Header Ads

test

ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಪಿಸಿ ಸ್ಕ್ರೀನ್‌ಗಳ ಮೇಲಿನ ಗೆರೆಗಳು, ಸ್ಕ್ರಾಚ್‌ಗಳನ್ನು ಸರಳವಾಗಿ ಹೇಗೆತೊಲಗಿಸಬಹುದು ಎಂಬುದನ್ನು ತಿಳಿದುಕೊಳ್ಳಿ..!

ತುಂಬಾ ಇಷ್ಟಪಟ್ಟುಕೊಂಡುಕೊಂಡ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಸ್ಕ್ರೀನ್‌ ಮೇಲೆ ಗೆರೆಗಳು ಬಿದ್ದರೆ ಯಾರಿಗೆ ತಾನೆ ನೋವಾಗದೆ ಇರುತ್ತದೆ ಹೇಳಿ. ಡಿವೈಸ್ ತೆರೆ ಮೇಲೆ ಸಣ್ಣ ಗೀಚು ಬಿದ್ದರೂ ಸಾಕು ಮನಸ್ಸು ಚುಚ್ಚಿದಂತಾಗುತ್ತದೆ. ಈ ಬಗ್ಗೆ ಸ್ವಲ್ಪ ಚಿಂತೆಯೂ ಆಗುತ್ತದೆ. ಆದರೆ ಈಗ ಆ ರೀತಿ ಚಿಂತಿತರಾಗಬೇಕಾಗಿಲ್ಲ. ಯಾಕೆಂದರೆ ನಮ್ಮ ಮನೆಯಲ್ಲೇ ಇರುವ ಕೆಲವು ರೀತಿಯ ಪದಾರ್ಥಾಗಳಿಂದ ಮೊಬೈಲ್ ಸ್ಕ್ರೀನ್ ಮೇಲೆ ಬಿದ್ದ ಗೆರೆಗಳನ್ನು ನಿವಾರಿಸಬಹುದು. ಅದು ಹೇಗೆ ಎಂಬುದನ್ನು ಈಗ ನೋಡೋಣ. ಮನೆಯಲ್ಲಿ ಇರುವ ಟೂತ್ ಪೇಸ್ಟ್ ಸಹಾಯದಿಂದ ಮೊಬೈಲ್ ಸ್ಕ್ರೀನ್ ಮೇಲೆ ಆದ ಗೆರೆಗಳನ್ನು ಸುಲಭವಾಗಿ ನಿವಾರಿಸಬಹುದು. ಒಂದು ಮೆತ್ತಗಿನ ಹತ್ತಿ ಬಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಟೂತ್ ಪೇಸ್ಟ್ ಹಚ್ಚಬೇಕು.



