Header Ads

test

ವೀರ್ಯ ತುಂಬಿದ ಬಲೂನ್‌ಗಳನ್ನು ಆ ವಿದ್ಯಾರ್ಥಿನಿ ಮೇಲೆ ಎಸೆದು ಆಚರಿಸಿಕೊಂಡ ಆ ವಿಕೃತಕಾಮಿ. ನೀಚ ಘಟನೆ.

ಸಮಾಜದಲ್ಲಿ ತಮ್ಮ ಸುತ್ತಲೂ ಇರುವ ಮಹಿಳೆಯರನ್ನು ಆಗಾಗ ಆ ದೃಷ್ಟಿಯಿಂದ ನೋಡುವವರು ಜೀವನದಲ್ಲಿ ಯಾವಾಗಲೂ ಬದಲಾಗಲ್ಲ. ತಮ ಮನೋಭಾವವನ್ನೂ ಬದಲಾಯಿಸಿಕೊಳ್ಳಲ್ಲ. ಸಂದರ್ಭ ಏನೇ ಆದರೂ ಸರಿ ಅವರನ್ನು ವೇದಿಸಲು, ಅವರ ಮೇಲೆ ಅತ್ಯಾಚಾರ ಎಸಗಲು ಕಾಮುಕರು ಸಿದ್ಧವಾಗಿರುತ್ತಾರೆ. ಇದರ ಜತೆಗೆ ಅವರು ಮಾಡುವ ಅಸಭ್ಯ ಚೇಷ್ಟೆಗಳು ಸಹ ಹೇಳಲಾರದಷ್ಟು ನೀಚವಾಗಿ ಇರುತ್ತವೆ. ಅಷ್ಟೆಲ್ಲಾ ದಾರುಣವಾಗಿ ಕೆಲವರು ವರ್ತಿಸುತ್ತಾರೆ. ದೆಹಲಿ ಯೂನಿವರ್ಸಿಟಿಯಲ್ಲೂ ಇಂತಹದ್ದೇ ಹೇಳಲಾರದ, ನಾಚಿಕೆಗೇಡಿನ ಸಂಗತಿಯೊಂದು ನಡೆದಿದೆ. ಅದೇನೆಂದರೆ.


ಹೋಳಿ ಹಬ್ಬ ಬಂದೇ ಬಿಟ್ಟಿದೆ. ಎತ್ತ ನೋಡಿದರೂ ಹಿರಿಕಿರಿಯರೆಲ್ಲರೂ ರಸ್ತೆ ಮೇಲೆ ಬಂದು ಒಬ್ಬರ ಮೇಲೆ ಒಬ್ಬರು ಬಣ್ಣಗಳನ್ನು ಎರಚಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ತಮಗೆ ಗೊತ್ತಿರುವರರ ಮೇಲೆ ಬಣ್ಣ ಎರಚಿ ಹೋಳಿ ಸಂಭ್ರಮದಲ್ಲಿ ಮುಳುಗುತ್ತಾರೆ. ಆದರೆ ದೆಹಲಿ ವಿಶ್ವವಿದ್ಯಾಲಯದ ಓರ್ವ ವಿದ್ಯಾರ್ಥಿ ಮಾತ್ರ ಹೋಳಿಯನ್ನು ಅಸಭ್ಯವಾಗಿ ಆಚರಿಸಿಕೊಂಡಿದ್ದಾನೆ. ಅದೇ ಕಾಲೇಜಿನಲ್ಲಿ ಓದುತ್ತಿರುವ ಟೋಲಿನೋ ಚಿಷಿ ಎಂಬ ವಿದ್ಯಾರ್ಥಿನಿ ಮೇಲೆ ವೀರ್ಯ ತುಂಬಿದ ಬಲೂನನ್ನು ಎಸೆದಿದ್ದಾನೆ. ಇದರಿಂದ ಅದು ಆಕೆಯ ಕಾಲಿನ ಹಿಂಭಾಗಕ್ಕೆ ಬಿದ್ದು ಒಡೆದಿದೆ.

ರೀತಿ ಬಲೂನ್ ಬೀಳುವ ಹೊತ್ತಿಗೆ ತನ್ನ ಮೇಲೆ ಯಾರೋ ಬಣ್ಣ ಎರಚಿದರು ಎಂದೇ ಟೊಲಿನೋ ಭಾವಿಸಿದರು. ಆದರೆ ಸುತ್ತಲೂ ಇದ್ದವರು ಗಮನಿಸಿದರೆ ಹೊರತು ಗೊತ್ತಾಗಲಿಲ್ಲ, ಅದು ವೀರ್ಯ ತುಂಬಿದ ಬಲೂನುಗಳೆಂದು. ಇದರಿಂದ ಆಕೆ ಒಮ್ಮೆಲೆ ಶಾಕ್‌ಗೆ ಒಳಗಾದರು. ಇದೇ ತಿಂಗಳು 24ರಂದು ಈ ಘಟನೆ ನಡೆದಿದೆ. ಆದರೆ ತಡವಾಗಿ ಬೆಳಕಿಗೆ ಬಂದಿದೆ. ಆಕೆ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಈ ಘಟನೆಯ ಬಗ್ಗೆ ಪೋಸ್ಟ್ ಮಾಡಿದ ಬಳಿಕ ಅದು ಈಗ ವೈರಲ್ ಆಗಿದೆ. ನಾಗಾಲ್ಯಾಂಡ್ ಮೂಲದ ಈಕೆ ಶಿಕ್ಷಣಕ್ಕಾಗಿ ದೆಹಲಿ ವಿಶ್ವವಿದ್ಯಾಲಯಕ್ಕೆ ಬಂದರೆ ಅಲ್ಲಿನ ವಿದ್ಯಾರ್ಥಿ ಈ ರೀತಿ ಮಾಡಿದ್ದಾನೆ. ನಿಜವಾಗಿ ಈ ರೀತಿಯ ಘಟನೆ ಯಾರಿಗೂ ಎದುರಾಗಬಾರದು. ಇಂತಹ ಅಸಭ್ಯಕರ ಕೆಲಸ ಮಾಡಿದಕ್ಕೆ ಆ ವಿಕೃತಕಾಮಿಗೆ ಕಠಿಣವಾಗಿ ಶಿಕ್ಷಿಸಬೇಕು..!

No comments