Header Ads

test

ನೀರಾ ಕುಡಿಯುವ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಸತ್ಯಗಳು, ಈ ಕಲಬೆರಕೆ ನೀರಾ ಕುಡಿದುಮೃತಪಡುತ್ತಿದ್ದಾರೆ.

ಯಾವುದೇ ನಗರದ ಹೊರವಲಯಕ್ಕೆ ಹೋದರೂ ಕಲಬೆರಕೆ ನೀರಾ ಮಾರಾಟ ಜೋರಾಗಿರುತ್ತದೆ. ಅಪಾಯಕಾರಿ ಕೆಮಿಕಲ್ಸ್‌ನಿಂದ ತಯಾರಿಸುತ್ತಿರುವ ಮಾಫಿಯಾ ಅಮಾಯಕರ ಪ್ರಾಣದ ಜೊತೆ ಚಲ್ಲಾಟ ಆಡುತ್ತಿದೆ. ಇತರೆ ರಾಜ್ಯಗಳಿಂದ ನಿಷೇಧಿತ ರಾಸಾಯನಿಕಗಳನ್ನು ನಗರಕ್ಕೆ ತಂದು ಕಲಬೆರಕೆ ನೀರಾ ಮಾಡಿ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಅಬಕಾರಿ ಅಧಿಕಾರಿಗಳು ನೋಡಿಯೂ ನೋಡದಂತೆ ಇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತವೆ. ಅಲ್‌ರ್ಪಾಜೋಲಮ್ ಬೆರೆಸಿದ ನೀರಾ ಕುಡಿದವರು ಅದಕ್ಕೆ ವ್ಯಸನಿಯಾಗಿ ಬದಲಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಇತರೆ ರಾಜ್ಯಗಳಿಂದ ರಾಸಾಯನಿಕಗಳು
ನೀರಾದಲ್ಲಿ ಬೆರೆಸುವ ಭಯಂಕರ ರಾಸಾಯನಿಕಗಳನ್ನು ಮಹಾರಾಷ್ಟ್ರ, ತಮಿಳುನಾಡು ಮುಂತಾದ ರಾಜ್ಯಗಳಿಂದ ತರಸಿಕೊಳ್ಳಲಾಗುತ್ತದೆ. ಕೆಜಿ ಬೆಲೆ ಲಕ್ಷಾಂತರ ಖರ್ಚಾಗುತ್ತದೆ. ರಾಸಾಯನಿಕಗಳನ್ನು ಒಂದು ಚಮಚ ಪರಿಮಾಣದಲ್ಲಿ ಬೆರೆಸಿ ಅದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರಾ ತಯಾರಿಸುತ್ತಾರೆ. ಡ್ರಗ್ಸ್‌ಗಿಂತಲೂ ಅದು ಅಪಾಯಕಾರಿ. ಕಿಕ್ ಕಾರಣ ಕಲಬೆರಕೆ ನೀರಾಗೆ ಕೆಲವರು ವ್ಯಸನಿಗಳಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆಧುನಿಕ ಪರಿಕರಗಳಿಗೂ ಸಿಗದಂತೆ ಎಚ್ಚರ ವಹಿಸುತ್ತಿದ್ದಾರೆ. ಪರೀಕ್ಷೆಗಳಲ್ಲಿ ಆ ಸಂಗತಿ ಹೊರಬೀಳದಂತೆ ಇರಲು ಒಂದು ರೀತಿಯ ರಾಸಾಯನಿಕವನ್ನು ಸಹ ಬಳಸುತ್ತಿದ್ದಾರಂತೆ.

ಈ ರೀತಿಯ ಕಲಬೆರೆಕೆ ನೀರಾ ಕುಡಿದು ವ್ಯಸನಿಗಳಾಗುತ್ತಿರುವವರು ಅದನ್ನು ತ್ಯಜಿಸಿದರೆ ಫಿಟ್ಸ್, ನಾಲಿಗೆ ಕಚ್ಚಿಕೊಳ್ಳುವಂತಹ ವಿಚಿತ್ರ ಕಾಯಿಲೆಗಳು ಬರುತ್ತಿವೆ. ಹುಚ್ಚುಚ್ಚಾಗಿ ಆಡುವುದು ನಡೆಯುತ್ತದೆ. ಡೈಜೋಫಾಮ್, ಕ್ಲೋರೋಫಾಮ್, ಅಲ್‍ರ್ಪಾಜೋಲಮ್ ನಂತಹ ರಾಸಾಯನಿಕಗಳನ್ನು ಬೆರೆಸುವ ಕಾರಣ ಮಾನಸಿಕ ಸ್ಥಿತಿ ತಾಳ ತಪ್ಪುತ್ತಿದೆ. ಪ್ರಾಯದಲ್ಲೇ ಹೃದಯಾಘಾತ ಬರುವುದು. ಕಳ್ಳ ಮಾಲು ಕುಡಿದು ರಸ್ತೆಯಲ್ಲೇ ಬಿದ್ದು ಪ್ರಜ್ಞೆ ಇಲ್ಲದಂತೆ ಬೀಳುತ್ತಿದ್ದಾರೆ.

ಶುದ್ಧವಾದ ನೀರಾ ಹೇಗಿರುತ್ತದೆ?
ಶುದ್ಧವಾದ ನೀರಾದಲ್ಲಿ ಆಲ್ಕೋಹಾಲ್ ಪ್ರಮಾಣ ಶೇ.0 ಯಷ್ಟಿರುತ್ತದೆ. ಆದರೆ ಬಹಳಷ್ಟು ಮಂದಿ ಇದು ಹೆಂಡ ಎಂದೇ ತಿಳಿದುಕೊಳ್ಳುತ್ತಾರೆ. ನೀರಾ ಬಗ್ಗೆ ಮಹಾತ್ಮಾಗಾಂಧಿಜಿ ಯವರೇ ಹೇಳಿದ್ದಾರೆ. ಗರ್ಭಿಣಿಯರು ವಾರಕ್ಕೆ ಎರಡು ಮೂರು ಸಲ ನೀರಾ ಕುಡಿದರೆ ಹುಟ್ಟುವ ಮಗು ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಾಗಿರುತ್ತದೆ ಎಂದು ಹೇಳಿದ್ದಾರೆ. ನೀರಾ ಹೆಂಡ ಅಲ್ಲ. ಇದನ್ನು ಎಲ್ಲಾ ವಯೋಮಾನದವರು ಸೇವಿಸಬಹುದು.

ನೀರಾ ಇಳಿಸಿದ ನಂತರ 3 ಗಂಟೆಗಳ ಕಾಲ ಹಾಗೆಯೇ ಇಟ್ಟರೂ ಅದರಲ್ಲಿ ಮತ್ತಿನ ಅಂಶ ಇರಲ್ಲ. ಸುಮಾರು 12 ಗಂಟೆ ನಂತರ ಅದಲ್ಲಿ ಶೇ.0.7 ರಿಂದ ಶೇ.0.8ರಷ್ಟು ಆಲ್ಕೋಹಾಲ್ ಅಂಶ ಕಾಣಿಸುತ್ತದೆ. ಇದನ್ನು ವೈಜ್ಞಾನಿಕವಾಗಿ ಸಂಸ್ಕರಿಸಿದ ಆರು ತಿಂಗಳ ಕಾಲ ಕೆಡದಂತೆ, ಆಲ್ಕೋಹಾಲ್ ಅಂಶ ಇಲ್ಲದಂತೆ ಇಡಬಹುದು. ಇದು ಒಂದು ಪಾನೀಯ ಅಷ್ಟೇ.

No comments