Header Ads

test

ಥೈರಾಯ್ಡ್, ಮಧುಮೇಹ, ಹೃದಯ ಸಮಸ್ಯೆಗಳಿಗೆ ರಾಮಬಾಣ ಹಸಿ ಕೊಬ್ಬರಿ..!

ಹಸಿ ಕೊಬ್ಬರಿಯನ್ನು ನಿತ್ಯ ನಾವು ಅಡುಗೆಯಲ್ಲಿ ಬಳಸುತ್ತಿರುತ್ತೇವೆ. ಕೊಬ್ಬರಿ ಚಟ್ನಿ, ಕೊಬ್ಬರಿ ಹಲ್ವಾದಂತಹ ತಿಂಡಿಗಳನ್ನು ತಿನ್ನುತ್ತೇವೆ. ಕೆಲವರು ಹಸಿ ಕೊಬ್ಬರಿಯನ್ನೂ ಹಾಗೆಯೇ ತಿನ್ನುತ್ತಾರೆ. ಹಸಿ ಕೊಬ್ಬರಿ ಕೇವಲ ರುಚಿಗಾಗಿ ಅಷ್ಟೇ ಅಲ್ಲ. ಅನೇಕ ಪೋಷಕಗಳ ಆಗರ. ಅದರಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಕೆಲವು ಮುಖ್ಯ ಪೋಷಕಾಂಶಗಳು ಸಿಗುತ್ತವೆ. ಹಸಿ ಕೊಬ್ಬರಿಯನ್ನು ನಿತ್ಯ ಸೇವಿಸುತ್ತಿದ್ದರೆ ಅದರಿಂದ ನಮ್ಮ ದೇಹಕ್ಕೆ ಪೋಷಕಾಂಶಗಳಷ್ಟೇ ಅಲ್ಲದೆ, ಹಲವು ವಿಧದ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಹಸಿ ಕೊಬ್ಬರಿಯಿಂದ ನಮಗೆ ಆಗುವ ಲಾಭಗಳು ಏನೂಂತ ಈಗ ತಿಳಿದುಕೊಳ್ಳೋಣ ಬನ್ನಿ..!
1. ಹಸಿ ಕೊಬ್ಬರಿ ನಿತ್ಯ ಯಾವುದೋ ಒಂದು ವಿಧದಲ್ಲಿ ತಿನ್ನುತ್ತಾ ಇದ್ದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇನ್‌ಫೆಕ್ಷನ್, ರೋಗಗಳು ಬರುವುದಿಲ್ಲ. ಆಂಟಿ ವೈರಲ್, ಆಂಟಿ ಬ್ಯಾಕ್ಟೀರಿಯಾ, ಆಂಟಿ ಫಂಗಲ್, ಆಂಟಿ ಪ್ಯಾರಾಸೈಟ್ ಗುಣಗಳು ಕೊಬ್ಬರಿಯಲ್ಲಿ ಹೇರಳವಾಗಿ ಇರುವುದರಿಂದ ಬ್ಯಾಕ್ಟೀರಿಯಾ, ವೈರಸ್‍ಗಳಿಂದ ರಕ್ಷಣೆ ಸಿಗುತ್ತದೆ. ಅವು ನಮ್ಮ ದೇಹದಲ್ಲಿ ಪ್ರವೇಶಿಸಿದರೆ ಯಾವುದೇ ವಿಧದಲ್ಲೂ ಉಳಿಯಲ್ಲ.

2. ಕ್ರೀಡಾಪಟುಗಳು, ನಿತ್ಯ ವ್ಯಾಯಾಮ ಮಾಡುವವರಿಗೆ, ದೇಹ ದಂಡಿಸುವವರಿಗೆ ಹಸಿ ಕೊಬ್ಬರಿ ಎಷ್ಟೋ ಉಪಯುಕ್ತ. ಹಸಿ ಕೊಬ್ಬರಿ ತಿನ್ನುವುದರಿಂದ ಶಕ್ತಿ ವೇಗವಾಗಿ ಸಿಗುತ್ತದೆ. ಇದರಿಂದ ಮತ್ತಷ್ಟು ಹೊತ್ತು ಕೆಲಸ ಮಾಡಿದರೂ ಆಯಾಸ ಆಗುವುದಿಲ್ಲ. ಹೆಚ್ಚಿನ ಶಕ್ತಿ ಸಿಗುತ್ತದೆ.

