Header Ads

test

ಅವರ ಬಗ್ಗೆ ಕಥೆ, ಕಥನ ಅಗತ್ಯವಿಲ್ಲ.. ಜಸ್ಟ್ ಈ ಪುಟ್ಟ ಸಂಗತಿ ಓದಿದರೆ ಸಾಕು.. 'ತರತಮ ಭಾವ'ಜಯಿಸಿದ 'ದೇವರು'...

ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾಗಿದ್ದಾರೆ. ಒಟ್ಟು 111 ವರ್ಷಗಳ ಕಾಲ ತುಂಬು ಜೀವನ ನಡೆಸಿದ ಅವರು ತಮ್ಮ ಜೀವನವನ್ನೇ ಜನರ ಸೇವೆಗೆ ಮುಡಿಪಾಗಿಟ್ಟವರು. ಬಸವತತ್ವವನ್ನು ಸಾರುತ್ತಾ ಲಕ್ಷಾಂತರ ಮಕ್ಕಳಿಗೆ ವಿದ್ಯೆ, ಊಟ, ವಸತಿಯನ್ನು ಉಚಿತವಾಗಿ ನೀಡಿದ ಮಹನೀಯರು. ರಾಜಕೀಯದಿಂದ ಸದಾ ದೂರ ಉಳಿದಿದ್ದ ಶ್ರೀಗಳಿಗೆ ಭಾರತರತ್ನ ನೀಡಬೇಕು ಎಂಬ ಬೇಡಿಕೆ ಮುಗಿಲು ಮುಟ್ಟಿದೆ.ಅಬ್ದುಲ್ ಕಲಾಂ ಅವರಂತಹ ಮಹಾನುಭಾವರೂ ಬಂದು ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದರು. ಅವರು ನಂಬಿದ ಆಚಾರಕ್ಕೆ ಯಾವುದೇ ಜಾತಿ, ಕುಲ, ಧರ್ಮದ ಹಂಗಿರಲಿಲ್ಲ. ಅವರಿಗೆ ಎಲ್ಲರೂ ಒಂದೇ. ಹದಿಮೂರು ಮಂದಿ ಮಕ್ಕಳಲ್ಲಿ ಒಬ್ಬರಾಗಿ ಜನಿಸಿದ ಅವರು 1930ರಲ್ಲೇ ಮ್ಯಾಥ್ಸ್, ಫಿಸಿಕ್ಸ್ ಪದವೀಧರರು... ಶಿಕ್ಷಣದ ಮಹತ್ವ ತಿಳಿದವರು. ಎಲ್ಲಕ್ಕಿಂತ ಹೆಚ್ಚಾಗಿ ಬೇಧಭಾವ ಜಯಿಸಿದವರು. ತಾನು ಜೀವಿಸಿದ್ದಷ್ಟು ದಿನವೂ ಯಾವುದೇ ರಾಜಕೀಯ ಪಕ್ಷದ ಕಡೆಗೆ ರಾಗದ್ವೇಷವನ್ನು ಪ್ರದರ್ಶಿಸಲಿಲ್ಲ. ಕೇವಲ ಪ್ರಜಾಸೇವೆ.. ಇದು ತನ್ನ ಜೀವನ.. ನರ್ಸರಿಯಿಂದ ಇಂಜಿನಿಯರಿಂಗ್, ವೈದ್ಯ, ಬಿಝಿನೆಸ್, ಸೈನ್ಸ್, ಆರ್ಟ್ಸ್‌ನಲ್ಲಿ ಪ್ರತಿ ವರ್ಷ 132 ಶಿಕ್ಷಣ ಸಂಸ್ಥೆಗಳ ಮೂಲಕ 10 ಸಾವಿರ ಮಂದಿಗೆ ವಿದ್ಯಾದಾನ ಮಾಡಿದರು. ಅವರ ಬಗ್ಗೆ ಇಷ್ಟೆಲ್ಲಾ ಹೇಳುವ ಅಗತ್ಯವಿಲ್ಲ. ಇದು ಎಲ್ಲರಿಗೂ ಗೊತ್ತಿರುವುದೇ. ಗಾಯತ್ರಿ ಎಂಬವರು ಹಂಚಿಕೊಂಡಿರುವ ಒಂದು ಸಣ್ಣ ಘಟನೆ ಓದಿದರೆ ಸಾಕು... ಅವರ ನಡತೆ, ಅವರ ಗುಣ, ಅವರ ತತ್ವ ಅರ್ಥವಾಗುತ್ತದೆ.

