Header Ads

test

ತಲೆಸ್ನಾನ ಮಾಡುವ ಮುನ್ನ ಶಾಂಪೂನಲ್ಲಿ ಸ್ವಲ್ಪ ಉಪ್ಪು ಬೆರೆಸಿದರೆ..ಏನಾಗುತ್ತದೆ..?

ಉಪ್ಪು ಈಗ ಅದೆಷ್ಟೋ ಅನಾರೋಗ್ಯಗಳನ್ನು ಹೊತ್ತು ಬರುವ ಮುಪ್ಪಾಗಿ ಬದಲಾಗಿದೆ. ಅದನ್ನು ಆಹಾರದ ಭಾಗವಾಗಿ ತೆಗೆದುಕೊಂಡರೆ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದರೆ ಉಪ್ಪನ್ನು ಆಹಾರ ಅಲ್ಲದೆ ಇತರೆ ಕೆಲಸಗಳಿಗೆ ಬಳಸಿದರೆ ಆರೋಗ್ಯಕ್ಕೆ ಉತ್ತಮ. ಸ್ವಲ್ಪ ಉಪ್ಪು ತೆಗೆದುಕೊಂಡು ತಲೆ ಸ್ನಾನ ಮಾಡುವ ಮುನ್ನ ಶಾಂಪೂನಲ್ಲಿ ಬೆರೆಸಿಕೊಂಡರೆ ಅನೇಕ ಲಾಭಗಳನ್ನು ಪಡೆಯಬಹುದು. ಈ ರೀತಿ ಮಾಡಿಕೊಂಡು ತಲೆಸ್ನಾನ ಮಾಡಿದರೆ ಕೂಡಲ ಜಿಡ್ಡು ಹೋಗುವುದಷ್ಟೇ ಅಲ್ಲದೆ ಕೊಳೆ, ಧೂಳು ಸಹ ನಿವಾರಣೆಯಾಗುತ್ತದೆ. ಶಾಂಪೂನಲ್ಲಿ ಸ್ನಾನ ಮಾಡಿದ ಬಳಿಕ ಬಹಳಷ್ಟು ಮಂದಿ ಹೊಳೆಯಲು ಕಂಡೀಷನರ್ ಬಳಸುತ್ತಾರೆ. ಆದರೆ ಉಪ್ಪು ಬೆರೆಸಿ ತಲೆ ಸ್ನಾನ ಮಾಡಿದರೆ ಒಳ್ಳೆ ಕಂಡೀಷನರ್ ತಹ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಕೂದಲು ಉದುರುವುದು ಕಡಿಮೆಯಾಗಿ ಕೂದಲು ಬೆಳೆಯುತ್ತದೆ ಎಂದು ಕೆಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತಲೆ ಹೊಟ್ಟಿನ ಸಮಸ್ಯೆಗೆ ಒಳ್ಳೆಯ ಪರಿಹಾರ... ಇನ್ನೂ ಉಪ್ಪಿನಿಂದ ಸಾಕಷ್ಟು ಪ್ರಯೋಜನಗಳಿವೆ.




ಉಪ್ಪು ಸ್ವಲ್ಪ ತೆಗೆದುಕೊಂಡು ಈ ರೀತಿ ಬಳಸಿದರೆ:

* ಉಪ್ಪು ನಮಗೆ ಒಳ್ಳೆಯ ಸ್ಕ್ರಬ್ ಆಗಿ ಕೆಲಸ ಮಾಡುತ್ತದೆ. ನಾವು ಬಳಸುವ ಫೇಷಿಯಲ್ ಕ್ರೀಮ್‌ಗೆ ಒಂದು ಸ್ಫೂ ಉಪ್ಪು ಬೆರೆಸಿ ಮುಖಕ್ಕೆ ಅಪ್ಲೈ ಮಾಡಬೇಕು. ಸ್ವಲ್ಪ ಹೊತ್ತು ಮೃದುವಾಗಿ ಉಜ್ಜಿದರೆ ಚರ್ಮ ರಂಧ್ರಗಳು ತೆರೆದುಕೊಳ್ಳುತ್ತವೆ. ಇದರಿಂದ ಕೊಳೆ, ಧೂಳು ಇದ್ದರೆ ನಿವಾರಣೆಯಾಗುತ್ತದೆ. ಎಣ್ಣೆ ಚರ್ಮದವರ ಮುಖವನ್ನು ಕಾಂತಿಯುತವಾಗಿ ಮಾಡುತ್ತದೆ.

* ಪಾದಗಳು ಹೊಡೆದು, ಬೆರಳುಗಳ ನಡುವೆ ಚರ್ಮ ಒಣಗಿ ಕಿರಿಕಿರಿಯಾಗುತ್ತಿದ್ದರೆ ಸ್ವಲ್ಪ ಆಲೀವ್ ಎಣ್ಣೆಯಲ್ಲಿ ಸಾಲ್ಟ್ ಬೆರೆಸಿ ಆ ಮಿಶ್ರಣವನ್ನು ಅಪ್ಲೈ ಮಾಡಿ.

* ಸ್ವಲ್ಪ ಉಪ್ಪು ತೆಗೆದುಕೊಂಡು ನೀರಿನಲ್ಲಿ ಬೆರೆಸಿ ಅದನ್ನು ಗಾಯವಾದ ಕಡೆ ಹಚ್ಚಿದರೆ ಶೀಘ್ರವಾಗಿ ಗುಣಮುಖವಾಗುತ್ತದೆ.

* ಬಾಡಿ ಪೇಯಿನ್ಸ್ ಕಡಿಮೆ ಮಾಡುವಲ್ಲಿ ಉಪ್ಪು ಸಹಾಯ ಮಾಡುತ್ತದೆ. ತಲೆನೋವು ಇದ್ದಾಗ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ರಿಲೀಫ್ ಇರುತ್ತದೆ.

*ಪಾತ್ರೆಗಳ ಮೇಲಿನ ಕಲೆಗಳು, ಜಿಡ್ಡನ್ನು ಉಪ್ಪು ತುಂಬಾ ಸುಲಭವಾಗಿ ನಿವಾರಿಸುತ್ತದೆ.

No comments