Header Ads

test

ರಿಕ್ಷಾ ಕಾರ್ಮಿಕನ ಮಗ ಆತ.ಈಗ ಹಿರಿಯ ಐಎಎಸ್ ಅಧಿಕಾರಿ ಆಗಿದ್ದಾನೆ.!

ಬಡವರು ಎಂದರೆ ಹಣವಂತರಿಗೆ ಯಾವಾಗಲೂ ಒಂಥರಾ ಕೀಳು ನೋಟ. ಅವರನ್ನು ಮುಟ್ಟುವುದಿರಲಿ, ಅವರ ಕಡೆ ನೋಡಲೂ ಧನಿಕರು ಇಷ್ಟಪಡಲ್ಲ. ಅಷ್ಟು ಅಸಹ್ಯಪಡುತ್ತಾರೆ. ಬಾಲಕನೊಬ್ಬನ್ನು ಕಂಡು ಇದೇ ರೀತಿ ಧನಿಕ ಕುಟುಂಬವೊಂದು ಅಸಹ್ಯಪಡ್ತು. ನಮ್ಮ ಮನೆಯಿಂದ ಹೋಗು ಎಂದು ಹೊರಹಾಕಿತು. ಇದರಿಂದ ಛಲ ತೊಟ್ಟ ಆ ಬಡ ಬಾಲಕ ಕಷ್ಟಪಟ್ಟು ಓದಿ ಅವರಿಗೆ ಬುದ್ಧಿ ಹೇಳುವಂತೆ ಈಗ ದೊಡ್ಡ ಐಎಎಸ್ ಅಧಿಕಾರಿಯಾಗಿದ್ದಾರೆ. ಹೌದು, ನೀವು ಕೇಳಿದ್ದು ನಿಜ. ಇದು ನಡೆದದ್ದು ವಾರಣಾಸಿಯಲ್ಲಿ.!


ವಾರಣಾಸಿಯಲ್ಲಿನ ಉಸ್ಮಾರಾಪುರ್ ಎಂಬ ಪ್ರದೇಶದಲ್ಲಿ ವಾಸವಾಗಿರುವ ನಾರಾಯಣ ಎಂಬ ವ್ಯಕ್ತಿ ರಿಕ್ಷಾ ತುಳಿಯುತ್ತಾ ಕುಟುಂಬವನ್ನು ಪೋಷಿಸುತ್ತಿದ್ದ ಆತನಿಗೆ ನಾಲ್ಕು ಮಂದಿ ಹೆಣ್ಣು ಮಕ್ಕಳು, ಒಂದು ಗಂಡು. ಮಗ ಎಲ್ಲರಿಗಿಂತ ಕಿರಿಯ. ಆತನ ಹೆಸರು ಗೋವಿಂದ್. ಇವನಿಗೆ ಚಿಕ್ಕಂದಿನಿಂದ ಓದು ಎಂದರೆ ತುಂಬಾ ಆಸಕ್ತಿ ಇತ್ತು. ಉನ್ನತ ಶಿಕ್ಷಣ ಪಡೆಯಬೇಕೆಂದು, ಉನ್ನತ ಸ್ಥಾನಕ್ಕೇರಬೇಕೆಂಬ ಆಸಕ್ತಿ ಇತ್ತು. ಇದರಿಂದ ತಂದೆ ಕಷ್ಟಪಟ್ಟು ಸಂಪಾದಿಸುತ್ತಿದ್ದರೆ ಗೋವಿಂದ್ ಶ್ರದ್ಧೆಯಿಂದ ಓದಿಕೊಳ್ಳುತ್ತಿದ್ದ. ಸ್ಥಳೀಯ ಸರಕಾರಿ ಪಾಠಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ. ಒಂದು ದಿನ ಅಚಾನಕ್ ಆಗಿ ತನ್ನ ಪ್ರದೇಶದಲ್ಲಿರುವ ಶ್ರೀಮಂತ ಕುಟುಂಬವೊಂದರ ಮನೆಗೆ ಹೋಗುವ ಸಂದರ್ಭ ಬಂತು. ಆ ಮನೆಗೆ ಹೋದಾಗ ಆ ಕುಟುಂಬದವರು ಗೋವಿಂದ್‌ನನ್ನು ಹೊರ ತಳ್ಳಿದರು. ಮನೆಯಿಂದ ಹೊರಗೆ ಹೋಗು ಎಂದು ಅಸಹ್ಯಪಟ್ಟರು. ಇದರಿಂದ ಅವಮಾನಿತನಾದ ಗೋವಿಂದ್‌ನಲ್ಲಿ ಚೆನ್ನಾಗಿ ಓದಬೇಕು ಎಂಬ ಛಲ ಇನ್ನಷ್ಟು ಬಲವಾಯಿತು. ಹೇಗಾದರೂ ಚೆನ್ನಾಗಿ ಓದಿ ಎಲ್ಲರ ಕೈಲಿ ಬುದ್ಧಿವಂತ ಎನ್ನಿಸಿಕೊಳ್ಳಬೇಕು ಎಂದು, ತನ್ನನ್ನು ಕಂಡು ಅಸಹ್ಯಪಟ್ಟವರ ಕೈಯಲ್ಲೇ ಬೆನ್ನು ತಟ್ಟಿಸಿಕೊಳ್ಳಬೇಕೆಂದುಕೊಂಡ. ಇದರಿಂದ ಇನ್ನಷ್ಟು ಚೆನ್ನಾಗಿ ಓದಲು ಆರಂಭಿಸಿದ.

