Header Ads

test

ಮಲಗುವ ಕೋಣೆಯಲ್ಲಿ ತಲೆ ಕಡೆಗೆ ಕಿಟಕಿಗಳು ಇರಬಾರದೆ..? ಇದ್ದರೆ ಏನಾಗುತ್ತದೆ?

ಮಲಗುವ ಕೋಣೆ ಪತಿ ಪತ್ನಿಯರ ಅನುಬಂಧಕ್ಕೆ ಪ್ರತೀಕ. ಆ ಕೋಣೆಯನ್ನು ವಾಸ್ತು ಪ್ರಕಾರ ನಿರ್ಮಿಸಿಕೊಂಡರೆ ದಂಪತಿಗಳ ಆರೋಗ್ಯ, ಪ್ರೀತಿ, ಅನುರಾಮ, ಆಪ್ಯಾಯತೆಯಲ್ಲಿ ಯಾವುದೇ ಕೊರತೆ ಇರಲ್ಲ ಎಂದು ವಾಸ್ತು ತಜ್ಞರು ಸೂಚಿಸುತ್ತಿದ್ದಾರೆ. ವಾಸ್ತು ಪ್ರಕಾರ ದಂಪತಿಗಳ ಮಾಸ್ಟರ್ ಬೆಡ್ ರೂಮ್ ನೈರುತ್ಯ ದಿಕ್ಕಿನಲ್ಲಿ ಇರಬೇಕು. ಸೌತ್ ವೆಸ್ಟ್ ಎಂದು ಕರೆಯುವ ನೈರುತ್ಯ ಮೂಲೆಯಲ್ಲಿ ಮಲಗುವ ಕೋಣೆ ಇದ್ದರೆ ಆ ದಂಪತಿಗಳು ಅನ್ಯೋನ್ಯವಾಗಿ ಜೀವಿಸುತ್ತಾರೆ.



ಆದರೆ ವಾಯುವ್ಯ ಮೂಲೆ ಇರುವ ಕೋಣೆ , ಮಲಗುವ ಕೋಣೆಯನ್ನು ದಂಪತಿಗಳು ಉಪಯೋಗಿಸಬಾರದು ಎಂದು ವಾಸ್ತು ಇಳಿಸುತ್ತದೆ. ಈ ಚಿತ್ರಗಳಿಗೆ ಕೆಂಪು ಬಣ್ಣದ ಫ್ರೇಮ್ ಇದ್ದರೆ ಇನ್ನಷ್ಟು ಅನುಕೂಲ ಫಲಿತಾಂಶಗಳು ಇರುತ್ತವೆ. ಮಲಗುವ ಕೋಣೆಯಲ್ಲಿ ತಲೆ ಕಡೆಗೆ ಗೋಡೆಗೆ ಕಿಟಕಿಗಳು ಇರಬಾರದು. ಈ ರೀತಿ ಇದ್ದರೆ ಪ್ರತಿಕೂಲ ಪ್ರಭಾವ ಉಂಟಾಗುತ್ತದೆ. ಮಲಗುವ ಕೋಣೆಯಲ್ಲಿ ಬದನೆಕಾಯಿ ಬಣ್ಣ, ಗುಲಾಬಿ, ತಿಳಿ ಕೆಂಪು ಬಣ್ಣಗಳು ದಂಪತಿಗಳಿಗೆ ಅನುಕೂಲಕರವಾಗಿ ಪರಿಣಮಿಸುತ್ತವೆ.

ತಿಳಿ ಹಸಿರು, ಕಪ್ಪು, ನೀಲಿ ಬಣ್ಣಗಳು ದಂಪತಿಗಳ ನಡುವೆ ವ್ಯತಿರಿಕ್ತ ಭಾವನೆಗಳಿಗೆ ಕಾರಣವಾಗುತ್ತದೆ. ಅದೇ ರೀತಿ ನಿದ್ರಿಸುವಾಗ ದಕ್ಷಿಣದ ಕಡೆ ತಲೆ ಇಟ್ಟುಕೊಳ್ಳುವುದು, ಕಾಲುಗಳನ್ನು ಉತ್ತರದ ಕಡೆ ಇರುವಂತೆ ನೋಡಿಕೊಳ್ಳಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಮಲಗುವ ಕೋಣೆಯಲ್ಲಿ ತೆರೆದ ಕಪಾಟುಗಳು ಇರಬಾರದು. ತೇವ ಹೆಚ್ಚಾಗಿ ಇರದಂತೆ ನೋಡಿಕೊಳ್ಳಬೇಕು. ದೊಡ್ಡ ಶಬ್ದಗಳು ಕೇಳಿಸುವಂತೆ ಇರುವುದು ಒಳ್ಳೆಯದಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮಲಗುವ ಕೋಣೆ ದಕ್ಷಿಣದ ಗೋಡೆ ಕಡೆಗೆ ತಲೆ ಇಟ್ಟುಕೊಳ್ಳುವವರು ಆ ಗೋಡೆಗೆ ಪಾರಿವಾಳದ ಜೋಡಿ ಚಿತ್ರ, ಹೃದಯಾಕಾರದ ಚಿತ್ರಗಳು, ನಗುತ್ತಿರುವ ದಂಪತಿಗಳ ಚಿತ್ರಗಳನ್ನು ಅಳವಡಿಸಬೇಕು.

ದಕ್ಷಿಣ ಅಥವಾ ಪಶ್ಚಿಮಕ್ಕೆ ತಲೆ ಹಾಕಿ ಮಲಗುವಂತೆ ಬೆಡ್ ಹಾಕಬೇಕು. ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಲೇಬಾರದು. ಬೆಡ್ ಮೇಲ್ಭಾಗದಲ್ಲಿ ಅಡ್ಡಲಾಗಿ ಬೀಮ್ ಹಾದು ಹೋಗಿರಬಾರದು. ಹಾಗೇನಾದರೂ ಇದ್ದರೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಕೊಠಡಿಯಲ್ಲಿ ದಕ್ಷಿಣ ಅಥವಾ ಪಶ್ಚಿಮ ಭಾಗದ ಗೋಡೆಯತ್ತ ಬೆಡ್ ಹಾಕಬೇಕು. ಬೆಡ್ ಗೋಡೆಯಿಂದ ಕನಿಷ್ಠ ನಾಲ್ಕು ಇಂಚು ಅಂತರದಲ್ಲಿರಬೇಕು.  ಈ ವಾಸ್ತು ನಿಯಮಗಳನ್ನು ಪಾಲಿಸಿದರೆ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಬರಲ್ಲ ಎನ್ನುತ್ತಾರೆ ವಾಸ್ತು ನಿಪುಣರು.

No comments