Header Ads

test

ಮಕ್ಕಳನ್ನು ಹುಟ್ಟಿಸಿ ಮಾರಿಕೊಳ್ಳುವ ಫ್ಯಾಕ್ಟರಿ ಕುರಿತಾದ ಬೆಚ್ಚಿಬೀಳುವಂತಹ ಸತ್ಯ ನಿಮಗೆ ಗೊತ್ತಾ...!

ನೈಜೀರಿಯಾದಲ್ಲಿ ಬೇಬಿ ಫಾರ್ಮಿಂಗ್ ಹೆಸರಿನಲ್ಲಿ 13-18 ವಯಸ್ಸಿನ ಹದಿಹರೆಯದ ಹೆಣ್ಣುಮಕ್ಕಳನ್ನು ನೂರಾರು ಸಂಖ್ಯೆಯಲ್ಲಿ ತೆಗೆದುಕೊಂಡು ಹೋಗುವುದು, ಅವರನ್ನು ರಹಸ್ಯವಾಗಿ ಅನೈತಿಕ ಮಾರ್ಗದಲ್ಲಿ ಗರ್ಭವತಿಯನ್ನಾಗಿ ಮಾಡುವುದು...ಅವರಿಗೆ ಹುಟ್ಟಿದ ಶಿಶುಗಳನ್ನು ಬೇಬಿ ಫಾರ್ಮಿಂಗ್ ಹೆಸರಿನಲ್ಲಿ ಬೆಳೆಸುತ್ತಾರೆ. ನೈಜೀರಿಯನ್ನರು ಬೇಬಿ ಫಾರ್ಮಿಂಗ್ ಎಂಬ ಹೆಸರಿಟ್ಟು ವ್ಯಾಪಾರ ನಡೆಸುತ್ತಿದ್ದು ಸಭ್ಯ ಸಮಾಜ ನಾಚುವಂತೆ ಮಾಡುತ್ತಿದ್ದಾರೆ. ಸಂತಾನವಿಲ್ಲದವರಿಗೆ ಸುಮಾರು 5 ಲಕ್ಷ ರೂಪಾಯಿಗಳಿಗೆ ಮಾರುತ್ತಾರೆ. ಈ ವ್ಯಾಪಾರವು ಕೋಳಿ ಫಾರಂ ಅನ್ನು ನೆನಪಿಸುತ್ತದೆ. ಕೋಳಿಗಳನ್ನು ಬೆಳೆಸಿ ಮಾರಿಕೊಳ್ಳುವ ರೀತಿಯಲ್ಲಿ ಹುಡುಗಿಯರನ್ನು ಟ್ರಾಪ್ ಮಾಡಿ ತರುತ್ತಾರೆ.


ಈ ವ್ಯಾಪಾರದಲ್ಲಿ ಹೆಚ್ಚಾಗಿ ಅನಾಥ ಶರಣಾಲಯದಲ್ಲಿರುವ ಹೆಣ್ಣುಮಕ್ಕಳನ್ನು ಬಳಸಿಕೊಳ್ಳುತ್ತಾರೆ. ಇಂತಹ ಕೆಲಸಕ್ಕೆ ಆ ಮಕ್ಕಳು ಒಪ್ಪಿಕೊಂಡಲ್ಲಿ ಅವರಿಗೆ ಸ್ವಲ್ಪ ಹಣವನ್ನು ನೀಡುತ್ತಾರಂತೆ. ಇದರಲ್ಲಿ ಮೈನರ್ ಬಾಲೆಯರೇ ಹೆಚ್ಚಾಗಿದ್ದಾರೆ. ನೈಜೀರಿಯಾದಲ್ಲಿ ಅಬಾರ್ಷನ್ ಮಾಡಿಸಿಕೊಳ್ಳುವುದು ಕಾನೂನಿಗೆ ವಿರುದ್ಧವಾದದ್ದು. ಆದ್ದರಿಂದಲೇ ಇದನ್ನೇ ಅವಕಾಶವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಬೇಬಿ ಫಾರ್ಮಿಂಗ್ ನಡೆಸುವವರ ಜೀವನವು ಒಂದು ಗುಂಡಿಗೆ ಎರಡು ಹಕ್ಕಿಗಳು ಬೀಳುವಂತೆ ಆಗುತ್ತಿದ್ದರೆ, ಹೆಣ್ಣುಮಕ್ಕಳು ಮಾತ್ರ ನರಕವನ್ನು ಅನುಭವಿಸುತ್ತಿದ್ದಾರೆ.

ಆ ದೇಶದಲ್ಲಿ ಸಂತಾನವಿಲ್ಲದ ದಂಪತಿಗಳು ಇಲ್ಲಿನ ಮಕ್ಕಳನ್ನು ಕೊಳ್ಳಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಈಗಷ್ಟೇ ಭಾರತದಲ್ಲಿ ಬಾಡಿಗೆ ಗರ್ಭದ ಹೆಸರಿನಲ್ಲಿ ಇಂತಹ ದುಷ್ಟ ವ್ಯಾಪಾರವು ಕಾಲಿಡುತ್ತಿದೆ. ಅಲ್ಲಿನ ಸರ್ಕಾರವು ಐಕ್ಯ ರಾಜ್ಯ ಸಮಿತಿಯು ಒಗ್ಗೂಡಿ ಸಹ ಮಾನವನಿಗೆ ತೊಂದರೆ ಕೊಡುತ್ತಿರವ ಇಂತಹ ವ್ಯಾಪಾರವನ್ನು ಅಂತ್ಯಗೊಳಿಸಬೇಕೆಂದು ಅಂತರ್ಜಾತೀಯ ಮಾನವ ಹಕ್ಕುಗಳ ಸಂಘಗಳು ಒತ್ತಾಯಿಸುತ್ತಿವೆ.

No comments