Header Ads

test

ಈ ಸಂಗತಿ ಗೊತ್ತಾದರೆ ಕಣ್ಣೀರು ಬರುತ್ತದೆ..! ಇನ್ನೊಮ್ಮೆ ಗಾಳಿಪಟ ಹಾರಿಸಲು ಅದನ್ನು ಬಳಸಲ್ಲ!

ಸಂಕ್ರಾಂತಿ ಎಂದರೆ ನಮಗೆ ನೆನಪಾಗುವುದು ರಂಗೋಲಿ, ಗಾಳಿಪಟ, ಎಳ್ಳುಬೆಲ್ಲ, ಕಬ್ಬು, ಸಕ್ಕರೆ ಅಚ್ಚು, ಹುಗ್ಗಿ... ಹಬ್ಬದ ದಿನ ಮನೆ ಮಂದಿಯಲ್ಲಾ ಜತೆಯಾಗಿ ಸಂತೋಷವಾಗಿ ಕಳೆಯುತ್ತಾರೆ. ಆದರೆ ನಮ್ಮ ಸಂತೋಷ ಪಕ್ಷಿಗಳ ಪಾಲಿಗೆ ಯಮಪಾಶವಾಗುತ್ತಿದೆ. ನಮ್ಮ ಗಾಳಿಪಟಕ್ಕೆ ಕಟ್ಟುವ ಚೀನಾ ಮಾಂಜಾ ದಾರ ಪಕ್ಷಿಗಳ ಪಾಲಿಗೆ ನೇಣು ಹಗ್ಗವಾಗಿ ಬದಲಾಗುತ್ತಿದೆ. ಗಾಳಿಪಟ ಮಾಂಜಾ ಸುತ್ತಿಕೊಂಡು ಮೃತಪಟ್ಟ ಒಂದು ಗಿಳಿರಾಮನ ಫೋಟೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಬಿದಿತಾ ಬಾಗ್ ಎಂಬ ವ್ಯಕ್ತಿ ಈ ಫೋಟೋವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾನೆ.
ಮಾಂಜಾ ದಾರಕ್ಕೆ ಸಿಕ್ಕಿ ಪ್ರಾಣ ಕಳೆದುಕೊಂಡ ಗಿಳಿರಾಮ ಎಷ್ಟೆಲ್ಲಾ ಒದ್ದಾಡಿರುತ್ತದೋ ಎಂದು ಪಕ್ಷಿ ಪ್ರಿಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು "ಫೋಟೋಗೆ ತಕ್ಕ ಕ್ಯಾಪ್ಷನ್ ಇಟ್ಟಿದ್ದೀರಾ ನಿಜವಾಗಿಯೂ ಗಿಳಿರಾಮ ಕಾಯ್‍ಪೋ ಚಿ" ಎಂದು ಕಾಮೆಂಟ್ ಹಾಕಿದ್ದಾರೆ. ರೋಬೋ ಸಿನಿಮಾದಲ್ಲಿನ ಪಕ್ಷಿರಾಜ ಬದುಕಿದ್ದರೆ ಮೊಬೈಲ್ ಫೋನ್‌ಗೆ ಬದಲಾಗಿ ಗಾಳಿಪಟಗಳನ್ನು ಸೆಳೆದುಕೊಳ್ಳುತ್ತಿದ್ದ ಎಂದು ಕಾಮೆಂಟ್ ಮಾಡಿದ್ದಾರೆ ಇನ್ನೂ ಕೆಲವರು.

’ಕಾಯ್‌ಪೋ ಚಿ’ ಎಂಬುದು ಗುಜರಾತಿ ಪದ. ಗಾಳಿಪಟ ಹಾರಾಡುವಾಗ ಈ ಪದವನ್ನು ಹೆಚ್ಚಾಗಿ ಬಳಸುತ್ತಾರೆ. ಬೇರೆಯವರ ಗಾಳಿಪಟವನ್ನು ಕಟ್ ಮಾಡಿದರೆ ಕಾಯ್‌ಪೋ ಚಿ ಎನ್ನುತ್ತಾರೆ. ನಿಷೇಧಿತ ಚೀನಾ ಮಾಂಜಾದಿಂದ ಪಕ್ಷಿಗಳಷ್ಟೇ ಅಲ್ಲದೆ ಮನುಷ್ಯರ ಪಾಲಿಗೂ ಇದು ಉರುಳಾಗುತ್ತಿದೆ. ಮಾಂಜಾದಿಂದ ಕತ್ತು ಹರಿದು ಎಂಟು ವರ್ಷದ ಬಾಲಕ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಮನುಷ್ಯರಿಗೂ ಸೇರಿದಂತೆ ಪ್ರಾಣಿ ಪಕ್ಷಿಗಳ ಪ್ರಾಣಕ್ಕೆ ಅಪಾಯವಿದೆ ಎಂಬ ಕಾರಣಕ್ಕೆ ಚೀನಾದಿಂದ ಬರುವ ಮಾಂಜಾ ಗಾಳಿಪಟ ದಾರದ ಮಾರಾಟಕ್ಕೆ 2017 ಜುಲೈನಲ್ಲಿ ದಿಲ್ಲಿಯ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಪೀಠ ನಿಷೇಧ ಹೇರಿದೆ. ಆದರೂ ಇದನ್ನು ಕದ್ದು ಮುಚ್ಚಿ ಮಾರಟ ಮಾಡಲಾಗುತ್ತಿದೆ. ಗಾಜಿನ ಪುಡಿಯನ್ನು ಬಳಸಿ ತಯಾರಿಸುವ ಈ ದಾರ ಕಟ್ ಆಗುವುದಿಲ್ಲ. ತುಂಬಾ ಬಲಿಷ್ಠವಾಗಿ ಇರುತ್ತದೆ. ಇದು ವೇಗವಾಗಿ ದ್ವಿಚಕ್ರ ವಾಹನಗಳಲ್ಲಿ ಹೋಗುವವರಿಗೂ ಒಮ್ಮೊಮ್ಮೆ ಕೊರಳಿಗೆ ಸುತ್ತಿಕೊಂಡು ಜೀವ ತೆಗೆದ ಅನೇಕ ನಿದರ್ಶನಗಳಿವೆ. ಆದರೂ ಈ ದಾರವನ್ನು ಕದ್ದು ಮುಚ್ಚಿ ಬಳಲಾಗುತ್ತಿದೆ, ಹಾಗೆಯೇ ತಯಾರಿಸಲಾಗುತ್ತಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ.

No comments