Header Ads

test

ಪ್ರೇಮಿಗಳನ್ನು ಫ್ಯಾಮಿಲಿ ಮುಂದೆಯೇ ಬುಕ್ ಮಾಡಿದ ಟ್ರಾಫಿಕ್ ಪೊಲೀಸ್. ವಾರದ ಬಳಿಕ ಸ್ವೀಟ್ ಬಾಕ್ಸ್ ಕೊಟ್ಟ.ಇಷ್ಟಕ್ಕೂ ಏನಾಯಿತು ಗೊತ್ತಾ..?

ಮನೋಜ್, ಮಮತಾ... ಕ್ಲಾಸ್ ಮೇಟ್ಸ್. ಫ್ರೆಂಡ್‍ಶಿಪ್ ಆಗಿ ಶುರುವಾದ ಅವರ ಮ್ಯಾಟರ್ ಕಾಲೇಜ್‌ನಲ್ಲೇ ಲವ್ ಆಗಿ ಬದಲಾಯಿತು. ಇಂಜಿನಿಯರಿಂಗ್ ಮುಗಿದ ಕೂಡಲೆ ಇಬ್ಬರಿಗೂ ಉದ್ಯೋಗ ಸಹ ಲಭಿಸಿತು. ಇನ್ನು ತಮ್ಮ ಸಂಗತಿ ಮನೆಯಲ್ಲಿ ತಿಳಿಸಬೇಕು ಎಂದುಕೊಂಡರು. ಆದರೆ ಮನೋಜ್ ಅವರ ತಂದೆ ಮೂರ್ತಿ ತುಂಬಾ ಕಟ್ಟುನಿಟ್ಟು. ಒಂದು ಹೊತ್ತು ಊಟಕ್ಕೂ ತತ್ವಾರದ ದಿನಗಳಲ್ಲಿ ಬೆಂಗಳೂರಿಗೆ ವಲಸೆ ಬಂದು ಈಗ ಒಳ್ಳೆಯ ಕಾಂಟ್ರಾಕ್ಟರ್ ಆಗಿ ಗೌರವಾದರ ಪಡೆಯುತ್ತಿದ್ದಾರೆ. ಅಪ್ಪ ಎಂದರೆ ಮನೋಜ್‌ಗೆ ತುಂಬಾ ಭಯ. ಅವರಿಗೆ ಎದುರಾಗಿ ಒಂದು ಮಾತನ್ನೂ ಮಾತನಾಡದ ಪೈಕಿ ಮನೋಜ್.


ಇನ್ನೊಂದು ಕಡೆ ಮಮತಾ ಮನೆಯಲ್ಲಿ ಸಂಬಂಧ ನೋಡುತ್ತಿದ್ದಾರೆ. ಲೋ ಪ್ಲೀಸ್ ಕಣೋ.ನಿಮ್ಮ ತಂದೆ ಜತೆಗೆ ಮಾತನಾಡೋ ಇಲ್ಲಿ ಫೋರ್ಸ್ ಜಾಸ್ತಿಯಾಗುತ್ತಿದೆ ಎಂದು ಫೋನ್‍ನಲ್ಲಿ ಮಮತಾ. ಫೋನ್ ಇಟ್ಟ ಮನೋಜ್ ಮೂರ್ತಿ ಬಳಿಗೆ ಹೋಗಿ. ಅಪ್ಪಾ ಎಂದ... ಹೇಳೋ ಎಂದು ತಂದೆ ಮುಖ ಮನೋಜ್ ಕಡೆಗೆ ತಿರುಗಿತು. ಕೂಡಲೆ ಮನೋಜ್ ಏನೂ ಇಲ್ಲ ಬಿಡಿ ಅಪ್ಪ. ಎಲ್ಲಿಗೆ ರೆಡಿಯಾಗುತ್ತಿದ್ದೀರ ಎಂದು ಕೇಳಿದ. ಆಗ ಮೂರ್ತಿ ... ನಮ್ಮ ರಿಯಲ್ ಎಸ್ಟೇಟ್ ಗೆಳೆಯರು ಎಲ್ಲರೂ ಸೇರಿ ತಮ್ಮ ಬೈಕ್ ಮೇಲೆ ಹಾಗೆಯೇ ಸಿಟಿ ಔಟ್ ಸ್ಕರ್ಟ್ಸ್‌ಗೆ ಹೋಗುತ್ತಿದ್ದಾರೆ ಸಂಜೆಗೆ ಬಂದು ಬಿಡುತ್ತೇವೆ ಎಂದ.

