Header Ads

test

ಸಂಬಳದ ದುಡ್ಡದಲ್ಲಿ ಶುಕ್ರವಾರದ ದಿನ ಉಪ್ಪು ಕೊಳ್ಳುತ್ತಿದ್ದೀರಾ... ಕೊಂಡರೆ ಏನಾಗುತ್ತದೆ ಗೊತ್ತಾ..?7ನೆಯದನ್ನು ಓದಿದರೆ ಮತಿ ಹೋಗುತ್ತದೆ..!

ಕೆಲವು ಆಚಾರ ವಿಚಾರಗಳನ್ನು ಹಿರಿಯರು ಅನಾದಿಕಾಲದಿಂದಲೂ ಪಾಲಿಸುತ್ತಾ ಬಂದಿದ್ದಾರೆ. ಅವುಗಳ ಹಿನ್ನೆಲೆ ಏನೇ ಆದರೂ ನಮ್ಮ ಆರೋಗ್ಯದ ದೃಷ್ಟಿಯಿಂದ ಅವನ್ನು ಪಾಲಿಸಲಾಗುತ್ತದೆ ಎಂಬುದನ್ನು ಗ್ರಹಿಸಬೇಕು. ಅದನ್ನು ಮೂಢನಂಬಿಕೆ ಎಂದು ತಳ್ಳಿಹಾಕುವಂತಿಲ್ಲ. ಅಂತಹ ಕೆಲವು ಆಚಾರಗಳು ಇಲ್ಲಿವೆ ನೋಡಿ. ಇವನ್ನು ಪಾಲಿಸುವುದರಿಂದ ಕೆಟ್ಟದ್ದು ಆಗದಿದ್ದರೂ ಒಳ್ಳೆಯದಂತೂ ಆಗುತ್ತದೆ. ಮೂಢನಂಬಿಕೆ ಎಂದು ಭಾವಿಸದಿದ್ದರೆ ಸಾಕು.

ಮಹಿಳೆಯರು ಕೆಲವು ಕೆಲಸಗಳನ್ನು ಮಾಡಬೇಕು ಕೆಲವು ಕೆಲಸಗಳನ್ನು ಮಾಡಬಾರದು ಎಂದು ಹಿರಿಯರು ಪದೇ ಪದೇ ಹೇಳುತ್ತಿರುತ್ತಾರೆ. ಇದೆಲ್ಲಾ ಮೂಢನಂಬಿಕೆ ಎಂದುಕೊಳ್ಳುತ್ತೇವೆ. ಆದರೆ ಎಲ್ಲವೂ ಅಲ್ಲದಿದ್ದರೂ ಕೆಲವು ಕೆಲಸಗಳನ್ನು ಆರೋಗ್ಯದ ದೃಷ್ಟಿಯಿಂದ ಮಾಡಬಾರದು ಎಂದು ಹಿರಿಯರು ಆಲೋಚಿಸಿ ಹೇಳಿರುತ್ತಾರೆ.



ಹಾಗಿದ್ದರೆ ಅಂತಹನ್ನು ಆಚರಿಸುವುದರಿಂದ ನಮಗೆ ಬಹಳಷ್ಟು ಉಪಯೋಗಗಳು ಆಗುತ್ತವೆ. ಅವು ಏನು ಎಂಬುದನ್ನು ಈಗ ನೋಡೋಣ...

* ಮಹಿಳೆಯರು ಕುಂಬಳಕಾಯಿಯನ್ನು ಹೊಡೆಯಬಾರದು. ಆ ರೀತಿ ಮಾಡುವುದರಿಂದ ಗರ್ಭದ ಚೀಲ ಜಾರುವ ಅವಕಾಶಗಳು ಹೆಚ್ಚಾಗಿ ಇರುತ್ತವೆ.
* ಮಹಿಳೆಯರು ರಾತ್ರಿ ಹೊತ್ತು ಬಳೆ, ಓಲೆಗಳನ್ನು ತೆಗೆಯಬಾರದು.
* ಮೃತಪಟ್ಟವರ ಅಂತ್ಯಕ್ರಿಯೆಗೆ ಹೋಗಿ ಮತ್ತೆ ಬರುವಾಗ ಹೋಗಿ ಬರುತ್ತೇನೆ ಎಂದು ಹೇಳಬಾರದು. ದುಃಖ ವಿಚಾರಿಸಲು ಬಂದವರನ್ನು ಮನೆಗೆ ಆಹ್ವಾನಿಸಬಾರದು. ಆ ರೀತಿ ಮಾಡಿದರೆ ಪರೋಕ್ಷವಾಗಿ ನಾವು ಅಶುಭಗಳನ್ನು ಬಯಸಲು ನಾಂದಿಯಾಗುತ್ತದೆ.
* ಇನ್ನೊಬ್ಬರು ಧರಿಸಿದ ಹೂಗಳನ್ನು ಬೇರೆಯವರು ಮುಡಿದುಕೊಳ್ಳಬಾರದು. ಅದೇ ರೀತಿ ಕುಂಕುಮವನ್ನೂ ಇಟ್ಟುಕೊಳ್ಳಬಾರದು.
* ಮದುವೆಯಾದ ಮಹಿಳೆಯರು ಕಪ್ಪು ಬಣ್ಣದ ವಸ್ತುಗಳು, ಬಟ್ಟೆಗಳನ್ನು ಧರಿಸಬಾರದು.
* ಮನೆಯಲ್ಲಿರುವ ಉಪ್ಪು, ಮೆಣಸಿನಕಾಯಿ, ಹುಣಸೆಹಣ್ಣು, ಮೊಟ್ಟೆಯಂತಹ ವಸ್ತುಗಳನ್ನು ಯಾರಿಗೆ ನೀಡಿದರೂ ಕೈಯಲ್ಲಿ ಕೊಡಬಾರದು. ಕೆಳಗೆ ಇಡಿ ಅವರೇ ತೆಗೆದುಕೊಳ್ಳುತ್ತಾರೆ.
* ಶುಕ್ರವಾರದ ದಿನ ಸಂಬಳ ಬಂದ ಕೂಡಲೆ ಹಣದಿಂದ ಮೊಟ್ಟಮೊದಲ ಸಲ ಉಪ್ಪು ಕೊಳ್ಳುವುದರಿಂದ ಹಣ ಹಾಗೆಯೇ ಸ್ವಲ್ಪ ಸ್ವಲ್ಪ ಹರಿದು ಬರುವ ಅವಕಾಶ ಹೆಚ್ಚು.
* ಮನೆಯಲ್ಲಿ ಸಂಗ್ರಹವಾಗಿರುವ ಧೂಳು, ಜೇಡರಬಲೆ ಯಂತಹವು ದರಿದ್ರ ಇದ್ದ ಹಾಗೆ. ಹಾಗಾಗಿ ಮನೆಯನ್ನು ಹತ್ತು ದಿನಗಳಿಗೊಮ್ಮ ಮಂಗಳ, ಶುಕ್ರವಾರ ಅಲ್ಲದೆ ಉಳಿದ ದಿನಗಳಲ್ಲಿ ಸ್ವಚ್ಛಗೊಳಿಸಿಕೊಳ್ಳಬೇಕು.

No comments