ಋತುಮತಿಯಾಗಿದ್ದಾಗ ಮಹಿಳೆಯರನ್ನು ಹೇಗೆ ನೋಡುತ್ತಾರೆ ಎಂಬುದು ನಮಗೆ ಗೊತ್ತೇ ಇದೆ... ವಿಶೇಷವಾಗಿ ಆಧ್ಯಾತ್ಮಿಕ ಸ್ಥಳದಲ್ಲಿ... ಈಗಲೂ ಆ ಅನಾಗರೀಕ ಆಚರಣೆಗಳಿವೆ.. ಆದರೆ ಆ ಕಾಲದಿಂದ ಅವರು ಅದನ್ನು ದೂರ ಇಟ್ಟರು.. ತನ್ನ ಮಠದಲ್ಲಿ ಆ ತಾರತಮ್ಯ ಇಲ್ಲದಂತೆ ಮಾಡಿದರು.. ಇದನ್ನು ಓದಿ.. ನಿಮಗೇ ಅರ್ಥವಾಗುತ್ತದೆ.

"ನನಗಾಗ 13 ವರ್ಷಗಳಿರುತ್ತದೆ.. ಶಾಲೆಯಿಂದ ನಾವು ಶಿವಗಂಗೆಗೆ ಟ್ರೆಕ್ಕಿಂಗ್ ಹೋದೆವು. ವಾಪರ್ ಬರುವಾಗ ಮಧ್ಯಾಹ್ನದ ಊಟಕ್ಕಾಗಿ ಸಿದ್ದಗಂಗ ಮಠ ತಲುಪಿದೆವು. ನಮ್ಮಲ್ಲಿ ಕೆಲವರು ಬೇರೆಯಾಗಿ ನಿಂತೆವು. ಕೆಲವು ಶಿಷ್ಯರೊಂದಿಗೆ ಕಾಷಾಯ ತೊಟ್ಟ ಹಿರಿಯರೊಬ್ಬರು ಅಲ್ಲಿಗೆ ಬಂದರು.. ಯಾಕೆ ತಾಯಿ ಆ ರೀತಿ ಹೊರಗೆ ನಿಂತಿದ್ದೀರಿ ಎಂದರು. ಆ ಕಣ್ಣ ತುಂಬ ಅಪಾರ ಪ್ರೀತಿ, ಕರುಣೆ... ಅವರು ಯಾರು ಎಂದು ನಮಗೆ ಆಗ ತಿಳಿದಿರಲಿಲ್ಲ. ಪೀರಿಯಡ್ ಟೈಮ್ ಸ್ವಾಮಿ... ನಮಗೆ ಸಪರೇಟ್ ಆಗಿ ಊಟ ಇಡುತ್ತೇವೆ ಎಂದರು..ಹಾಗಾಗಿ ಇಲ್ಲಿ ಕಾಯುತ್ತಿದ್ದೇವೆ.. ಎಂದು ಉತ್ತರಿಸಿದೆವು..ಅವರ ಮುಖದಲ್ಲಿ ಒಮ್ಮೆಲೆ ಬದಲಾವಣೆ..ಕಣ್ಣು ಮುಚ್ಚಿದರು ಸ್ವಲ್ಪ ಹೊತ್ತು.. ಅಮ್ಮಾ ನೀವು ಹೇಳುತ್ತಿರುವುದು ಅತ್ಯಂತ ಸಹಜವಾದ ಒಂದು ಪ್ರಾಕೃತಿಕ ಕ್ರಿಯೆ ಅದರಲ್ಲಿ ನಾಚಿಕೆಪಡುವಂತಹದ್ದೇನಿದೆ.. ದೂರ ಇರುವ ಕಾರಣ ಏನು..ತನ್ನ ಮಠದಲ್ಲಿ.. ವಿದ್ಯಾಲಯದಲ್ಲಿ ಈ ರೀತಿಯ ಬೇಧಭಾವ ಕಾಣಿಸಬಾರದು ಎಂದು ಕೂಡಲೆ ಅಲ್ಲಿದ್ದವರಿಗೆ ಸೂಚಿಸಿದರು.. ಅವರೇ ಲಕ್ಷಾಂತರ ಮಂದಿ ಪೂಜಿಸುವ ಆರಾಧಿಸುವ ಶಿವಕುಮಾರ ಸ್ವಾಮೀಜಿ ಎಂದು ಬಳಿಕ ಗೊತ್ತಾಯಿತು.. ಒಂದು ಮಠ, ಒಂದು ಆಶ್ರಮ, ಒಂದು ಸಾಧು ಜೀವನ, ಒಂದು ನಿಜವಾದ ಪ್ರಜಾಸೇವೆ ಹೇಗೆ ಇರಬೇಕು ಎನ್ನಲು ಅವರ ಜೀವನ ಲೋಕಕ್ಕೆ ಒಂದು ಪಾಠ... ಹಾಗಾಗಿ ಅವರು ಶಿವೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆ ಕಣ್ಣೀರಾದೆ..." ಇದಿಷ್ಟು ಅವರು ಬರೆದುಕೊಂಡಿದ್ದು... ಈ ಒಂದು ಅಗುಳು ಸಾಕಲ್ಲವೇ.. ಅನ್ನ ಬೆಂದಿಗೆ ಇಲ್ಲವೇ ಎಂದು ತಿಳಿಯಲು..!

No comments