Header Ads

test

ಬೆರಳುಗಳ ಮೇಲಿನ ಉಂಗುರದ ಕಲೆಯನ್ನು ನಿವಾರಿಸಲು ಅತ್ಯದ್ಭುವಾದ ಟ್ರಿಕ್ಸ್..!

ಉಂಗುರ ಅದು ಯಾವುದೇ ಲೋಹದಿಂದ ತಯಾರಿಸಿದ್ದರೂ ಅದನ್ನು ನಿಯಮಿತವಾಗಿ ಬಳಸುವುದರಿಂದ ಅಲ್ಲಿ ಕಲೆಗಳು ಉಂಟಾಗುತ್ತವೆ. ಚಿನ್ನ, ಬೆಳ್ಳಿ, ಪ್ಲಾಟಿನಂ ಅದು ಯಾವುದೇ ಲೋಹವಾದರೂ ಸತತ ಒಂದೇ ಜಾಗದಲ್ಲಿ ಬಳಸುವುದರಿಂದ ಕಲೆಗಳು ಉಂಟಾಗುತ್ತವೆ. ಕೆಲವರಿಗೆ ಕಪ್ಪಗೆ, ಇನ್ನೂ ಕೆಲವರಿಗೆ ಕೆಂಪಗೆ ಕಾಣಿಸುತ್ತವೆ. ಅವನ್ನು ನಿವಾರಿಸಿಕೊಳ್ಳಲು ಇಲ್ಲಿವೆ ನೋಡಿ ಒಂದಷ್ಟು ಸಲಹೆಗಳು. ಇವುಗಳಲ್ಲಿ ಕೆಲವು ಟ್ರಿಕ್ಸ್ ಮನೆಯಲ್ಲೇ ಮಾಡುವುದರಿಂದ ಯಾವುದೇ ಹಾನಿಯುಂಟು ಮಾಡಲ್ಲ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.




ಬಹಳಷ್ಟು ಮಂದಿ ಉಂಗುರಗಳನ್ನು ರೆಗ್ಯುಲರ್ ಆಗಿ ಹಾಕಿಕೊಳ್ಳುತ್ತಿರುತ್ತಾರೆ. ಆ ರೀತಿ ಸುದೀರ್ಘ ಸಮಯ ಹಾಕಿಕೊಳ್ಳುವುದರಿಂದ ಉಂಗುರ ಧರಿಸುವ ಬೆರಳ ಸುತ್ತಲೂ ಕಲೆ ಹಾಗೆಯೇ ಉಳಿಯುತ್ತದೆ. ಆ ಕಲೆಯನ್ನು ನಿವಾರಿಸಲು ಕೆಲವು ಮನೆಮದ್ದುಗಳಿವೆ. ಅವನ್ನು ಈಗ ಪಾಲಿಸಿದರೆ ಬಹುತೇಕ ಉಂಗುರದ ಕಲೆಗಳು ನಿವಾರಣೆಯಾಗುತ್ತವೆ. ಉಂಗುರ ಬಿಗಿಯಾಗಿದ್ದಾಗ ಅಲ್ಲಿನ ಚರ್ಮಕ್ಕೆ ಗಾಳಿ ಆಡದೆ ತೇವಾಂಶ ಆ ಭಾಗದಲ್ಲಿ ಸಂಗ್ರಹವಾಗಿ ಪಂಗಲ್ ಉಂಟಾಗಿ ಚರ್ಮ ಸಮಸ್ಯೆಗಳು ಬರುವ ಅವಕಾಶಗಳಿವೆ. ಅಲ್ಲಿನ ಚರ್ಮ ಸಮಸ್ಯೆ ಹೆಚ್ಚಾಗಿದ್ದರೆ ಮಾತ್ರ ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ಸಮಸ್ಯೆ ಅಷ್ಟಾಗಿ ದೊಡ್ಡದಲ್ಲೇ ಇದ್ದರೆ ಮಾತ್ರ ಈಗ ನಾವು ಹೇಳಲಿರುವ ಮನೆ ಮದ್ದುಗಳನ್ನು ಉಪಯೋಗಿಸಬಹುದು.

ಉಂಗುರದ ಕಲೆಗಳಿರುವ ಪ್ರದೇಶದಲ್ಲಿ ವಾರಕ್ಕೆ ಎರಡು ಸಲ ಅಲೋವೆಲಾ (ಲೋಳೆಸರ) ಹಚ್ಚುತ್ತಿರಬೇಕು. ಈ ರೀತಿ ಮಾಡುವುದರಿಂದ ಆ ಜಾಗದಲ್ಲಿ ಇರುವ ಮೃತ ಕಣಗಳು ನಿವಾರಣೆಯಾಗಿ ಉಂಗುರದ ಕಲೆಗಳು ಕ್ರಮೇಣ ಕಡಿಮೆಯಾಗುತ್ತವೆ.

ಒಮ್ಮೊಮ್ಮೆ ಸನ್ ಟ್ಯಾನ್ ಸಹ ಉಂಗುರ ಕಲೆಗಳನ್ನು ಇನ್ನಷ್ಟು ಕಠಿಣವಾಗಿಸುತ್ತದೆ. ಹಾಗಾಗಿ ಹೊರಗೆ ಹೋಗುವಾಗ ಸನ್‌ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳುವುದು ಉತ್ತಮ.

ಒಂದು ಸ್ಫೂನ್ ನಿಂಬೆರಸದಲ್ಲಿ ಒಂದು ಸ್ಫೂನ್ ಜೇನನ್ನು ಬೆರೆಸಿ ಉಂಗುರ ಕಲೆ ಇರುವ ಜಾಗದಲ್ಲಿ ಹಚ್ಚಿದರೆ ಕ್ರಮೇಣ ಉಂಗುರ ಗುರುತುಗಳು ನಿವಾರಣೆಯಾಗುತ್ತವೆ.

ಬೆರಳಿನ ಮೇಲೆ ಕಠಿಣವಾದ ಉಂಗುರ ಕಲೆಗಳನ್ನು ತೊಲಗಿಸಲು ಮೆನಿಕ್ಯೂರ್ ಸುಲಭವಾದ ವಿಧಾನ. ತಿಂಗಳಿಗೆ ಎರಡು ಸಲವಾದರೂ ಮೆನಿಕ್ಯೂರ್, ಪೆಡಿಕ್ಯೂರ್‍ ಮಾಡಿಸಿಕೊಂಡರೆ ಒಳ್ಳೆಯ ಫಲಿತಾಂಶ ಕಾಣಬಹುದು.

No comments