3. ಜೀರ್ಣ ಸಮಸ್ಯೆಗಳು ದೂರವಾಗುತ್ತವೆ. ಜೀರ್ಣಕೋಶ ಶುದ್ಧವಾಗುತ್ತದೆ. ಗ್ಯಾಸ್, ಅಸಿಡಿಟಿ, ಅಜೀರ್ಣ, ಮಲಬದ್ಧತೆಯಂತಹ ಸಮಸ್ಯೆಗಳು ಬರುವುದಿಲ್ಲ. ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.

4. ಮಧುಮೇಹ ಸಮಸ್ಯೆಯಿಂದ ನರಳುತ್ತಿರುವವರು ಹಸಿ ಕೊಬ್ಬರಿ ತಿಂದರೆ ಒಳಿತಾಗುತ್ತದೆ. ಇದರಿಂದ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬಂದು ಡಯಾಬಿಟೀಸ್ ನಿಯಂತ್ರಣಕ್ಕೆ ಬರುತ್ತದೆ.

5. ಹಲವು ವಿಧದ ಕ್ಯಾನ್ಸರ್‌ಗಳಿಗೆ ವ್ಯತಿರಿಕ್ತವಾಗಿ ಹೋರಾಡುವ ಔಷಧಿ ಗುಣಗಳು ಹಸಿ ಕೊಬ್ಬರಿಯಲ್ಲಿವೆ. ಹಸಿ ಕೊಬ್ಬರಿಯಲ್ಲಿನ ಆಂಟಿ ಆಕ್ಸಿಡೆಂಟ್‌ಗಳೂ ಕ್ಯಾನ್ಸರ್ ಕಣಗಳ ವೃದ್ಧಿಯನ್ನು ತಡೆಯುತ್ತದೆ.

6. ಕೆಟ್ಟ ಕೊಲೆಸ್ಟಾರಾಲ್ ಹೋಗಿ ಒಳ್ಳೆಯ ಕೊಲೆಸ್ಟಾರಾಲ್ ತಯಾರಾಗುತ್ತದೆ. ಇದರಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ. ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ರಕ್ತನಾಳಗಳಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.

7. ಥೈರಾಯ್ಡ್ ಸಮಸ್ಯೆಗಳಿರುವವರು ಹಸಿ ಕೊಬ್ಬರಿ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಥೈರಾಯ್ಡ್ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಅದರಿಂದಾಗುವ ಅನಾರೋಗ್ಯ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು.

8. ಮೂತ್ರಕೋಶದ ಸಮಸ್ಯೆಗಳು ಇರುವವರು ಸಹ ಹಸಿ ಕೊಬ್ಬರಿ ಉತ್ತಮ. ಮೂತ್ರ ಸುಸೂತ್ರವಾಗಿ ಹೊರಹೋಗುತ್ತದೆ. ಬ್ಲಾಡರ್ ಇನ್ಫೆಕ್ಷನ್ ಗುಣವಾಗುತ್ತದೆ. ಕಿಡ್ನಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ.

9. ಅಧಿಕ ತೂಕದ ಸಮಸ್ಯೆಯಿರುವರು ಹಸಿ ಕೊಬ್ಬರಿಯನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು. ಈ ರೀತಿ ಮಾಡುವುರಿಂದ ಕೊಬ್ಬು ಕರಗುತ್ತದೆ. ಈ ಮೂಲಕ ಅಧಿಕ ತೂಕ ಕಡಿಮೆಯಾಗುತ್ತದೆ.

10. ಚರ್ಮ, ಕೂದಲಿನ ಆರೋಗ್ಯ ಚೆನ್ನಾಗಿರುತ್ತದೆ. ಚರ್ಮದ ಮೇಲಿನ ಸುಕ್ಕುಗಳು ನಿವಾರಣೆಯಾಗುತ್ತವೆ. ಕೂದಲು ಸೊಂಪಾಗಿ, ದೃಢವಾಗಿ ಬೆಳೆಯುತ್ತವೆ.

No comments