್ಮ ಕಂಠಕ್ಕೆ, ದೇಹದ ನಾನಾ ಭಾಗಗಳಿಗೆ ಇನ್ಸುರೆನ್ಸ್ ಮಾಡಿಸಿಕೊಳ್ಳುವುದು ಗೊತ್ತೇ ಇದೆ. ರಜನಿಕಾಂತ್ ಅವರು ತಮ್ಮ ಧ್ವನಿಯನ್ನು ಇನ್ಸುರೆನ್ಸ್ ಮಾಡಿಸಿಕೊಂಡಿದ್ದಾರೆ. ಯಾರೇ ಆಗ ಅವರ ಧ್ವನಿಯನ್ನು ಅನುಕರಿಸುವಂತಿಲ್ಲ. ಅವರ ಧ್ವನಿಯನ್ನು ಬಳಸಿಕೊಂಡು ಅದರಿಂದ ಬಿಝಿನೆಸ್ ಮಾಡುವಂತಿಲ್ಲ.



ಇನ್ನು ಹಾಲಿವುಡ್ ತಾರೆಗಳ ಬಗ್ಗೆ ಕೇಳುವಂತೆಯೇ ಇಲ್ಲ. ಬೆಟ್ಟೆ ಡೇವಿಸ್ ತಮ್ಮ ಸೊಂಟದ ಭಾಗಕ್ಕೆ, ಜೂಲಿಯಾ ರಾಬರ್ಟ್ಸ್ ಸ್ಮೈಲ್ ಗಾಗಿ ವಿಮೆ ಮಾಡಿಸಿಕೊಂಡಿದ್ದಾರೆ. ಇನ್ನು ಸಾನಿಯಾ ಮಿರ್ಜಾ ತಮ್ಮ ಎರಡೂ ಕೈಗಳಿಗೆ ವಿಮೆ ಮಾಡಿಸಿಕೊಂಡಿದ್ದು ಸಂಚಲನ ಸೃಷ್ಟಿಸಿದ್ದಾರೆ. ಟೆನ್ನಿಸ್ ತಾರೆಗಳಿಗೆ ಕೈಗಳೇ ಆಸ್ತಿ. ಅದಕ್ಕೆ ಪೆಟ್ಟಾದರೆ ಅವರ ಜೀವನವೇ ಮುಗಿದಂತೆ. ಹಾಗಾಗಿ ಸಾನಿಯಾ ತಮ್ಮೆರಡೂ ಕೈಗಳಿಗೆ ವಿಮೆ ಮಾಡಿಸಿಕೊಂಡಿದ್ದಾರೆ. ವಿಜೇಂದರ್ ಸಿಂಗ್ ಸಹ ಈ ವಿಧವಾಗಿ ಮಾಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.

‘ನನ್ನ ಕ್ರೀಡಾ ಬದುಕಿನಲ್ಲಿ ಹಲವಾರು ವಿವಾದಗಳನ್ನು ಎದುರಿಸಬೇಕಾಯಿತು, ಏಕೆಂದರೆ ನಾನೊಬ್ಬಳು ಹೆಣ್ಣು. ನಾನೊಬ್ಬ ಗಂಡಾಗಿದ್ದರೆ ಅವಗುಳನ್ನು ಕೆಲವು ವಿವಾದಗಳಿಂದ ತಪ್ಪಿಸಿಕೊಳ್ಳಬಹುದಾಗಿತ್ತು,’’ ಎಂದು ವಿಶ್ವ ಸಂಸ್ಥೆಯ ಮಹಿಳಾ ರಾಯಭಾರಿಯಾದ ನಂತರ ಈ ಸಾನಿಯಾ ಈ ರೀತಿಯಾಗಿ ಅಭಿಪ್ರಾಯಪಟ್ಟರು. ದಕ್ಷಿಣ ಏಷ್ಯಾ ವಿಭಾಗದ ರಾಯಭಾರಿಯಾಗಿ ಆಯ್ಕೆಯಾಗಿರುವ ಸಾನಿಯಾ ಈ ವಲಯದಲ್ಲಿ ಮಹಿಳೆ ಹಾಗೂ ಹೆಣ್ಣು ಮಕ್ಕಳ ವಿರುದ್ಧ ನಡೆಯುವ ಹಿಂಸೆ ಮತ್ತು ಲಿಂಗ ಸಮಾನತೆಯ ವಿಷಯದಲ್ಲಿ ಅರಿವು ಮೂಡಿಸಲಿದ್ದಾರೆ.

‘‘ಭಾರತದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕಾದರೆ ಇಲ್ಲಿನ ಸಂಸ್ಕೃತಿಯಲ್ಲಿ ಕೆಲವು ಬದಲಾವಣೆಯಾಗಬೇಕು. ಸರಕಾರ ಈಗ ಅಂಥ ಬದಲಾವಣೆಗೆ ಮುಂದಾಗಿದೆ. ಕ್ರೀಡಾ ಸಚಿವ ಸರ್ಬಾನಂದ್ ಸೊನೊವಾಲ್ ಮಹಿಳಾ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅದನ್ನು ನನ್ನ ಕಣ್ಣಾರೆ ನೋಡಿದ್ದೇನೆ, ’’ ಎಂದು ಭಾರತದ ಶ್ರೇಷ್ಠ ಟೆನಿಸ್ ತಾರೆ ಅಭಿಪ್ರಾಯಪಟ್ಟರು. ವಿದೇಶಗಳಲ್ಲಾದರೆ ಮಾಡೋನ್ನಾ, ಕೈಲಿ ಮಿನೋಗ್ ತಮ್ಮ ದೇಹದ ಭಾಗಗಳಿಗೆ ವಿಮಾ ಪಾಲಸಿ ಮಾಡಿಸಿಕೊಂಡಿದ್ದಾರೆ. ಬಾಲಿವುಡ್ ತಾರೆಗಳಾದ ಮಲ್ಲಿಕಾ ಶೆರಾವತ್, ಮಿನಿಷಾ ಲಾಂಬಾದಂತಹವರು ತಮ್ಮ ಭಾಗಗಳಿಗೆ ವಿಮೆ ಮಾಡಿಸಿಕೊಳ್ಳುತ್ತಿರುವುದಾಗಿ ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ. ಇನ್ನು ಜಾನ್ ಅಬ್ರಹಾಂ ತಮ್ಮ ಪೃಷ್ಟಭಾಗಕ್ಕೆ ವಿಮೆ ಮಾಡಿಸಿಕೊಂಡಿದ್ದಾರಂತೆ. ರಾಖಿ ಸಾವಂತ್ ಸಹ ತನ್ನ ದೇಹಕ್ಕೆ ವಿಮೆ ಮಾಡಿಸಿಕೊಳ್ಳಲು ಯೋಚಿಸಿದ್ದಾರಂತೆ. ಇನ್ನು ಭಾರತದ ಪ್ರಮುಖ ಗಾಯಕರಲ್ಲಿ ಒಬ್ಬರಾಗಿರುವ ಲತಾ ಮಂಗೇಷ್ಕರ್ ತಮ್ಮ ಕಂಠಕ್ಕೆ ಇನ್ಸುರೆನ್ಸ್ ಮಾಡಿಸಿಕೊಂಡಿದ್ದಾರೆ.

No comments