Header Ads

test

ಈತ 60 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ ಗೊತ್ತೇ..!?

ಒಂದೇ ಒಂದು ದಿನ ಸ್ನಾನ ಮಾಡದಿದ್ದರೂ ಕೆಟ್ಟ ವಾಸನೆ ಬರುತ್ತದೆ. ಇನ್ನು 60 ವರ್ಷಗಳು ಎಂದರೆ ಹೇಗಿರುತ್ತದೆ!? ಇಷ್ಟಕ್ಕೂ ಅಷ್ಟು ವರ್ಷಗಳ ಕಾಲ ಸ್ನಾನ ಮಾಡದೆ ಯಾರಾದರೂ ಇರುತ್ತಾರಾ...? ನಿಜವಾಗಿಯೂ ಅಂತಹವರು ಇದ್ದರೆ ಅವರ ಬಳಿ ಹೋಗಬೇಕೆಂದರೇನೇ ಸಾಹಸ ಮಾಡಬೇಕು. ಯಾಕೆಂದರೆ ಕೋಟ್ಯಂತರ ಬ್ಯಾಕ್ಟೀರಿಯಾ ಆ ವ್ಯಕ್ತಿಯ ಸುತ್ತಲೂ ಇರುತ್ತವೆ. ಇದರಿಂದ ಆ ವಾತಾವರಣದಲ್ಲಿ ಇರುವ ಗಾಳಿ ಉಸಿರಾಡಿದರೂ ಸಾಕು, ರೋಗಗಳು ಬರುತ್ತವೆ. ಆದರೂ...ಅಷ್ಟೆಲ್ಲಾ ವರ್ಷಗಳ ಕಾಲ ಸ್ನಾನ ಮಾಡದ ವ್ಯಕ್ತಿ ಇದ್ದಾರಾ..? ಹೌದು. ಆದರೆ ನಮ್ಮ ದೇಶದಲ್ಲಿ ಅಲ್ಲ ಬಿಡಿ. ಇರಾನ್‌ನಲ್ಲಿ..!


ಆತನ ಹೆಸರು ಅಮೌ ಹಾಜಿ. ಇರುವುದು ಇರಾನ್‌ನಲ್ಲಿ. ಬಹಳ ನಿರ್ಜನ ಪ್ರದೇಶದಲ್ಲಿ ಒಬ್ಬನೇ ಗುಹೆಯಲ್ಲಿ ಇರುತ್ತಾನೆ. ಈತ ಕಳೆದ 60 ವರ್ಷಗಳಿಂದ ಸ್ನಾನ ಮಾಡಲಿಲ್ಲವಂತೆ. ಇದರಿಂದಾಗಿ ದೇಹವೆಲ್ಲಾ ಸುಟ್ಟ ಇದ್ದಲಿನಂತಿರುತ್ತದೆ. ಧೂಳಿನಿಂದ ಕೂಡಿರುತ್ತಾನೆ. ತಲೆಕೂದಲು ಗಟ್ಟಿಯಾಗಿ ಅಂಟಿಕೊಂಡಿರುತ್ತದೆ. ಆದರೆ ಈತ ಏನು ತಿನ್ನುತ್ತಾನೋ ಏನು ತಿನ್ನಲ್ಲವೋ ಗೊತ್ತಿಲ್ಲ. ಆದರೂ ಧೂಮಪಾನವನ್ನಂತೂ ಮಾಡುತ್ತಾನೆ. ಅದೂ ಸಹ ಪ್ರಾಣಿಗಳ ಮಲವನ್ನು ಒಣಗಿಸಿ ಪುಡಿ ಮಾಡಿ ಅದನ್ನು ಪೈಪ್‌ನಲ್ಲಿ ಹಾಕಿಕೊಂಡು ಹೊಗೆ ಸೇದುತ್ತಾನೆ.

ಸುತ್ತಲೂ ನಿರ್ಜನ ಪ್ರದೇಶ. ಒಬ್ಬನೇ ಇರುತ್ತಾನೆ. ಒಂದು ಚಿಕ್ಕ ಗುಹೆಯಲ್ಲಿ ವಾಸ. ಅದರಲ್ಲಿ ಬೋರ್ ಆದರೆ ಹೊರಗೆ ಬರುತ್ತಾನೆ. ಆಗಾಗ ಆ ದಾರಿಯಲ್ಲಿ ಜನ ಹೋಗುತ್ತಾರೆ. ಆದರೂ ಆತ ಯಾರು, ಹಾಗೇಕಿದ್ದಾನೆ ಎಂದು ಯಾರೂ ತಲೆಕೆಡಿಸಿಕೊಳ್ಳಲ್ಲ. ಇತ್ತೀಚೆಗೆ ಯಾರೋ ಈತನ ಫೋಟೋ ತೆಗೆದ ಬಳಿಕ ಆತನ ವಿವರಗಳು ಬಾಹ್ಯ ಜಗತ್ತಿಗೆ ಗೊತ್ತಾದವು. ಇದರಿಂದ ಇಷ್ಟಕ್ಕೂ ಈತ ಯಾರು..? ಎಂಬ ಬಗ್ಗೆ ಅಲ್ಲಿನವರು ಕೇಳಲು ಶುರುಮಾಡಿದರು. ಅವರಿಗೆ ಉತ್ತರ ಸಿಗುತ್ತದೋ, ಇಲ್ಲವೋ ಕಾದು ನೋಡಬೇಕು..!

No comments