Header Ads

test

ಬೊಕ್ಕತಲೆ ಸಮಸ್ಯೆಯಿಂದ ಬೇಸತ್ತಿದ್ದೀರಾ!? ಹಾಗಿದ್ದರೆ ಈ ಸಲಹೆಗಳು ನಿಮಗಾಗಿ.. ಬೊಕ್ಕತಲೆ ಮೇಲೆ ಕೂದಲುಬೆಳೆಯುವಂತೆ ಮಾಡುತ್ತವೆ.

ಪ್ರಸಕ್ತ ಸನ್ನಿವೇಶದಲ್ಲಿ ಅಂದವಾಗಿ ಕಾಣಬೇಕೆಂದು ಪ್ರತಿಯೊಬ್ಬರು ಬಯಸುತ್ತಾರೆ. ಹೆಣ್ಣು, ಗಂಡು ಎಂಬ ತಾರತಮ್ಯ ಇಲ್ಲದಂತೆ ಪ್ರತಿಯೊಬ್ಬರು ಸೌಂದರ್ಯದ ಕಡೆಗೆ ದೃಷ್ಟಿ ಹರಿಸುತ್ತಿದ್ದಾರೆ. ಆದರೆ ಸೌಂದರ್ಯದ ವಿಚಾರಕ್ಕೆ ಬಂದರೆ ಪ್ರಮುಖ ಪಾತ್ರ ವಹಿಸುವುದು ಕೇಶರಾಶಿ. ಹೆಣ್ಣುಮಕ್ಕಳಿಗಾದರೆ ಕೂದಲು ಉದುರುವುದು, ಮತ್ತೆ ಬೆಳೆಯುವುದು ಮಾಮೂಲಿ. ಆದರೆ ಗಂಡು ಮಕ್ಕಳಿಗೆ ಕೂದಲು ಉದುರಲು ಶುರುವಾದರೆ ಕಡೆಗೆ ಬೊಕ್ಕತಲೆಗೆ ದಾರಿಯಾಗುತ್ತದೆ. ಕೆಲಸದ ಒತ್ತಡ, ಕಲುಷಿತ, ಕೆಮಿಕಲ್ಸ್ ಉಪಯೋಗಿಸಿ ತಯಾರಿಸಿರುವ ಶಾಂಪುಗಳು, ದೀರ್ಘಕಾಲದ ಕಾಯಿಲೆಗಳು... ಹೀಗೆ ಕಾರಣಗಳು ಏನಿದ್ದರೂ ಗಂಡಸರಲ್ಲಿ ಈಗ ಬೊಕ್ಕತಲೆ ತುಂಬಾ ಕಡಿಮೆ ವಯಸ್ಸಿಗೆ ಬರುತ್ತಿದೆ. ಈ ಕೆಳಗೆ ಕೊಟ್ಟಿರುವ ಸಲಹೆಗಳನ್ನು ಪಾಲಿಸಿದರೆ ಬೊಕ್ಕತಲೆ ಬರದಂತೆ ಕ್ರಮ ಕೈಗೊಳ್ಳಬಹುದು. ಅಷ್ಟೇ ಅಲ್ಲ, ಈಗಾಗಲೆ ಉದುರಿರುವ ಕೂದಲನ್ನು ಮತ್ತೆ ಬೆಳೆಸುವ ಸಾಧ್ಯತೆಗಳಿವೆ. ಆ ಟಿಪ್ಸ್ ಏನು ಎಂದು ಈಗ ತಿಳಿದುಕೊಳ್ಳೋಣ.




1. ಸ್ವಲ್ಪ ಕೇಸರಿ ಹೂವನ್ನು ತೆಗೆದುಕೊಂಡು ಅದನ್ನು ಹಾಲಿನಲ್ಲಿ ಚೆನ್ನಾಗಿ ಬೆರೆಸಬೇಕು. ಆ ಬಳಿಕ ಆ ಮಿಶ್ರಣವನ್ನು ತಲೆಗೆ ಹಚ್ಚಿಕೊಳ್ಳಬೇಕು. ನಿಯಮಿತವಾಗಿ ಹೀಗೆ ಮಾಡಿದರೆ ಕೂದಲು ಮತ್ತೆ ಬೆಳೆಯುತ್ತದೆ.

2. ಕಪ್ಪುಮೆಣಸಿನ ಪುಡಿಯಲ್ಲಿ ಸ್ವಲ್ಪ ನಿಂಬೆರಸ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನು ತಲೆಗೆ ಹಚ್ಚಿಕೊಳ್ಳಬೇಕು. ಇದು ಬೊಕ್ಕತಲೆ ಬರದಂತೆ ತಡೆಯುತ್ತದೆ. ಕೂದಲ ಬೆಳವಣಿಗೆಗೂ ಉಪಯೋಗಕ್ಕೆ ಬರುತ್ತದೆ.

3. ಕೊಬ್ಬರಿ ಹಾಲನ್ನು ತೆಗೆದುಕೊಂಡು ನೇರವಾಗಿ ಕೂದಲಿಗೆ ಹಚ್ಚಿಕೊಳ್ಳಬೇಕು. ಇದು ಕೂದಲ ಬೆಳವಣಿಗೆಗೆ ಸಹಕಾರಿ.

