Header Ads

test

ಕೂದಲು ಉದುರದಂತೆ ಸೊಂಪಾಗಿ ಬೆಳೆಯಲು... ಬಳಸಿ ಎಳನೀರು.. ಅತ್ಯತ್ತಮ ರಿಸಲ್ಟ್

ಪ್ರಸ್ತುತ ಬದಲಾದ ಜೀವನಶೈಲಿ, ಕಲುಷಿತ ವಾತಾವರಣ, ಸೂಕ್ತ ಪೋಷಕಾಹಾರ ತಿನ್ನದಿರುವಂತಹ ಕಾರಣಗಳಿಂದ ವಯಸ್ಸಿನೊಂದಿಗೆ ಸಂಬಂಧ ಇಲ್ಲದಂತೆ ಹೆಣ್ಣು ಗಂಡು ಎಂಬ ಬೇಧಭಾವ ಇಲ್ಲದಂತೆ ಪ್ರತಿಯೊಬ್ಬರೂ ಕೂದಲು ಉದುರುವ ಸಮಸ್ಯೆಯಿಂದ ಬಳಸುತ್ತಿದ್ದಾರೆ. ಸಾಮಾನ್ಯವಾಗಿ ಕೂದಲು ಉದುರುವ ಸಮಸ್ಯೆಯಿಂದ ಹೊರಬರಲು ಅನೇಕ ಶಾಂಪೂಗಳೂ, ಎಣ್ಣೆಗಳು ಬಳಸುತ್ತಿರುತ್ತೇವೆ. ಆದರೂ ಹೇಳಿಕೊಳ್ಳುವಂತಹ ಫಲಿತಾಂಶ ಕಾಣಿಸಲ್ಲ. ಒಂದು ವೇಳೆ ಪ್ರತಿಫಲ ಇದ್ದರೂ ಅದು ತಾತ್ಕಾಲಿಕ ಮಾತ್ರ. ಆದರೆ ಕೆಲವು ಸಲಹೆಗಳ ಮೂಲಕ ಈ ಸಮಸ್ಯೆಯಿಂದ ಹೊರಬರಬಹುದು. ಈ ಸಮಸ್ಯೆಯಿಂದ ಹೊರಬರಲು ಎಳನೀರು ತುಂಬಾ ಸಹಕಾರಿ. ಅದು ಹೇಗೆ ಎಂಬುದನ್ನು ಈಗ ನೋಡೋಣ.


ಎಳನೀರನ್ನು ತಲೆ ನೆತ್ತಿ ಮೇಲೆ ಹಾಕಿ ವೃತ್ತಾಕಾರವಾಗಿ 10 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಆ ಬಳಿಕ ಕೂದಲ ಬುಡದಿಂದ ಕೊನೆಯವರೆಗೂ ಎಳನೀರಿನಿಂದ ಮಸಾಜ್ ಮಾಡಬೇಕು. 20 ನಿಮಿಷಗಳ ಕಾಲ ಆ ರೀತಿ ಮಾಡಬೇಕು. ಆ ಬಳಿಕ ಮೈಲ್ಡ್ ಶಾಂಪು ಬಳಸಿ ತಲೆಸ್ನಾನ ಮಾಡಬೇಕು.

ಆಪಲ್ ಸಿಡಾರ್ ವೆನಿಗಾರ್, ಎಳನೀರನ್ನು ಸಮಾನ ಭಾಗಗಳಾಗಿ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ತಲೆಗೆ ಚೆನ್ನಾಗಿ ಹಚ್ಚಿ 10 ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿನಿಂದ ಮೈಲ್ಡ್ ಶಾಂಪೂನೊಂದಿಗೆ ತಲೆಸ್ನಾನ ಮಾಡಬೇಕು. ಈ ರೀತಿ ವಾರಕ್ಕೆ ಎರಡು ಸಲ ಮಾಡುತ್ತಿರಬೇಕು.

ಒಂದು ಕಪ್ ಎಳನೀರಿಗೆ ಅರ್ಧ ಓಳು ನಿಂಬೆರಸ ಹಿಂಡಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ತಲೆಗೆ ಹಚ್ಚಿ 15 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮೈಲ್ಡ್ ಶಾಂಪೂನೊಂದಿಗೆ ತಲೆಸ್ನಾನ ಮಾಡಬೇಕು. ಈ ರೀತಿ ವಾರಕ್ಕೆ ಎರಡು ಸಲ ಮಾಡುತ್ತಿದ್ದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಕೂದಲ ಆರೋಗ್ಯಕ್ಕೆ ಇನ್ನೊಂದಿಷ್ಟು ಟಿಪ್ಸ್:

ಹದ ಬಿಸಿ ನೀರಿನಿಂದ ತಲೆ ತೊಳೆಯಿರಿ
ಚಳಿಗಾಲದಲ್ಲಿ ತಣ್ಣೀರಿನಿಂದ ತಲೆ ತೊಳೆಯುವ ಬದಲು ಉಗುರು ಬೆಚ್ಚಗಿನ ನೀರಿನಿಂದ ತಲೆ ತೊಳೆಯಿರಿ. ಉಗುರು ಬೆಚ್ಚಗಿನ ನೀರು ಚಳಿಗಾಲದಲ್ಲಿ ತಲೆಗೆ ಬಿದ್ದಾಗ ರಕ್ತ ಸಂಚಾರ ಚೆನ್ನಾಗಿ ಆಗುವುದು. ಇದು ಕೂದಲಿಗೆ ಒಳ್ಳೆಯದು.

ಕೂದಲು ಸೊಂಪಾಗಿ ಕಾಣಲು
ತಲೆಗೆ ಜೇನು ಹಚ್ಚಿ ಟವಲ್‌ ಸುತ್ತಿ ಅರ್ಧ ಗಂಟೆಯ ಬಳಿಕ ಹದ ಬಿಸಿ ನೀರಿನಿಂದ ತಲೆ ತೊಳೆಯರಿ. ಹೀಗೆ ಮಾಡಿದರೆ ಕೂದಲು ಸೊಂಪಾಗಿ ಕಾಣುವುದು.

ಡ್ರೈಯರ್‌ ಬಳಸಿ ಕೂದಲು ಒಣಗಿಸುತ್ತೀರಾ?
ಡ್ರೈಯರ್‌ ಬಳಸಿ ಕೂದಲು ಒಣಗಿಸುವುದಾದರೆ ಡ್ರೈಯರ್‌ ಅನ್ನು 15 ಸೆಂಟಿಮೀಟರ್‌ ದೂರ ಹಿಡಿಯಿರಿ. ಡ್ರೈಯರ್‌ ಬದಲು ಸೂರ್ಯನ ಬಿಸಿಲಿಗೆ ತಲೆ ಒಣಗಿಸಿದರೆ ಒಳ್ಳೆಯದು.

ಕಂಡೀಷನರ್‌ ಅನ್ನು ಹೀಗೆ ಬಳಸಿ
ಕಂಡೀಷನರ್‌ ಹಚ್ಚಿ ಒಂದು 2 ನಿಮಿಷ ಬಿಡಿ, ನಂತರ ಹದ ಬಿಸಿ ಅಥವಾ ತಣ್ಣೀರಿನಿಂದ ತಲೆ ತೊಳೆಯಿರಿ. ಇದರಿಂದ ಕೂದಲು ನುಣಪಾಗುವುದು.

No comments