ಅಷ್ಟರಲ್ಲಿ.ಒಂದು ಹತ್ತು ಮಂದಿ ಮೂರ್ತಿ ಫ್ರೆಂಡ್ಸ್ ಮನೆ ಮುಂದೆ ತಮ್ಮ ಬುಲೆಟ್ಸ್ ಗಾಡಿಗಳಲ್ಲಿ ಹಾರನ್ ಹಾಕುತ್ತಿದ್ದಾರೆ.ಲೋ ಮನೋಜ್ ಇಂದು ಭಾನುವಾರ ಅಲ್ಲವೇ ನಿನ್ನ ಬೈಕ್ ಕೊಡು.ಬೇಕಾದರೆ ಕಾರು ತಗೋ ಎಂದು ಬೈಕ್ ಕೀ ತೆಗೆದುಕೊಂಡು ಹೊರಗೆ ಹೋದ ಮೂರ್ತಿ.ಗಾಡಿ ಸ್ಟಾರ್ಟ್ ಮಾಡಿ ಒಬ್ಬರಾದ ಬಳಿಕ ಒಬ್ಬರು ಸಾಲಿನಲ್ಲಿ ಹೊರಟರು. ಮೈಸೂರು ರೋಡ್‍ಗೆ ಬರುತ್ತಿದ್ದಂತೆ ಪೊಲೀಸರು ಬೈಕ್‍ಗಳನ್ನು ಚೆಕ್ ಮಾಡುತ್ತಿದ್ದಾರೆ.ಮೂರ್ತಿ ತಂಡದ ಎಲ್ಲರ ಪೇಪರ್ಸ್ ಚೆಕ್ ಮಾಡುತ್ತಿದ್ದಾರೆ. ಎಲ್ಲರದ್ದೂ ಕರೆಕ್ಟ್ ಆಗಿವೆ.

ಆದರೆ ಮೂರ್ತಿಯನ್ನು ಮಾತ್ರ ಪೊಲೀಸರು ಹಿಡಿದರು.ಏನ್ರಿ.! ನನ್ನ ಡಾಕ್ಯುಮೆಂಟ್ಸ್ ಎಲ್ಲವೂ ಕರೆಕ್ಟ್ ಆಗಿವೆ.. ಲೈಸೆನ್ಸ್ ಸಹ ಇದೆ.. ಆದರೂ ಯಾಕೆ ಹಿಡಿದುಕೊಂಡಿದ್ದೀರಿ ಎಂದು ಪೊಲೀಸರ ಜತೆಗೆ ಗಲಾಟೆ ಮಾಡಿದ ಮೂರ್ತಿ. ಎಲ್ಲವೂ ಓಕೆ ನಿಮ್ಮ ಬೈಕ್ ಮೇಲೆ ಮೂರು ಚಲನ್ ಇದೆ ಕಟ್ಟಿಲ್ಲ ಎಂದು ಡೀಟೇಲ್ಸ್ ತೋರಿಸಿದ ಪೊಲೀಸ್..

