Header Ads

test

ಮನೆಯಲ್ಲಿರುವ ಹೊಲೆಯನ್ನು ಈ ರೀತಿ ಬಳಸಿದರೆ ಸಕಲ ದರಿದ್ರಗಳು ತಪ್ಪಿದ್ದಲ್ಲ.!! ಯಾಕೆಂದರೆ..?

ಮನೆ ಕಟ್ಟುವಾಗ ಆಗಲಿ, ಬಾಡಿಗೆ ಮನೆಯಲ್ಲಿ ಇದ್ದಾಗ ಆಗಲಿ ಪ್ರತಿಯೊಬ್ಬರೂ ವಾಸ್ತು ನೋಡಿಕೊಂಡು ಆ ಮನೆಗೆ ಅಡಿಯಿಡಬೇಕು ಎನ್ನುತ್ತಿದ್ದಾರೆ ಜ್ಯೋತಿಷಿಗಳು. ಯಾಕೆಂದರೆ ನಮ್ಮ ಟೈಮ್ ಚೆನ್ನಾಗಿದ್ದಾಗ ಯಾವುದೇ ಮನೆಯಲ್ಲಿದ್ದರೂ ಸ್ವಲ್ಪ ಮಟ್ಟಿಗೆ ಚೆನ್ನಾಗಿಯೇ ಇರುತ್ತದೆ. ಅದೇ ನಮ್ಮ ಜಾತಕ ರೀತಿ ನಮ್ಮ ಟೈಮ್ ಚೆನ್ನಾಗಿಲ್ಲದಿದ್ದಾಗ ಆ ವಾಸ್ತು ಸಮಸ್ಯೆ ಇನ್ನಷ್ಟು ದೊಡ್ಡದಾಗಿ ನಮ್ಮನ್ನು ಸಮಸ್ಯೆಗಳಿಗೆ ಸಿಲುಕಿಸುತ್ತದೆ. ಅದೇ ರೀತಿ ಮನೆಯಲ್ಲಿನ ಪ್ರತಿ ರೂಮಿನಲ್ಲೂ ವಾಸ್ತು ನೋಡಿಕೊಳ್ಳಬೇಕಂತೆ. ಮನೆಯ ಒಳಕ್ಕೆ ಪ್ರವೇಶಿಸಿದ ಬಳಿಕ ಪೂರ್ವ ದಿಕ್ಕಿಗೆ ದೇವರನ್ನು ಇಟ್ಟು ದೀಪ ಬೆಳಗಬೇಕು. ಅಷ್ಟೇ ಅಲ್ಲ ಆಗ್ನೇಯದಲ್ಲಿ ಹೊಲೆಯನ್ನು ಇಟ್ಟು ಪೂಜೆ ಮಾಡಿಕೊಂಡು ಹಾಲು ಉಕ್ಕಿಸಬೇಕು ಎಂದು ಹೇಳುತ್ತಾರೆ.



ಆದರೆ ಆಧ್ಯಾತ್ಮಿಕ ಭಾವನೆಗಳು ಉಳ್ಳ ಬಹಳಷ್ಟು ಮಂದಿಗೆ ಇವೆಲ್ಲಾ ಗೊತ್ತು. ಆಗ್ನೇಯದಲ್ಲಿ ಹೊಲೆ ಇಟ್ಟು ಅಡುಗೆ ಮಾಡಬೇಕು. ಮನೆಯಲ್ಲಿ ಗ್ಯಾಸ್ ಸ್ಟವ್ ಆಗ್ನೇಯದಲ್ಲಿ ಇಟ್ಟರೂ ಕೆಲವು ತಪ್ಪುಗಳನ್ನು ಮಾತ್ರ ಮಾಡಬಾರದು. ಹೊಲೆ ಬಳಸುವಾಗ ಮಾಡುವ ಕೆಲವು ತಪ್ಪುಗಳಿಂದ ಅನೇಕ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಹಾಗಾಗಿ ಹೊಲೆಯನ್ನು ಬಳಸುವಾಗ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಿದ್ದಾರೆ. ಇನ್ನೂ ಏನೆಲ್ಲಾ ಹೇಳುತ್ತಿದ್ದಾರೆ ಎಂದರೆ... ಗ್ಯಾಸ್ ಸ್ಟವನ್ನು ಆಗ್ನೇಯದಲ್ಲಿ ಇಡಬೇಕು. ಗ್ಯಾಸ್ ಸ್ಟವ್ವನ್ನು ಗೋಡೆಗೆ ತಾಕಿಸಿ ಇಡಬಾರದು.

ಆ ರೀತಿ ಬಳಸುವುದರಿಂದ ಮನೆಯಲ್ಲಿ ಆರ್ಥಿಕ ತೊಂದರೆಗಳು, ಮಾನಸಿಕ ಸಮಸ್ಯೆಗಳು ಬರುತ್ತವೆ. ಗ್ಯಾಸ್ ಸ್ಟವ್ವನ್ನು ಎರಡು ಬರ್ನರ್‌ಗಳು ಇರುವುದನ್ನು ಮಾತ್ರ ಬಳಸಬೇಕು. ಎರಡು ಬರ್ನರ್ ಇರುವುದನ್ನು ಬಳಸಿದರೆ ಆ ಮನೆಯಲ್ಲಿ ಯಾವುದೇ ಸಮಸ್ಯೆಗಳು ಬರಲ್ಲ ಎಂದು ಆಧ್ಯಾತ್ಮಿಕ ತಜ್ಞರ ಸಲಹೆ.

ಮೂರು, ನಾಲ್ಕು ಬರ್ನರ್‌ಗಳುಳ್ಳ ಸ್ಟವ್ ಬಳಸಿದರೆ ಗಂಡ ಹೆಂಡತಿ ನಡುವೆ ಜಗಳ, ಮಕ್ಕಳಿಂದ ಸಮಸ್ಯೆಗಳು ಬರುವ ಸಾಧ್ಯತೆಗಳು ಇವೆ. ಪ್ರತಿಯೊಂದು ಕೆಲಸದಲ್ಲೂ ಅಡ್ಡಿ ಆತಂಕಗಳು ಬರಬಹುದು. ಅದೇ ಎರಡು ಬರ್ನರ್ ಉಳ್ಳ ಗ್ಯಾಸ್ ಸ್ಟವ್ ಆದರೆ ಆ ಮನೆ ಆರೋಗ್ಯವಾಗಿ, ಆನಂದವಾಗಿ ಇರುತ್ತದೆ ಎಂದಿದ್ದಾರೆ ವಾಸ್ತು ತಜ್ಞರು. ಹಾಗಾಗಿ ಈ ರೀತಿ ಇರುವಂತೆ ಎಚ್ಚರ ವಹಿಸಿ. ವಾಸ್ತು ಸಮಸ್ಯೆಯನ್ನು ದೂರ ಮಾಡಿಕೊಳ್ಳಿ.

No comments