ಹಾಗೆ ಓದುತ್ತಾ ಪಾಠಶಾಲೆ ಜತೆಗೆ ಪಿಯುಸಿ, ಡಿಗ್ರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ. ಬಳಿಕ ಸಿವಿಲ್ಸ್ ಬರೆದು ಐಎಎಸ್ ಆಗಲು ಬಯಸಿದ. ಮೊದಲ ಪ್ರಯತ್ನದಲ್ಲೇ ನಾಗರೀಕ ಸೇವಾ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆಯಬೇಕು ಎಂದುಕೊಂಡ. ಇದಕ್ಕಾಗಿ ದಿಲ್ಲಿಗೆ ಸ್ಥಳಾಂತರವಾದ. ಅಲ್ಲೇ ಒಂದು ಕಡೆ ಮ್ಯಾಥ್ಸ್ ಲೆಕ್ಚರರ್ ಆಗಿ ಟ್ಯೂಷನ್ ಹೇಳಿಕೊಡುತ್ತಾ ಇನ್ನೊಂದು ಕಡೆ ತಂದೆ ಸಂಪಾದನೆ, ತನ್ನ ಸಂಪಾದನೆಯಿಂದ ಬರುವ ಹಣವನ್ನು ಉಳಿಸುತ್ತಾ ಅದರಲ್ಲೇ ಸಿವಿಲ್ಸ್ ಕೋಚಿಂಗ್ ತೆಗೆದುಕೊಳ್ಳುತ್ತಿದ್ದ. ಇನ್ನೊಂದು ಕಡೆ ನಿತ್ಯ 18ರಿಂದ 20 ಗಂಟೆಗಳ ಓದುತ್ತಿದ್ದ.

ಒಮ್ಮೊಮ್ಮೆ ತಿಂಡಿಯೂ ಇಲ್ಲದಂತೆ ಹಣ ಉಳಿಸಿಕೊಂಡು ಅವುಗಳಿಂದ ಪುಸ್ತಕಗಳನ್ನು ಕೊಳ್ಳುತ್ತಿದ್ದ. ಅವುಗಳಲ್ಲಿ ಇರುವ ಸಾರಾಂಶವನ್ನು ಚೆನ್ನಾಗಿ ಪುನರ್ ಮನನ ಮಾಡಿಕೊಳ್ಳುತ್ತಿದ್ದ. ಕೊನೆಗೆ 2006ರಲ್ಲಿ ನಡೆದ ಸಿವಿಲ್ಸ್ ಪರೀಕ್ಷೆಯಲ್ಲಿ ದೇಶದಲ್ಲೇ ಅತ್ಯುತ್ತಮ ರ‍್ಯಾಂಕ್ ಪಡೆದು ಐಎಎಸ್‍ಗೆ ಸೆಲೆಕ್ಟ್ ಆದ. ಆ ರೀತಿ ಗೋವಿಂದ್ ಒಂದು ಕಾಲದಲ್ಲಿ ತನ್ನನ್ನು ಅಸಹ್ಯಪಟ್ಟವರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ...!

No comments