Header Ads

test

ಆಸಿಡ್ ದಾಳಿ ಸಂತ್ರಸ್ತಗೆ ಬೆನ್ನೆಲುಬಾಗಿ ನಿಂತು ಅದ್ದೂರಿಯಾಗಿ ಮದುವೆ ಮಾಡಿದರು..!

ಆಕೆಯ ಹೆಸರು ಲಲಿತಾ ಬೆನ್ ಬನ್ಸಿ. ಅಲ್ಲಿಯವರೆಗೂ ಎಲ್ಲರಂತೆ ಆಕೆ ಸಹ ಆನಂದವಾಗಿ, ಹಾಯಾಗಿ ಜೀವನ ನಡೆಸುತ್ತಿದ್ದರು. ಆದರೆ ಒಂದು ದಿನ ಆಕೆ ಜೀವನ ಇದ್ದಕ್ಕಿದ್ದಂತೆ ತಲೆಕೆಳಗಾಯಿತು. ಆಸೆಗಳು ನುಚ್ಚುನೂರಾದವು. ಆಕೆಯ ಆಲೋಚನೆಗಳು ಮೂಕವಾದವು. ಇನ್ನು ಜೀವನದಲ್ಲಿ ಆನಂದ ಎಂಬ ಪದಗಳು ಸಹ ಕೇಳಲ್ಲ ಎಂದುಕೊಂಡಳು. ಯಾಕೆಂದರೆ ಆಕೆ ಮುಖ ನೋಡಲಾರದಷ್ಟು ಬದಲಾಗಿತ್ತು. ಆಕೆಯ ಬಂಧು ಒಬ್ಬ ಆಕೆಯ ಮೇಲೆ ದ್ವೇಷ ಬೆಳೆಸಿಕೊಂಡು ಆವೇಶದಲ್ಲಿ ಮಾಡಿದ ಆಸಿಡ್ ದಾಳಿಗೆ ಆಕೆಯ ಮುಖ ಸುಟ್ಟು ಹೋಗಿತ್ತು. ಇನ್ನೇನು ತನ್ನ ಮದುವೆಗೆ ಕೆಲವು ದಿನಗಳ ಮೊದಲೇ ಈ ಆಸಿಡ್ ದಾಳಿ ನಡೆದ ಕಾರಣ ಮದುವೆ ಸಹ ನಿಂತು ಹೋಯಿತು. ಏನು ಮಾಡಬೇಕು ಸಹ ಅರ್ಥವಾಗದ ಪರಿಸ್ಥಿತಿ. ದಿಕ್ಕು ತೋಚದಂತಾಯಿತು. ಮುಂಬೈನ ಒಂದು ಆಸ್ಪತ್ರೆಯಲ್ಲಿ ಸೇರಿಸಿ ಆಕೆ ವಿಶೇಷವಾಗಿ 17 ಶಸ್ತ್ರಚಿಕಿತ್ಸೆಗಳನ್ನು ಮಾಡಿದರು. ಆದರೂ ಆಕೆ ದೇಹ ಮೊದಲಿನಂತೆ ಆಗಲಿಲ್ಲ.ಇನ್ನು ಜೀವನವೆಲ್ಲಾ ನಿರಾಸಕ್ತಿಯಿಂದ ಕಳೆಯಬೇಕಾ ಎಂದುಕೊಳ್ಳುವ ಸಮಯದಲ್ಲಿ ಅಚಾನಕ್ ಆಗಿ ಒಂದು ರಾಂಗ್ ಕಾಲ್ ಮಾಡುವುದರಿಂದ ಆಕೆಗೆ ಪರಿಚಯವಾದ ರವಿಶಂಕರ್. ಆತನ ಪರಿಚಯದಿಂದ ನಿಜವಾದ ಪ್ರೀತಿ ಎಂದರೆ ಏನು ಎಂದು ಆಕೆಗೆ ಅರ್ಥವಾಯಿತು. ಎಲ್ಲೋ ಕಥೆಗಳಲ್ಲೋ ಸಿನಿಮಾಗಳಲ್ಲೋ ಮಾತ್ರ ಕಾಣಿಸುವ ಹೀರೋ ಕ್ಯಾರೆಕ್ಟರ್ ಕಣ್ಣಿನ ಮುಂದೆ ರವಿ ರೂಪದಲ್ಲಿ ಕಾಣಿಸಿದ. ಕೇವಲ ಒಂದು ಮಿಸ್ ಕಾಲ್‌ನಿಂದ ಪರಿಚಯವಾದ ರವಿ, ಲಲಿತಾ ಯಾರೋ ಏನೋ ಎಂದು ಗೊತ್ತಿಲ್ಲದೆ, ಆಕೆ ಹೇಗಿರುತ್ತಾಳೆ ಎಂದು ಗೊತ್ತಿದ್ದು ಸಹ ಪ್ರೀತಿಸಿದ. ಒಬ್ಬನ ಕೋಪಕ್ಕೆ ಬಲಿಯಾದ ಲಲಿತಾಳಿಗೆ ಪ್ರೀತಿಯ ರುಚಿ ತೋರಿಸಿದ. ಇಬ್ಬರೂ ಮದುವೆಯಾಗೋಣ ಎಂದು ನಿರ್ಣಯಿಸಿದರು. ಎಲ್ಲಾ ಓಕೆ ಆದರೂ ರವಿಶಂಕರ್ ತಾಯಿಯನ್ನು ಒಪ್ಪಿಸಲು ಸ್ವಲ್ಪ ಸಮಯ ಹಿಡಿಯಿತು. ಕೊನೆಗೂ ಹೇಗೋ ತಾಯಿಯನ್ನು ಒಪ್ಪಿಸಿದ.

