Header Ads

test

ನಿಮ್ಮ ಮಕ್ಕಳು ಸ್ನಾಕ್ಸ್ ಎಂದು ಪದೇಪದೇ ಗಲಾಟೆ ಮಾಡುತ್ತಿದ್ದಾರಾ? ಆದರೆ ಇವು ಕೊಟ್ಟು ನೋಡಿ. ಅವುಗಳತಂಟೆಗೆ ಹೋಗಲ್ಲ..!

ಸಾಮಾನ್ಯವಾಗಿ ಚಿಕ್ಕ ಮಕ್ಕಳು ಸ್ನಾಕ್ಸ್ ಎಂದರೆ ತುಂಬಾ ಇಷ್ಟಪಡುತ್ತಾರೆ. ಬೀದಿಯಲ್ಲಿ ಸಿಗುವ ಕುರುಕಲು ತಿಂಡಿಯಿಂದ ಅನೇಕ ರೀತಿಯ ಅನಾರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ. ಆದಕಾರಣ ನಾವು ಮನೆಯಲ್ಲೇ ನಾನಾ ರೀತಿಯ ಅಡುಗೆಗಳನ್ನು ತಯಾರಿಸಿಕೊಂಡರೆ ಮಕ್ಕಳು ಅದೆಷ್ಟೋ ಇಷ್ಟದಿಂದ ತಿನ್ನುತ್ತಾರೆ.

ಸುಲಭವಾಗಿ ಮನೆಯಲ್ಲೇ ತಯಾರಿ ಮಾಡಿಕೊಳ್ಳಬಹುದಾದ ಅಡುಗೆಗಳಲ್ಲಿ ಬಾದಾಮಿ ಪೂರಿ ಸಹ ಒಂದು. ಈಗ ಅದನ್ನು ಹೇಗೆ ತಯಾರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.. ಈ ಬಾದಾಮಿ ಪೂರಿ ತಯಾರಿಸಲು ಬೇಕಾಗುವ ಪದಾರ್ಥಗಳು ಈ ರೀತಿ ಇವೆ.




1. ಗೋಧಿ ಹಿಟ್ಟು, ಮೈದಾ ಹಿಟ್ಟು (ತಲಾ ಅರ್ಧದ) - ಕಾಲು ಕೆಜಿ
2. ತುಪ್ಪ - 2 ಟೇಬಲ್ ಸ್ಫೂನ್.
3. ಕುಂಕುಮ ಕೇಸರಿ - ಸ್ವಲ್ಪ
4. ಬೇಕಿಂಗ್ ಪೌಡರ್ - ಟೀ ಸ್ಫೂನ್.
5. ಏಲಕ್ಕಿ ಪುಡಿ - ಟೀ ಸ್ಫೂನ್
6. ಸಕ್ಕರೆ - ಕಾಲು ಕೆ.ಜಿ
7. ಎಣ್ಣೆ - ಬೇಯಿಸಲು ಬೇಕಿರುವಷ್ಟು.
8. ಬಾದಾಮಿ - 20
9. ಬಾದಾಮಿ, ಪಿಸ್ತಾ ಚೂರುಗಳು - ಸ್ವಲ್ಪ.

ತಯಾರಿಸುವ ವಿಧಾನ:
ಬಿಸಿ ನೀರಿನಲ್ಲಿ ಬಾದಾಮಿಯನ್ನು 20 ನಿಮಿಷಗಳ ಕಾಲ ನೆನೆಹಾಕಿ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಂಡು, ಬಿಸಿ ಮಾಡಿದ ನೀರನ್ನು ಹಾಕಿ ಗಟ್ಟಿ ಹಾಲಿನಂತೆ ಮಾಡಿಕೊಳ್ಳಬೇಕು. ಗೋಧಿ ಹಿಟ್ಟು ಮಿಶ್ರಣದಲ್ಲಿ ತುಪ್ಪ ಹಾಕಿ ಕಲೆಸಬೇಕು. ಬಳಿಕ ಬಾದಾಮಿ ಹಾಲು ಹಾಕಿ ಚಪಾತಿ ಹಿಟ್ಟಿನಂತೆ ಕಲೆಸಬೇಕು. ಹಿಟ್ಟಿನ ಮುದ್ದೆ ಮೇಲೆ ಒದ್ದೆ ಬಟ್ಟೆಯನ್ನು ಹಾಕಿ ಹದಿನೈದು ನಿಮಿಷ ಹಾಗೆಯೇ ಬಿಡಬೇಕು. ಇವನ್ನು ಉಂಡೆಗಳಂತೆ ಮಾಡಿಕೊಳ್ಳಬೇಕು. ಒಂದೊಂದು ಉಂಡೆಯನ್ನು ಪೂರಿಯಂತೆ ಮಾಡಿ ಅದಕ್ಕೆ ತುಪ್ಪ ಸವರಿ ತ್ರಿಕೋಣ ಆಕಾರ ಬರುವಂತೆ ಮಡಚಬೇಕು.

ಒಂದು ಬಟ್ಟಲಿನಲ್ಲಿ ಸಕ್ಕರೆ ಹಾಕಿ ಅದು ಮುಳುಗುವವರೆಗೂ ನೀರು ಹಾಕಿ ಕುದಿಸಬೇಕು. ದಾರದಂತೆ ಪಾಕ ಬಂದ ಬಳಿಕ ಕುಂಕುಮ ಕೇಸರಿ, ಏಲಕ್ಕಿಪುಡಿ ಹಾಕಿ ಬೆರೆಸಬೇಕು. ಬಾಣಲಿಯಲ್ಲಿ ನೀರು ಹಾಕಿ ಚೆನ್ನಾಗಿ ಬಾದಾಮಿ ಪೂರಿಗಳನ್ನು ಬೇಯಿಸಿ ಪಾಕದಲ್ಲಿ ಹಾಕಿ ಸ್ವಲ್ಪ ಸಮಯ ಬಿಟ್ಟು ತೆಗೆಯಬೇಕು. ಇವನ್ನು ಪ್ಲೇಟ್‌ನಲ್ಲಿ ಇಟ್ಟು ಬಾದಾಮಿ, ಪಿಸ್ತಾ ಚೂರುಗಳನ್ನು ಹರಡಿದರೆ ನೋಡಲು ಸೊಗಸಾಗಿ, ತಿನ್ನಲು ರುಚಿಯಾಗಿ ಇರುತ್ತವೆ.

No comments