Header Ads

test

ಚಳಿಗಾಲದಲ್ಲಿ ತುಟಿ ಹೊಡೆಯುತ್ತಿದೆ ಎಂದು ಅದನ್ನು ಬಳಸುತ್ತಿದ್ದೀರಾ..? ಆದರೆ ಇದನ್ನು ಓದಲೇಬೇಕುನೀವು..!

ಚಳಿಗಾಲದಲ್ಲಿ ತುಟಿ ಹೊಡೆದು, ಒಣಗಿದಂತೆ ಆಗಿ ತುಂಬಾ ಕಿರಿಕಿರಿ ಉಂಟು ಮಾಡುತ್ತವೆ. ಆ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಮಾಯಿಶ್ಚರೈಸರ್, ಲಿಪ್ ಸ್ಟಿಕ್ಸ್ ನಂತಹವನ್ನು ಬಳಸುತ್ತಾರೆ. ಅವನ್ನು ಬಳಸುವುದರಿಂದ ಚರ್ಮ ಹಾಳಾಗುತ್ತದೆ. ಆ ರೀತಿ ಅಲ್ಲದೆ ಪ್ರಕೃತಿ ಪರವಾಗಿ ಲಭಿಸುವ ಸಹಜ ಸಿದ್ಧವಾದ ಕೆಲವು ಆಹಾರ ಪದಾರ್ಥಗಳಿಂದ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ನಾವು ತೆಗೆದುಕೊಳ್ಳುವ ಆಹಾರ, ಅತಿಯಾದ ಬಿಸಿ, ಸೂಕ್ತ ಜಾಗ್ರತೆ ತೆಗೆದುಕೊಳ್ಳದಿರುವ ಕಾರಣ ತುಟಿಗಳು ಸಹಜ ಬಣ್ಣವನ್ನು ಕಳೆದುಕೊಂಡು ಕಪ್ಪಗೆ ಬದಲಾಗುತ್ತವೆ. ಆ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರೆ ಕೆಲವು ರೀತಿಯ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದೇ ಇದಕ್ಕೆ ಉತ್ತಮ ಪರಿಹಾರ. ಅದು ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ.




1. ತುಟಿಗಳು ಆರೋಗ್ಯಕರವಾಗಿ ಇರಲು ಬಿ ವಿಟಮಿನ್ ಉಪಯೋಗಕ್ಕೆ ಬರುತ್ತದೆ. ವಿವಿಧ ರೂಪಗಳಲ್ಲಿ ಬಿ ವಿಟಮಿನ್ ತೆಗೆದುಕೊಳ್ಳುವುದರಿಂದ ತುಟಿಗಳು ಹೊಡೆಯದಂತೆ ಆರೋಗ್ಯಕರವಾಗಿ, ಸುಂದರವಾಗಿ ಇರುತ್ತವೆ.

2. ಬ್ಲ್ಯಾಕ್ ಟಿ ಬ್ಯಾಗನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಮುಳುಗಿಸಿ ಎರಡು ಮೂರು ನಿಮಿಷಗಳ ಕಾಲ ಅದನ್ನು ತುಟಿಗಳ ಮೇಲೆ ನಿಧಾನಕ್ಕೆ ಒತ್ತಬೇಕು. ಇದು ತುಟಿಗಳ ತೇವವನ್ನು ಹೆಚ್ಚಿಸುತ್ತದೆ.

3. ಟಿ, ಕಾಫಿಗಳನ್ನು ಕುಡಿಯುವುದರಿಂದ ಸಹ ತುಟಿಗಳು ಕಪ್ಪಗೆ ಬದಲಾಗುವ ಅವಕಾಶ ಜಾಸ್ತಿ ಇರುತ್ತದೆ. ಆದಕಾರಣ ಅವಕ್ಕೆ ಬದಲಾಗಿ ಗ್ರೀನ್ ಟಿ ತೆಗೆದುಕೊಂಡರೆ ಉತ್ತಮ. ಇದರಲ್ಲಿ ಪಾಲಿಫಿನಾಲ್ಸ್ ದೇಹದಲ್ಲಿನ ಫ್ರೀ ರಾಡಿಕಲ್ಸ್ ಜತೆಗೆ ಹೋರಾಡುತ್ತವೆ. ಅಷ್ಟೇ ಅಲ್ಲ ವಯಸ್ಸು ಹೆಚ್ಚಾಗುವುದು, ಬಿಸಿಲಿನ ಝಳದ ಕಾರಣ ಒಣಗಿನ ತುಟಿಗಳಿಗೆ ರಕ್ಷಣೆ ಕಲ್ಪಿಸುತ್ತವೆ. ಟಿ ಬ್ಯಾಗುಗಳನ್ನು ತುಟಿಗಳ ಮೇಲೆ ಮೃದುವಾಗಿ ಮಾಲೀಸು ಮಾಡುವುದರಿಂದ ಒಣಗಿದ, ಹೊಡೆದ ತುಟಿಗಳಿಗೆ ರಿಲ್ಯಾಕ್ಸ್ ಸಿಗುತ್ತದೆ.