ಈಗ ಇಪ್ಪತ್ತಾರು ವರ್ಷದ ಲಲಿತಾ ಬನ್ಸಾಲ್ ಮದುವೆ ಬಗ್ಗೆ ದೇಶದಾದ್ಯಂತ ಮಾತನಾಡುತ್ತಿದ್ದಾರೆ. ಬಡವರ ಮನೆಯ ಮಕ್ಕಳಾದ ರವಿ ಶಂಕರ್, ಲಲಿತಾ ವಿವಾಹಕ್ಕೆ ಬಹಳಷ್ಟು ಮಂದಿ ಗಣ್ಯರು ಹಾಜರಾಗಿ ಅವರನ್ನು ಹರಸಿದರು. ಆಡಿಡ್ ದಾಳಿಯಲ್ಲಿ ತನ್ನ ಮುಖ ಛಿದ್ರವಾದರೂ ತಡೆದುಕೊಂಡು ಹೊಸ ಜೀವನ ಆರಂಭಿಸುತ್ತಿರುವ ಲಲಿತಾ ವಿವಾಹಕ್ಕೆ ಹಲವು ಸಂಸ್ಥೆಗಳೂ ಆರ್ಥಿಕ ಸಹಾಯ ಮಾಡಿದವು.

ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರಂತೂ ಮುಂಬೈನಲ್ಲಿ ಒಂದು ಹೊಸ ಫ್ಲಾಟನ್ನು ಅವರಿಗೆ ಮದುವೆ ಉಡುಗೊರೆಯಾಗಿ ನೀಡಿದ.. ಎಲ್ಲರೂ ಲಲಿತಾ ಸುಂದರವಾಗಿಲ್ಲ ಎಂದರಾದರೂ ನನಗೆ ಆಕೆಯ ಮನಸು, ಹೃದಯ ಗೊತ್ತು. ನಾನು ಆ ಲಲಿತವಾದ, ಸ್ವಚ್ಛವಾದ ಪ್ರೀತಿಗೆ ವ್ಯಸನಿಯಾದೆ ಎಂದಿದ್ದಾನೆ ಮದುಮಗ ರವಿ. ತನ್ನ ಜೀವನಲ್ಲಿ ಇನ್ನು ಬೆಳಕೇ ಇಲ್ಲ ಎಂದುಕೊಂಡ ಆಕೆ, ರವಿಯೊಂದಿಗೆ ಹೆಜ್ಜೆ ಹಾಕುವ ಮೂಲಕ ಇಡೀ ಜಗತ್ತಿಗೆ ಬೆಳಕು ತೋರಿಸುವ ಆದರ್ಶ ಜೋಡಿಯಾಗಿದೆ. ಇವರಿಗೆ ’ಚಂದಮಾನ’ ಕಡೆಯಿಂದ ಶುಭಾಶಯಗಳು.

No comments