Header Ads

test

ಮನೆಯಲ್ಲಿ ಚಪ್ಪಲಿ ಎಲ್ಲಿ ಬಿಡಬೇಕು ಅಂತ ಗೊತ್ತಾ.. ಎಲ್ಲೆಂದರೆಲ್ಲಿ ಬಿಟ್ಟರೆ ದರಿದ್ರ..!

ಕೆಲವು ಆಚಾರ ವಿಚಾರಗಳಲ್ಲಿ ಏನೋ ಒಂದು ನಿಗೂಢ ಅರ್ಥ ಅಡಗಿರುತ್ತದೆ. ಎಲ್ಲವನ್ನೂ ಮೂಢನಂಬಿಕೆ ಎಂದು ತಳ್ಳಿಹಾಕುವಂತಿಲ್ಲ. ಚಪ್ಪಲಿ ಬಳಸುವ ಬಗ್ಗೆ, ಅದನ್ನು ಎಲ್ಲಿ ಬಿಡಬೇಕು ಎಂಬುದರ ಬಗ್ಗೆ ಶಾಸ್ತ್ರಗಳು ಹಲವಾರು ಸಂಗತಿಗಳನ್ನು ಹೇಳುತ್ತವೆ. ಅದು ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ.

ಮನೆಯಲ್ಲಿ ನಾಲ್ಕು ಮಂದಿ ಇದ್ದರೆ ಆ ನಾಲ್ಕು ಮಂದಿಗೆ ಕನಿಷ್ಠ ಎರಡು ಜೊತೆ ಚಪ್ಪಲಿ ಎಂದರೂ ಒಟ್ಟು ಎಂಟು ಜತೆ ಚಪ್ಪಲಿ ಇರುತ್ತದೆ. ಆ ಚಪ್ಪಲಿಯಲ್ಲವನ್ನೂ ಮನೆ ಮುಂದೆ ಬಿಡುತ್ತಿರುತ್ತೇವೆ. ಬಾಗಿಲಿನ ಹೊರಗೆ ಚಪ್ಪಲಿ ಬಿಡುವುದು ಅಷ್ಟು ಸರಿಯಾದ ಕ್ರಮವಲ್ಲ. ಕೆಲವರು ಬಾಗಿಲಿನ ಪಕ್ಕಕ್ಕೆ ಚಪ್ಪಲಿ ಬಿಡುತ್ತಾರೆ. ಬಾಗಿಲಿನ ಮುಂದೆ ಬಿಟ್ಟರೂ, ಬಾಗಿಲಿನ ಪಕ್ಕದಲ್ಲಿ ಚಪ್ಪಲಿ ಬಿಟ್ಟರೂ ಕೂಡ ಅನಿಷ್ಟ ಎಂದು ಪಂಡಿತರು ಹೇಳುತ್ತಿದ್ದಾರೆ. ಬಾಗಿಲಿಗೆ ಕನಿಷ್ಠ ಹತ್ತು ಅಡಿ ದೂರದಲ್ಲಾದರೂ ಚಪ್ಪಲಿ ಬಿಡಬೇಕು ಇಲ್ಲದಿದ್ದರೆ ಬಾಗಿಲಿನ ಪಕ್ಕಕ್ಕೆ ಯಾವುದಾದರೂ ಸೆಲ್ಫ್‌ ಇದ್ದರೆ ಅದರಲ್ಲಿ ಹಾಕಿ ಡೋರ್ ಹಾಕುವುದು ಉತ್ತಮ ಎನ್ನುತ್ತಿದ್ದಾರೆ.




ಬಾಗಿಲಿನ ಮುಂದೆ ಚಪ್ಪಲಿ ಇರುವುದರಿಂದ ಮನೆಯಲ್ಲಿ ನೆಗಟೀವ್ ಎನರ್ಜಿ ಬರುತ್ತದೆ. ಸಹಜವಾಗಿ ಬಾಗಿಲಿನ ಮುಂದೆ ತುಳಸಿ ಕಟ್ಟೆ ಇರುತ್ತದೆ. ಆ ತುಳಸಿ ಕಟ್ಟೆ ಮತ್ತು ಬಾಗಿಲಿನ ನಡುವೆ ಚಪ್ಪಲಿ ಬಿಡುವುದರಿಂದ ತುಳಸಿ ಕಟ್ಟೆಯಿಂದ ಬರುವ ಪಾಸಿಟೀವ್ ಎನರ್ಜಿ ಚಪ್ಪಲಿ ಕಾರಣದಿಂದ ಅಲ್ಲೇ ನಿಲ್ಲುತ್ತದೆ ಎನ್ನುತ್ತಾರೆ ತಜ್ಞರು.

ಚಪ್ಪಲಿ ಹಾಕಿಕೊಂಡು ಊರೆಲ್ಲಾ ಸುತ್ತಾಡಿ ಬರುತ್ತಿರುತ್ತೇವೆ. ಚಪ್ಪಲಿ ಎಷ್ಟೇ ಬೆಲೆ ಬಾಳುವಂತಹವು ಆದರೂ ಅವುಗಳನ್ನು ಹಾಕಿಕೊಂಡು ಎತ್ತೆತ್ತಲೋ ಸುತ್ತಾಡುತ್ತೇವೆ. ಆದಕಾರಣ ಅವುಗಳ ಜತೆಗೆ ನೆಗಟೀವ್ ಎನರ್ಜಿ ಖಂಡಿತ ಇರುತ್ತದೆ. ಅದನ್ನು ಮನೆಗೆ ತಾರದೆ ಸ್ವಲ್ಪ ದೂರದಲ್ಲಿ ಇಟ್ಟರೆ ಒಳ್ಳೆಯದು ಎಂದು ಪಂಡಿತರು ಹೇಳುತ್ತಿದ್ದಾರೆ.

ಕೆಲವರು ಮನೆಯ ಒಳಕ್ಕೇ ಚಪ್ಪಲಿ ಹಾಕಿಕೊಂಡು ಹೋಗುತ್ತಿರುತ್ತಾರೆ. ಆ ರೀತಿ ಮನೆಯ ಒಳಗೆ ಚಪ್ಪಲಿ ಹಾಕಿಕೊಂಡು ಹೋಗುವುದು ದರಿದ್ರ. ಮನೆಯಲ್ಲಿ ದೇವತೆಗಳು ಸಂಚರಿಸುತ್ತಿರುತ್ತವೆ. ಎಲ್ಲೆಲ್ಲೋ ಓಡಾಡಿ ಚಪ್ಪಲಿಯೊಂದಿಗೆ ಮನೆಯ ಒಳಗೆ ಹೋಗುವುದರಿಂದ ಮನೆಯಲ್ಲಿರುವ ದೇವತೆಗಳು ಹೊರಗೆ ಹೋಗುತ್ತವೆ ಎಂಬ ಮಾತಿದೆ. ಹಾಗಾಗಿಯೇ ಮನೆಯ ಒಳಗೆ ಚಪ್ಪಲಿ ಹಾಕಿಕೊಂಡು ಹೋಗಬಾರದು. ಇದನ್ನು ಪಾಲಿಸಿದರೆ ಮನೆಯಲ್ಲಿ ಸಂತೋಷ, ಸಂಪತ್ತು ಇರುತ್ತದೆ ಎಂದು ಹಿರಿಯರು, ತಜ್ಜರು ಸಲಹೆ ನೀಡುತ್ತಿದ್ದಾರೆ.

No comments