4. ಟೊಮಾಟೋದಲ್ಲಿ ಅನೇಕ ರೀತಿಯ ಪೋಷಕಾಂಶಗಳಿವೆ. ಇವುಗಳಲ್ಲಿ ಸೆಲೆನೀಯಂ ಎಂಬ ಆಂಟಿ ಆಕ್ಸಿಡೆಂಟ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ಸೂರ್ಯ ಕಿರಣಗಳಿಂದ ನಿಮ್ಮ ಚರ್ಮವನ್ನು, ತುಟಿಗಳನ್ನು ರಕ್ಷಿಸುತ್ತದೆ. ಆದಕಾರಣ ಪ್ರತಿದಿನ ಇದನ್ನು ಯಾವುದೋ ಒಂದು ರೂಪದಲ್ಲಿ ತೆಗೆದುಕೊಳ್ಳುವಂತೆ ನೋಡಿಕೊಳ್ಳಿ. ಬಿಸಿಲಿನಿಂದ ಬಂದ ಕೂಡಲೆ ನಿಮ್ಮ ತುಟಿಗಳಿಗೆ ಟೊಮೊಟೋ ತಿರುಳು ಅಥವಾ ರಸವನ್ನು ಹಚ್ಚುವುದರಿಂದ ಅವು ತಮ್ಮ ಸಹಜ ಬಣ್ಣವನ್ನು ಕಳೆದುಕೊಳ್ಳಲ್ಲ. ಅಷ್ಟೇ ಅಲ್ಲ ತಾಜಾ ಆಗಿಯೂ ಇರುತ್ತವೆ.

5. ಪ್ರತಿ ದಿನ ಒಂದು ಚಮಚ ಜೇನು ತೆಗೆದುಕೊಳ್ಳಬೇಕು. ಇದು ನಿಮ್ಮ ಆರೋಗ್ಯಕ್ಕೆ ಒಳಿತು ಮಾಡುತ್ತದೆ. ಒಮ್ಮೊಮ್ಮೆ ತುಟಿಗಳು ಹೊಡೆದು ತೊಂದರೆ ಮಾಡುತ್ತವೆ. ಅಂತಹ ಸಮಯದಲ್ಲಿ ಗ್ಲಿಸರಿನ್ ಎರಡು ಹನಿ, ನಿಂಬೆರಸ ಅರ್ಧ ಚಮಚ ತೆಗೆದುಕೊಂಡು ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ತುಟಿಗಳಿಗೆ ಹಚ್ಚಿದರೆ ಹೊಡೆಯುವುದು ಕಡಿಮೆಯಾಗುತ್ತದೆ.

6. ಈ ಕಾಲದಲ್ಲಿ ದಾಹ ಆಗುತ್ತಿಲ್ಲ ಎಂದು ನೀರು ಕುಡಿಯದೆ ಇರುತ್ತೇವೆ. ಆದರೆ ಇದು ಸರಿಯಲ್ಲ. ದೇಹಕ್ಕೆ ಅಗತ್ಯ ಇರುವಷ್ಟು ನೀರಿನೊಂದಿಗೆ ಚಳಿಗಾಲದಲ್ಲಿ ಇನ್ನೂ ಹೆಚ್ಚು ನೀರು ತೆಗೆದುಕೊಳ್ಳಬೇಕು. ಇದರಿಂದ ದೇಹದ ಜತೆಗೆ ತುಟಿಗಳು ಸಹ ಒಣಗದಂತೆ ಇರುತ್ತವೆ.

No comments