Header Ads

test

ಕ್ಯಾಲೆಂಡರ್ ಹೇಗೆ ಹುಟ್ಟಿತು, ಅದನ್ನು ಹೇಗೆ ತಯಾರಿಸುತ್ತಾರೆ ಎಂದು ಗೊತ್ತಾ..?

ಹಳೆ ವರ್ಷಕ್ಕೆ ಗುಡ್ ಬೈ ಹೇಳುತ್ತಾ.. ಹೊಸ ವರ್ಷಕ್ಕೆ ಸ್ವಾಗತ ಕೋರುವವರಲ್ಲಿ ಮೊದಲ ಸ್ಥಾನದಲ್ಲಿ ಕ್ಯಾಲೆಂಡರ್ ಇರುತ್ತದೆ. ಆ ಕ್ಯಾಲೆಂಡರ್ ಯಾವಾಗ ಪ್ರಾರಂಭವಾಯಿತು? ದೇಶದಾದ್ಯಂತ ಬಳಸುತ್ತಿರುವ ಕ್ಯಾಲೆಂಡ ಹೆಸರೇನು? ಅಂತಹ ಕೆಲವು ಕುತೂಹಲಕರ ವಿಷಯಗಳ ಬಗ್ಗೆ... ಲ್ಯಾಟಿನ್‌ನಲ್ಲಿ "ಕ್ಯಾಲೆಂಡೇರಿಯಮ್" ಅಂದರೆ ಅಕೌಂಟ್ ಬುಕ್ ಎಂದು ಅರ್ಥ.

ಅದೇ ರೀತಿ "ಕ್ಯಾಲೆಂಡಾ" ಎಂದರೆ ವರ್ಷದಲ್ಲಿ ಬರುವ ಮೊದಲ ದಿನ ಎಂದರ್ಥ. ಫ್ರೆಂಚ್ ಭಾಷೆಯಲ್ಲಿ "ಕ್ಯಾಲೆಂಡಿಯರ್" ಎಂದರೆ ರಿಜಿಸ್ಟರ್ ಎಂದರ್ಥ. ಲ್ಯಾಟಿನ್ ಪದಕ್ಕೆ ಹತ್ತಿರ ಇರುವ ಅರ್ಥದಿಂದ ಕ್ಯಾಲೆಂಡರ್ ಎಂಬ ಹೆಸರು ಇಟ್ಟರು. ಈಗ ಜಗತ್ತಿನಾದ್ಯಂತ ಬಳಸುತ್ತಿರುವ ಕ್ಯಾಲೆಂಡರ್ ಗ್ರೆಗೋರಿಯನ್ ಕ್ಯಾಲೆಂಡರ್. ರೋಮ್‌ನ ಮೊಟ್ಟಮೊದಲ ರಾಜ ವರ್ಷಕ್ಕೆ 300 ದಿನಗಳನ್ನು ಮಾತ್ರ ಪರಿಗಣಿಸಿ ಹತ್ತು ತಿಂಗಳು ಇರುವ ಕ್ಯಾಲೆಂಡರನ್ನು ತಯಾರಿಸಿದ. ಇದರಿಂದ ಬೆಳೆ ಬೆಳೆಯಲು, ಹಬ್ಬಗಳನ್ನು ಮಾಡಿಕೊಳ್ಳಲು ತುಂಬಾ ತೊಂದರೆಯಾಗುತ್ತಿತ್ತು.



ಬಳಿಕ ನುಮಾ ಪೊಂಪಿಲುಯಸ್ ಎಂಬ ರಾಜ 365 ದಿನಗಳನ್ನು ಪರಿಗಣಿಸಿ ಜನವರಿ, ಫೆಬ್ರವರಿಯನ್ನು ಈ ಕ್ಯಾಲೆಂಡರ್‌ನಲ್ಲಿ ಸೇರಿಸಿದ. ಜಗತ್ತಿನಾದ್ಯಂತ ಸೂರ್ಯಮಾನ ಆಧಾರ ಮಾಡಿಕೊಂಡು 40ಕ್ಕೂ ಹೆಚ್ಚು ಕ್ಯಾಲೆಂಡರ್‌ಗಳಿವೆ. ಅದರಲ್ಲಿ ಈಜಿಪ್ಟ್, ಮೆಸಪಟೋಮಿಯಾ, ಇಥಿಯೋಪಿಯನ್, ಹೀಬ್ರೂ, ಚೈನೀಸ್, ರೋಮನ್, ಜೂಲಿಯನ್, ಮಾಯನ್, ಗ್ರೆಗೋರಿಯನ್ ಬಳಕೆಯಲ್ಲಿರುವಂತಹವು. ಅನೇಕ ಮುಖ್ಯವಾದ ದಿನಗಳುಳ್ಳ ಕ್ಯಾಲೆಂಡರ್‌ನಲ್ಲಿ 365 ದಿನಗಳಲ್ಲಿ "ಕ್ಯಾಲೆಂಡರ್ ಡೇ" ಎಂಬುದು ಇಲ್ಲದಿರುವುದು ವಿಪರ್ಯಾಸ.

ಕ್ಯಾಲೆಂಡರನ್ನು ಕನ್ನಡದಲ್ಲಿ ಪಂಚಾಂಗ ಎಂದು ಕರೆಯಬಹುದು. ಜಗತ್ತಿನಲ್ಲಿ ಅತಿ ಹೆಚ್ಚು ಉಪಯೋಗಿಸುವ ಕ್ಯಾಲೆಂಡರ್‌ಗಳಲ್ಲಿ ಗ್ರೆಗೋರಿಯನ್ ಮೊದಲ ಸ್ಥಾನದಲ್ಲಿದೆ. ಗ್ರೆಗೋರಿಯನ್ ಕ್ಯಾಲೆಂಡರ್‌ಗೂ ಮುನ್ನ ಜೂಲಿಯನ್ ಕ್ಯಾಲೆಂಡರ್ ಬಳಸುತ್ತಿದ್ದರು.

ಜೂಲಿಯನ್ ಕ್ಯಾಲೆಂಡರ್ನಲ್ಲಿ ವರ್ಷ ತುಂಬಾ ಉದ್ದವಾಗಿತ್ತು. ಇದು ಪ್ರತಿ ವರ್ಷ 365 ದಿನಗಳ 6 ಗಂಟೆಗಳ ಉದ್ದ ಇತ್ತು. ಆದರೆ ಲೆಕ್ಕಾಚಾರಗಳು ಒಂದು ವರ್ಷದ ನಿಜವಾದ ಸರಾಸರಿ ಉದ್ದ ಸ್ವಲ್ಪ ಕಡಿಮೆ (365 ದಿನಗಳ, 5 ಗಂಟೆ 49 ನಿಮಿಷ) ಎಂದು ತೋರಿಸಿದರು.

ಹಿಂದೂಗಳ ಸೌರಮಾನ,ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ. ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ , ವಾರ , ನಕ್ಷತ್ರ , ಯೋಗ ,ಮತ್ತು ಕರಣಗಳು - ಇವೇ ಆ ಐದು ಅಂಗಗಳು.ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ.

No comments