Header Ads

test

ನಿಮ್ಮ ಹೆಸರು "H" ಅಕ್ಷರದಿಂದ ಆರಂಭವಾಗುತ್ತಾ? ನಿಮ್ಮ ಜೀವನದಲ್ಲಿ ನಡೆಯುವ ಕುತೂಹಲಕಾರಿ ಸಂಗತಿಗಳು..!

ಆಂಗ್ಲ ವರ್ಣಮಾಲೆಯ "H" ಅಕ್ಷರದಿಂದ ಆರಂಭವಾಗುವವರ ಗುಣಾವಗುಣಗಳು, ಲಕ್ಷಣಗಳು ಬಗ್ಗೆ ತಿಳಿದುಕೊಳ್ಳೋಣ. ಇವರಿಗೆ ವಿಪರೀತವಾದ ಬಯಕೆಗಳಿರುತ್ತವೆ. ಅವಕ್ಕೆ ಒಂದು ಮಿತಿಯೂ ಇರಲ್ಲ. ಇವರಿಗೆ ಉನ್ನತ ಮಟ್ಟಕ್ಕೆ ಏರಿ ಹೆಸರು ಸಂಪಾದಿಸಬೇಕು ಎಂಬ ಬಯಕೆ, ಹಾರಾಟ ಹೆಚ್ಚಾಗಿ ಇರುತ್ತದೆ. ಇವರಿಗೆ ಉಪಯೋಗ ಇದೆ ಅನ್ನಿಸಿದರೆ ಯಾವುದೇ ಕೆಲಸ ಮಾಡಲು ಸಿದ್ಧವಾಗಿ ಇರುತ್ತಾರೆ. ಇವರಲ್ಲಿ ನೈಪುಣ್ಯತೆ, ಚಾಕಚಕ್ಯತೆ ಹೆಚ್ಚಾಗಿ ಇದ್ದು ಸಮಯಕ್ಕೆ ತಕ್ಕಂತೆ ವರ್ತಿಸುತ್ತಾರೆ. ಕೆಲವು ಸಲ ಬೇರೆಯವರನ್ನು ಅಪಾರ್ಥ ಮಾಡಿಕೊಳ್ಳುವ ಪರಿಸ್ಥಿತಿ ಸಹ ಎದುರಾಗುತ್ತದೆ.


ಇವರು ಹೆಚ್ಚಾಗಿ ಯೋಜನೆಗಳ ಬಗ್ಗೆ ಆಲೋಚಿಸುತ್ತಾ ಇರುತ್ತಾರೆ. ಬಿಡುವಿಲ್ಲದಂತೆ ಆಲೋಚಿಸುತ್ತಿರುತ್ತಾರೆ. ಜೀವನದಲ್ಲಿ ಕಷ್ಟಪಡದೆ ಸಂತೋಷದಿಂದ ಜೀವನ ಕಳೆಯಬೇಕು ಎಂದು ಬಯಸುತ್ತಾರೆ. ಹಾಗಾಗಿ ಇವರು ದೈಹಿಕ ಶ್ರಮಕ್ಕಿಂತ ಮಾನಸಿಕ ಶ್ರಮ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ ಇವರು ಮಾನಸಿಕ ಶ್ರಮ ಹೆಚ್ಚಾಗಿರುವ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

"H" ಅಕ್ಷರದಿಂದ ಹೆಸರು ಆರಂಭವಾಗುವವರು ಹೆಚ್ಚಾಗಿ ಮಾನಸಿಕ ಶ್ರಮದಿಂದ ಯಶಸ್ಸು ಗಳಿಸುತ್ತಾರೆ. ಸಮಯಕ್ಕೆ ಅನುಕೂಲವಾಗಿ ಮಾತನ್ನು ಬದಲಾಯಿಸುತ್ತಾ ಗೆಲುವನ್ನು ಸಾಧಿಸುತ್ತಾ ಇರುತ್ತಾರೆ. ಇವರನ್ನು ಎಲ್ಲರೂ ಇಷ್ಟಪಡುತ್ತಾರೆ. ಎಲ್ಲರ ಕೈಲಿ ಒಳ್ಳೆಯ ಹೆಸರನ್ನೂ ಸಹ ಪಡೆಯಲು ಹೆಚ್ಚು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ.

ಇವರಿಗೆ ಸ್ವಾರ್ಥ ಸಹ ಸ್ವಲ್ಪ ಹೆಚ್ಚಾಗಿ ಇರುತ್ತದೆ. ಅದೇ ರೀತಿ ಅತಿ ಬುದ್ಧಿವಂತಿಕೆಯನ್ನು ಹೆಚ್ಚಾಗಿ ಪ್ರದರ್ಶಿಸುತ್ತಿರುತ್ತಾರೆ. ಇವರು ಯಾವುದಾದರೂ ವಿಷಯವನ್ನು ಕಲಿಯಬೇಕು ಎಂದುಕೊಂಡರೆ ತುಂಬಾ ಶೀಘ್ರವಾಗಿ ಗ್ರಹಿಸುತ್ತಾರೆ. ಯಾವಾಗಲೂ ಬಿಝಿಯಾಗಿ ಇದ್ದೀವಿ ಎಂದು ಬೇರೆಯವರು ತಿಳಿಯಬೇಕು ಎಂದು ಭಾವಿಸುತ್ತಾರೆ. ಅಷ್ಟೇ ಅಲ್ಲ ಎಲ್ಲರಲ್ಲೂ ಹೆಚ್ಚು ಕಷ್ಟಪಡುತ್ತಿರುವ ಭಾವವನ್ನು ಉಂಟು ಮಾಡುತ್ತಾರೆ. ಬೇರೆಯವರು ಹೇಳಿದ ಯಾವುದೇ ಸಂಗತಿಯನ್ನು ಇವರು ನಂಬಲ್ಲ. ಇವರು ತುಂಬಾ ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

No comments