Header Ads

test

ಕೈ ಬೆರಳುಗಳನ್ನು ಈ ಭಂಗಿಗಳಲ್ಲಿ (ಮುದ್ರೆ) ಇಟ್ಟುಕೊಳ್ಳಿ... ಇನ್ನು ಯಾವ ಖಾಯಿಲೆಯೂ ಹತ್ತಿರ ಸುಳಿಯಲ್ಲ!

ಕೈ ಬೆರಳುಗಳನ್ನು ಹಲವು ವಿಶೇಷ ಭಂಗಿಗಳಲ್ಲಿ ಇಟ್ಟುಕೊಂಡು ಸ್ವಲ್ಪ ಹೊತ್ತು ಧ್ಯಾನಿಸಿದರೆ ಹಲವಾರು ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಅವು ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ.



1. ಶೂನ್ಯ ಮುದ್ರೆ: ಪದ್ಮಾಸನದಲ್ಲಿ ಕುಳಿತು ಎರಡೂ ಕೈಗಳನ್ನು ಕಾಲುಗಳ ಮೇಲಿಟ್ಟುಕೊಳ್ಳಬೇಕು. ಬಳಿಕ ಎರಡೂ ಕೈಗಳ ಹೆಬ್ಬೆರಳನ್ನು ಮಧ್ಯ ಬೆರಳಿನ ಮೇಲೆ ಫೋಟೋದಲ್ಲಿ ತೋರಿಸಿದ ರೀತಿಯಲ್ಲಿ ತಾಕಿಸಬೇಕು. ಈ ರೀತಿ ಸ್ವಲ್ಪ ಹೊತ್ತು ಇದ್ದು ಧ್ಯಾನಿಸಬೇಕು. ಈ ರೀತಿ ಮಾಡುವುದರಿಂದ ಕಿವಿ ನೋವು, ಕೈಗಳು, ಕಾಲುಗಳಲ್ಲಿ ಸಂವೇದನೆ ಕಳೆದುಕೊಳ್ಳುವಂತಹ ಸಮಸ್ಯೆಗಳು ದೂರವಾಗುತ್ತವೆ.



2. ಜ್ಞಾನ ಮುದ್ರೆ: ಮೇಲೆ ಶೂನ್ಯ ಮುದ್ರೆಯಲ್ಲಿ ತಿಳಿಸಿದ ರೀತಿಯಲ್ಲಿ ಪದ್ಮಾಸನದಲ್ಲಿ ಕುಳಿತು ಎರಡೂ ಕೈಗಳ ಹೆಬ್ಬೆರಳನ್ನು ತೋರು ಬೆರಳ ತುದಿಗಳನ್ನು ತಾಕಿಸಿ ಇಟ್ಟುಕೊಳ್ಳಬೇಕು. ಈ ಭಂಗಿಯಲ್ಲಿ ಸ್ವಲ್ಪ ಹೊತ್ತು ಧ್ಯಾನ ಮಾಡಿದರೆ ಜ್ಞಾಪಕಶಕ್ತಿ ಹೆಚ್ಚುತ್ತದೆ. ದೇಹ ಉತ್ತೇಜನಗೊಳ್ಳುತ್ತದೆ.



3. ಪೃಥ್ವಿ ಮುದ್ರೆ: ಎರಡೂ ಕೈಗಳ ಉಂಗುರ ಬೆರಳುಗಳನ್ನು ಅವುಗಳ ತುದಿಗಳ ಬಳಿ ಹೆಬ್ಬೆರಳನ್ನು ಹಿಡಿದುಕೊಳ್ಳಬೇಕು. ಈ ರೀತಿ ಸ್ವಲ್ಪ ಹೊತ್ತು ಇರುವುದರಿಂದ ಸ್ನಾಯುಗಳು ಚೆನ್ನಾಗಿ ಕೆಲಸ ಮಾಡುತ್ತವೆ. ನಮ್ಮ ದೇಹದಲ್ಲಿ ಹೊಸ ಸ್ನಾಯುಗಳು ರೂಪಗೊಳ್ಳುತ್ತವೆ. ಸ್ನಾಯುಗಳು ರಿಲ್ಯಾಕ್ಸ್ ಆಗುತ್ತವೆ.



4. ವರುಣ ಮುದ್ರೆ: ಎರಡು ಕೈಗಳ ಕಿರುಬೆರಳನ್ನು ಹೆಬ್ಬೆರಳ ಕಡೆಗೆ ಕೆಳಗೆ ಬಾಗಿಸಿ ಹೆಬ್ಬೆರಳನ್ನು ತಾಗಬೇಕು. ಆ ರೀತಿ ಸ್ವಲ್ಪ ಹೊತ್ತು ಧ್ಯಾನ ಮಾಡುವುದರಿಂದ ಕೀಲು ನೋವು, ನಿರ್ಜಲೀಕರಣದಂತಹ ಸಮಸ್ಯೆಗಳು ದೂರವಾಗುತ್ತವೆ.



5. ಆಕಾಶ ಮುದ್ರೆ: ಎರಡು ಮಧ್ಯ ಬೆರಳಿನ ತುದಿಗಳನ್ನು ಹೆಬ್ಬೆರಳಿಗೆ ತಾಗಿಸಿ ಸ್ವಲ್ಪ ಹೊತ್ತು ಧ್ಯಾನ ಭಂಗಿಯಲ್ಲಿ ಇರಬೇಕು. ಇದರಿಂದ ಒತ್ತಡ, ಆತಂಕ ದೂರವಾಗುತ್ತದೆ. ನೆಗಟೀವ್ ಶಕ್ತಿ ನಶಿಸುತ್ತದೆ. ದೇಹದಲ್ಲಿನ ವಿಷ ಪದಾರ್ಥಗಳು ಹೊರಗೆ ಹೋಗುತ್ತವೆ.



6. ಸೂರ್ಯ ಮುದ್ರೆ: ಎರಡೂ ಕೈಗಳ ಉಂಗುರ ಬೆರಳುಗಳನ್ನು ಸಂಪೂರ್ಣವಾಗಿ ಕೆಳಗೆ ಬಾಗಿಸಿ... ಅವುಗಳ ಮೇಲೆ ಹೆಬ್ಬೆರಳನ್ನು ಇಡಬೇಕು. ಇದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ತೂಕ ಕಡಿಮೆಯಾಗುತ್ತದೆ. ದೃಷ್ಟಿ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.

No comments