ಆ ಪೇಸ್ಟನ್ನು ಡಿವೈಸ್ ಪರದೆ ಮೇಲೆಲ್ಲಾ ಅಪ್ಲೈ ಮಾಡಬೇಕು. ಬಳಿಕ ಇನ್ನೊಂದು ಒಣ ಕಾಟನ್ ಕ್ಲಾತ್ ತೆಗೆದುಕೊಂಡು ಸ್ಕ್ರೀನನ್ನು ಸ್ವಚ್ಛಗೊಳಿಸಬೇಕು. ಇದರಿಂದ ಸ್ಕ್ರೀನ್ ಮೇಲಿನ ಸ್ಕ್ರಾಚ್‌ಗಳು, ಗೆರೆಗಳು ನಿವಾರಣೆಯಾಗುತ್ತವೆ. ಬೇಕಿಂಗ್ ಸೋಡಾ ಸಹ ಸ್ಕ್ರಾಚ್‌ಗಳನ್ನು ನಿವಾರಿಸಲು ಚೆನ್ನಾಗಿ ಉಪಯೋಗಕ್ಕೆ ಬರುತ್ತದೆ. ಸ್ವಲ್ಪ ಬೇಕಿಂಗ್ ಸೋಡಾ ತೆಗೆದುಕೊಂಡು ಅದರಲ್ಲಿ ಸ್ವಲ್ಪ ನೀರನ್ನು ಬೆರೆಸಿ ನುಣ್ಣಗಿನ, ಗಟ್ಟಿಯಾಗಿ ಪೇಸ್ಟ್ ತರಹ ತಯಾರಿಸಿಕೊಳ್ಳಬೇಕು. ಬಳಿಕ ಮೇಲೆ ತಿಳಿಸಿದ ರೀತಿಯಲ್ಲಿ ಡಿವೈಸನ್ನು ಸ್ಕ್ರೀನ್ ಮೇಲೆ ಸ್ವಚ್ಛಗೊಳಿಸಿದರೆ ಸಾಕು. ಕೆಲವು ಹನಿ ವೆಜಿಟಬಲ್ ಆಯಿಲನ್ನು ತೆಗೆದುಕೊಂಡು ಆ ಡ್ರಾಪ್ಸನ್ನು ಒಂದು ಕಾಟನ್ ಕ್ಲಾತ್ ಸಹಾಯದಿಂದ ಡಿವೈಸ್ ಸ್ಕ್ರೀನ್ ಮೇಲೆ ಹಚ್ಚಬೇಕು. ಮತ್ತೆ ಒಣ ಬಟ್ಟೆಯಲ್ಲಿ ಸ್ಕ್ರೀನನ್ನು ಸ್ವಚ್ಛಗೊಳಿಸಬೇಕು. ಇದರಿಂದ ಸ್ಕ್ರ್ಯಾಚ್‌ಗಳು ನಿವಾರಣೆಯಾಗುತ್ತವೆ. ಆದರೆ ಈ ಆಯಿಲನ್ನು ಹೆಚ್ಚಾಗಿ ಬಳಸಬಾರದು. ಯಾಕೆಂದರೆ ಸ್ಕ್ರೀನ್ ಜಿಡ್ಡು ಜಿಡ್ಡಾಗುತ್ತದೆ.

ದೇಹಕ್ಕೆ ಹಚ್ಚಿಕೊಳ್ಳುವ ವ್ಯಾಸಲೀನ್ ಸಹ ಮೇಲೆ ತಿಳಿಸಿದ ವೆಜಿಟಬಲ್ ಆಯಿಲ್ ರೀತಿ ಕೆಲಸ ಮಾಡುತ್ತದೆ. ವಿಧಾನ ಸಹ ಮೇಲೆ ತಿಳಿಸಿದಂತೆ. ಇದು ಸಹ ಡಿವೈಸ್ ಸ್ಕ್ರೀನ್ ಮೇಲಿನ ಗೆರೆಗಳನ್ನು ನಿವಾರಿಸುತ್ತದೆ. ಮಕ್ಕಳು ಬಳಸುವ ಎರೇಸರ್‌ನಿಂದಲೂ ಸಹ ಮೊಬೈಲ್ ಸ್ಕ್ರೀನ್ ಗೆರೆಗಳನ್ನು, ಸ್ಕ್ರ್ಯಾಚ್‌‍ಗಳನ್ನು ನಿವಾರಿಸಬಹುದು. ಸ್ವಲ್ಪ ತೇವ ಇರುವ ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಡಿವೈಸ್ ಸ್ಕ್ರೀನ್ ಮೇಲೆ ಹಚ್ಚಬೇಕು. ಅದು ಒಣಗಿದ ಕೂಡಲೆ ಎರೇಸರ್ ಸಹಾಯದಿಂದ ನಯವಾಗಿ ಗೆರೆಗಳನ್ನು ಅಳಿಸುವಂತೆ ಹಚ್ಚಬೇಕು. ಇದರಿಂದ ಗೆರೆಗಳು ನಿವಾರಣೆಯಾಗುತ್ತವೆ.

No comments