ಮೂರ್ತಿ ಸೇರಿದಂತೆ ಅವರ ಗೆಳೆಯರು ಸಹ ಎಲ್ಲೆಲ್ಲಿ ಸಿಗ್ನಲ್ ಜಂಪ್ ಆಗಿದ್ದಾರೆ ಎಂಬುದನ್ನು ಪೊಲೀಸರು ತೋರಿಸುತ್ತಿರುವ ಸಿಸ್ಟಂನಲ್ಲಿ ನೋಡುತ್ತಿದ್ದಾರೆ. ಒಂದು ರಿಂಗ್ ರೋಡ್ ಬಳಿ ರಾಂಗ್ ಪಾರ್ಕಿಂಗ್. ಇನ್ನೊಂದು ಎಲೆಕ್ಟ್ರಾನಿಕ್ ಸಿಟಿ ಬಳಿ ಸಿಗ್ನಲ್ ಜಂಪ್.ಮೂರನೆಯದು ಸಿಲ್ಕ್ ಬೋರ್ಡ್ ಬಳಿ ರಾಂಗ್ ಸೈಡ್ ಡ್ರೈವಿಂಗ್.ಆ ಫೋಟೋಗಳನ್ನು ನೋಡಿದ ಮೂರ್ತಿ ಮತ್ತವರ ಗೆಳೆಯರು ಶಾಕ್ ಆದರು.

ಮೊದಲನೆಯದು ಮನೋಜ್, ಇನ್ನೊಂದು ಯುವತಿ.ನೋ ಪಾರ್ಕಿಂಗ್ ಬಳಿ ಬೈಕ್ ನಿಲ್ಲಿಸಿ ಒಬ್ಬರಿಗೊಬ್ಬರು ಐಸ್‌ಕ್ರೀಮ್ ತಿನ್ನಿಸಿಕೊಳ್ಳುತ್ತಿರುವ ಫೋಟೋ. ಎರಡನೇ ಫೋಟೋ.ಮನೋಜ್ ಡ್ರೈವಿಂಗ್ ಇನ್ನೊಬ್ಬ ಯುವತಿ ಬಿಗಿದಪ್ಪಿದ್ದು ಸಿಗ್ನಲ್ ಜಂಪ್. ಮೂರನೇ ಫೋಟೋ.ಮನೋಜ್, ರಾಂಗ್ ಸೈಡ್ ಡ್ರೈವಿಂಗ್. ಸೇಮ್ ಅದೇ ಯುವತಿ ಹಿಂದಿನ ಸೀಟಿನಲ್ಲಿ.ಈ ಫೋಟೋದಲ್ಲಿ ಇನ್ನು ಬಿಗಿಯಾಗಿ ಮನೋಜ್‌ನನ್ನು ಅಪ್ಪಿಕೊಂಡಿದ್ದಾಳೆ ಆ ಯುವತಿ. ದಂಡದ ಕಾರ್ಯಕ್ರಮ ಮುಗಿದ ಬಳಿಕ ಪಾರ್ಟಿಯಲ್ಲಿ ಮೂರ್ತಿ ಗೆಳೆಯರು.ಲೋ.ಮೂರ್ತಿ ಹುಡುಗ ಹುಡುಗಿ ಜೋಡಿ ಚೆನ್ನಾಗಿದೆ... ಅವರೂ ತುಂಬಾ ಹತ್ತಿರವಾಗಿದ್ದಾರೆ ಅಲ್ಲವೇ.ಓಕೆ ಹೇಳಿಬಿಡು ಎಂದರು. ನಮ್ಮವ ಇಷ್ಟು ಫಾಸ್ಟ್ ಎಂದು ಗೊತ್ತಿರಲಿಲ್ಲವೋ ಎಂದು ಜೋಕ್ ಹಾಕಿದ ಮೂರ್ತಿ. ಮನೆಗೆ ಹೋದ ಕೂಡಲೆ ಮನೋಜ್‌ನೊಂದಿಗೆ ರಾಗ ತೆಗೆಯುವುದು. ಮ್ಯಾಕೇಜ್ ಓಕೆ ಮಾಡುವುದು. ನಿಶ್ಚಿತಾರ್ಥ ಡೇಟ್ ಫಿಕ್ಸ್ ಮಾಡುವುದು ಚಕಚಕ ಎಂದು ನಡೆದುಹೋಯಿತು. ವಾರದ ಬಳಿಕ ಮನೋಜ್, ಮಮತಾ ಸ್ವೀಟ್ ಬಾಕ್ಸ್ ತೆಗೆದುಕೊಂಡು ಆ ಪೊಲೀಸ್ ಕೈಗೆ ಕೊಟ್ಟು ಆಶೀರ್ವಾದ ಪಡೆದರು.

No comments