Header Ads

test

ಟಾಯ್ಲೆಟ್ ಕಟ್ಟಿಸಲಿಲ್ಲ ಎಂದು.... ತಂದೆ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ 7 ವರ್ಷದ ಬಾಲಕಿ.!

ಟಾಯ್ಲೆಟ್ ಕಟ್ಟಿಸಲಿಲ್ಲ ಎಂದು ತಂದೆ ಮೇಲೆ ಪೊಲೀಸರಿಗೆ ದೂರು ನೀಡಿದಳು... ತಮಿಳುನಾಡು ಮೂಲದ 7 ವರ್ಷದ ಹನಿಫಾ... ಎಂದಿನಂತೆ ಶಾಲೆಗೆ ಹೋಗಿ... ಅಲ್ಲಿಂದ ಹಾಗೆಯೇ ಪೊಲೀಸ್ ಠಾಣೆಗೆ ಹೋಗಿ... ಅಲ್ಲಿ ಕರ್ತವ್ಯದಲ್ಲಿದ್ದ S.I ಭೇಟಿ ಆಗಿ.. ಆಂಟಿ ನಮ್ಮ ತಂದೆ ನನಗೆ ಮೋಸ ಮಾಡಿದ್ದಾರೆ... ಅವರ ವಿರುದ್ಧ ಕೇಸ್ ಹಾಕಬೇಕು ಎಂದಳು. ಇದರಿಂದ ಶಾಕ್ ಆದ ಎಸ್‍ಐ ಏನು ಎಂದು ಕೇಳಿದರೆ.



ನಾನು ಎಲ್‍ಕೆಜಿಯಲ್ಲಿ ಇದ್ದಾಗ... ಕ್ಲಾಸ್ ಫಸ್ಟ್ ಬಂದರೆ ಟಾಯ್ಲೆಟ್ ಕಟ್ಟಿಸುತ್ತೇನೆ ಎಂದು ಪ್ರಾಮಿಸ್ ಮಾಡಿದ... ನಾನು ಡ್ಯಾಡಿ ಹೇಳಿದಂತೆ ಕ್ಲಾಸ್ ಫಸ್ಟ್ ಬಂದೆ... ಆಗ ಟಾಯ್ಲೆಟ್ ಕಟ್ಟಿಸಲಿಲ್ಲ... 1ನೇ ತರಗತಿಯಲ್ಲಿ ಕ್ಲಾಸ್ ಫಸ್ಟ್ ಬಂದರೆ ಗ್ಯಾರಂಟಿ ಕಟ್ಟಿಸುತ್ತೇನೆ ಎಂದರು. ಸರಿ ಎಂದು 1ನೇ ಕ್ಲಾಸ್‌ನಲ್ಲೂ ಕೂಡ ನಾನೇ ಕ್ಲಾಸ್ ಫಸ್ಟ್ ಬಂದೆ... ಆದರೂ ಟಾಯ್ಲೆಟ್ ಕಟ್ಟಿಸಲಿಲ್ಲ. ನಾನೀಗ ಸೆಕೆಂಡ್ ಕ್ಲಾಸ್. ಶಾಲೆಯಲ್ಲೇನೋ ಪ್ರತಿ ಮನೆಯಲ್ಲೂ ಟಾಯ್ಲೆಟ್ ಕಡ್ಡಾಯವಾಗಿ ಇರಬೇಕು. ಆಗಲೇ ನಾವೆಲ್ಲಾ ನಿಜವಾದ ಪೌರರು ಎಂದು ಟೀಚರ್‌ಗಳು ಹೇಳುತ್ತಿರುತ್ತಾರೆ. ನಮ್ಮ ತಂದೆಯೇನೋ ಇನ್ನೂ ಅವರು ಕೊಟ್ಟ ಮಾತನ್ನು ನೆರವೇರಿಸಿಲ್ಲ. ಈ ವಿಷಯದಲ್ಲಿ ನಮ್ಮ ತಂದೆ ನನಗೆ ಚೀಟ್ ಮಾಡಿದಂತೆ ಅಲ್ಲವೇ..? ಅದಕ್ಕೇ ಅವರ ಮೇಲೆ ಕೇಸು ಹಾಕಿ ಎಂದಳು ಹನೀಫಾ.

ಇನ್ನು ವಿಧಿಯಿಲ್ಲದೆ ಆ ಎಸ್‍ಐ ಹನೀಫಾ ತಂದೆ ಹಸಾನುಲ್ಲಾಗೆ ಕರೆ ಮಾಡಿದರು. ಶಾಲೆಯಿಂದ ಮಗಳು ಇನ್ನೂ ಬರಲಿಲ್ಲ ಎಂದು ಆತಂಕಪಡುತ್ತಿದ್ದ ಆತ ಎದ್ದೆನೋ ಬಿದ್ದೆನೋ ಎಂದು ಪೊಲೀಸ್ ಠಾಣೆಗೆ ಬಂದು ಮಗಳನ್ನು ಎದೆಗೆ ಅಪ್ಪಿಕೊಂಡ. ಆಗ ಅಸಲಿ ವಿಷಯ ಗೊತ್ತಾಗಿ... ತಂದೆ ಸಹ ಶಾಕ್ ಆದ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ತನಗೆ ಟಾಯ್ಲೆಟ್ ಕಟ್ಟಿಸುವ ಆರ್ಥಿಕ ಶಕ್ತಿ ಇಲ್ಲ ಎಂದು ಹೇಳಿದ.

ಇದೇ ಸಂಗತಿ ಸ್ಥಳೀಯ ಮುನ್ಸಿಪಾಲಿಟಿ ಅಧಿಕಾರಿಗಳಿಗೆ ಗೊತ್ತಾಗಿ... ಅವರೇ ಹನೀಫಾ ಮನೆಯ ಬಳಿ ಟಾಯ್ಲೆಟ್ ಕಟ್ಟಿಸುತ್ತೇವೆ ಎಂದು ಭರವಸೆ ನೀಡಿದರು. ಈ ಬಗ್ಗೆ ಹನೀಫಾ ಖುಷಿಪಟ್ಟಿದ್ದಾಳೆ. ತಂದೆ ಮಾತ್ರ ಇನ್ನೂ ಶಾಕ್‌ನಲ್ಲೇ ಇದ್ದಾನೆ.

No comments