4. ಸ್ವಲ್ಪ ಕೊತ್ತಂಬರಿ ತೆಗೆದುಕೊಂಡು ಅದನ್ನು ಚೆನ್ನಾಗಿ ಅರೆದು ಪೇಸ್ಟ್ ತರಹ ಮಾಡಿಕೊಳ್ಳಬೇಕು. ಅದರಿಂದ ರಸ ತೆಗೆಯಬೇಕು. ಆ ರಸವನ್ನು ನಿತ್ಯ ತಲೆಗೆ ಹಚ್ಚಿಕೊಳ್ಳುವುದರಿಂದ ಸ್ವಲ್ಪ ದಿನಕ್ಕೆಲ್ಲ ಕೂದಲು ಬೆಳೆಯಲು ಶುರುವಾಗುತ್ತದೆ.

5. ಕಾಫಿ ಬೀಜಗಳನ್ನು ತಂದು ಅದನ್ನು ಪುಡಿ ಮಾಡಿಕೊಳ್ಳಬೇಕು. ಆ ಪುಡಿಯಲ್ಲಿ ಸ್ವಲ್ಪ ನೀರು ಬೆರೆಸಿ ಪೇಸ್ಟ್ ತರಹ ಮಾಡಿಕೊಂಡು ತಲೆಗೆ ಹಚ್ಚಿಕೊಳ್ಳಬೇಕು. ಆ ಬಳಿಕ ಸ್ವಲ್ಪ ಹೊತ್ತು ಬಿಟ್ಟು ತಲೆಸ್ನಾನ ಮಾಡಬೇಕು. ಇದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ. ಇದು ಬೊಕ್ಕತಲೆಗೆ ಒಳ್ಳೆಯ ಪರಿಹಾರ.

6. ಮೆಂತ್ಯೆಯನ್ನು ನೀರಿನಲ್ಲಿ ನೆನೆಹಾಕಿ ಮೃದುವಾದ ಪೇಸ್ಟ್ ತರಹ ಮಾಡಿಕೊಳ್ಳಬೇಕು. ಇದನ್ನು ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯದ ಬಳಿಕ ತಲೆಸ್ನಾನ ಮಾಡಬೇಕು. ಉದುರಿದ ಕೂದಲನ್ನು ಮತ್ತೆ ಚಿಗುರುವಂತೆ ಮಾಡಲು ಇದು ಉಪಯುಕ್ತ.

7. ಒಣಗಿಸಿದ ನೆಲ್ಲಿಕಾಯಿ ಹೋಳು, ಅಳಲೆಕಾಯಿ, ಶಾಂತಿಕಾಯಿ (ತರೆಕಾಯಿ) ಹೋಳುಗಳನ್ನು ತಲಾ 10 ತೆಗೆದುಕೊಂಡು ಅವನ್ನು ರಾತ್ರಿ ನೀರಿನಲ್ಲಿ ನೆನೆಸಬೇಕು. ಬೆಳಗ್ಗೆ ಆ ನೀರನ್ನು ತಲೆಗೆ ಹಚ್ಚಿಕೊಳ್ಳಬೇಕು. ಹೀಗೆ ಕೆಲವು ದಿನ ಮಾಡಿದರೆ ಉದುರಿದ ಕೂದಲು ಮತ್ತೆ ಬೆಳೆಯುತ್ತದೆ.

8. ಮಂದಾರ ಪುಷ್ಪ, ಗೋರಂಟಿ, ಅಲೋವೆರಾ ಜೂಸನ್ನು ತೆಗೆದುಕೊಂಡು ಮಿಶ್ರಣ ಮಾಡಿಕೊಳ್ಳಬೇಕು. ಇದನ್ನು ಕರಿ ಎಳ್ಳೆಣ್ಣೆಯಲ್ಲಿ ಹಾಕಿ ಚೆನ್ನಾಗಿ ಕಷಾಯದ ತರಹ ಮಾಡಿಕೊಳ್ಳಬೇಕು. ಶೋಧಿಸಿ ತಲೆಗೆ ಹಚ್ಚಿಕೊಳ್ಳಬೇಕು. ಹೀಗೆ ಮಾಡುತ್ತಿದ್ದರೆ ಚೆನ್ನಾಗಿ ಬೆಳೆಯುವುದಷ್ಟೇ ಅಲ್ಲ, ಕಪ್ಪಾಗಿಯೂ ಇರುತ್ತವೆ.

9. ಕರಿಬೇವು ರಸ, ಬೆಳ್ಳುಳ್ಳಿ ಹೊಟ್ಟನ್ನು ಮೇಲೆ ತಿಳಿಸಿದ ವಿಧಾನದಲ್ಲಿ ಎಳ್ಳೆಣ್ಣೆಯಲ್ಲಿ ಹಾಕಿ ಚೆನ್ನಾಗಿ ಕಾಸಿ ತಲೆಗೆ ಹಚ್ಚಿಕೊಳ್ಳುತ್ತಿದ್ದರೂ ಕೂದಲು ದಟ್ಟವಾಗಿ ಬೆಳೆಯುತ್ತವೆ.

No comments